ಬೆಂಗಳೂರು: ಪ್ರತಿ ವರ್ಷ ತಮ್ಮ ಆಸ್ತಿ ವಿವರಗಳನ್ನು ಘೋಷಿಸಬೇಕಿರುವ ಬಿಬಿಎಂಪಿ ಸದಸ್ಯರು ಹೆಚ್ಚಿನ ಆಸ್ತಿ ವಿವರ ಘೋಷಣೆಗೆ ಆಸಕ್ತಿ ತೋರುತ್ತಿಲ್ಲ.
ಆಸ್ತಿ ವಿವಿರ ಘೋಷಣೆ ಮಾಡದ ಪಾಲಿಕೆ ಸದಸ್ಯರ ಪಟ್ಟಿಯಲ್ಲಿ ಕಾಡು ಗೋಡಿ ವಾರ್ಡ್ ಸದಸ್ಯರಾಗಿ ಮುಂದುವರಿಯುತ್ತಿರುವ ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ, ಕೆ.ಆರ್.ಪುರಂ ವಾರ್ಡ್ ಸದಸ್ಯರಾಗಿ ರುವ ಶಾಸಕಿ ಕೆ.ಪೂರ್ಣಿಮಾ, ಮಾಜಿ ಮೇಯರ್‌ಗಳಾದ ಪದ್ಮಾವತಿ ಮತ್ತು ಸಂಪತ್ ರಾಜ್ ಸೇರಿದಂತೆ ಹಲವು ಸ್ಥಾಯಿ ಸಮಿತಿ ಅಧ್ಯಕ್ಷರ ಹೆಸರುಗಳು ಕಾಣಬಹುದಾಗಿದೆ.
1984ರ ಲೋಕಾಯುಕ್ತ ಕಾಯ್ದೆಗೆ 2010ರಲ್ಲಿ ತಿದ್ದುಪಡಿ ಮಾಡುವುದರ ಮೂಲಕ ಕೇವಲ ಎಂಪಿ, ಎಂಎಲ್‌ಎ, ಎಂಎಲ್‌ಸಿ ಮತ್ತು ರಾಜ್ಯಸಭಾ ಸದ್ಯಸರಿಗಿದ್ದ ಆಸ್ತಿ ವಿವರ ಸಲ್ಲಿಕೆ ಕಾನೂನು ಜಿಪಂ,ತಾಪಂ, ನಗರಸಭೆ, ಪುರಸಭೆ, ಪಪಂ ಮತ್ತು ಮಹಾನಗರ ಪಾಲಿಕೆ ಸದಸ್ಯರಿಗೂ ವಿಸ್ತರಣೆ ಮಾಡಲಾಗಿದೆ.
ಈ ಸಂಬಂಧ ಲೋಕಾಯುಕ್ತ ಕೋರ್ಟ್ ಸ್ಪಷ್ಟ ನಿರ್ದೇಶನ ವಿದ್ದರೂ ಬಿಬಿಎಂಪಿ ಪಾಲಿಕೆ ಸದಸ್ಯರು ಮಾತ್ರ ತಲೆ ಕೆಡಿಸಿ ಕೊಂಡಿರಲಿಲ್ಲ. ಬಳಿಕ ಸಾಮಾಜಿಕ ಕಾರ್ಯಕರ್ತ ಎಚ್.ಎಂ. ವೆಂಕಟೇಶ್ ಪಾಲಿಕೆ ಸದಸ್ಯರ ಆಸ್ತಿ ವಿವರ ಸಲ್ಲಿಕೆ ನಿಯಮ ಉಲ್ಲಂ ಘನೆ ಬಗ್ಗೆ 2019ರ ಜೂನ್ ತಿಂಗಳಲ್ಲಿ ಲೋಕಾಯುಕ್ತಗೆ ದೂರು ನೀಡಿದ್ದರು.
ದೂರು ಪರಿಶೀಲನೆ ಬಳಿಕ, ಮೂರುವಾರ ಕಾಲಾವಕಾಶ ನೀಡಿ ಎಲ್ಲಾ ಸದಸ್ಯರು ಕಡ್ಡಾಯವಾಗಿ ಆಸ್ತಿ ವಿವರ ಸಲ್ಲಿಸುವಂತೆ ಜು. 7 ರಂದು ಆದೇಶ ನೀಡಿತ್ತು. ಇಷ್ಟಾದರೂ ಈವ ರೆಗೆ ತಮ್ಮ ಆಸ್ತಿ ವಿವರಗಳನ್ನು ಸಲ್ಲಿ ಸಲು ಪಾಲಿಕೆ ಸದಸ್ಯರು ಮುಂದಾಗುತ್ತಿಲ್ಲ. ಆಸ್ತಿ ವಿವರ ಸಲ್ಲಿಸದ ಪಾಲಿಕೆ ಸದಸ್ಯರ ಪೈಕಿ ಶೇ.70ರಷ್ಟು ಬಿಜೆಪಿ ಸದಸ್ಯರೇ ಇರು ವುದು ಗಮನಾರ್ಹ ವಾಗಿದೆ. ಶೀಘ್ರ ಎಲ್ಲಾ ಜಿಲ್ಲೆಗಳ ಜನ ಪ್ರತಿನಿಧಿಗಳ ಆಸ್ತಿ ವಿವರ ಪಡೆಯು ವಂತೆ ಲೋಕಾಯುಕ್ತ ನ್ಯಾಯಾಲಯ ಜಿಪಂ ಸಿಇಒಗಳಿಗೆ ನಿರ್ದೇಶನ ನೀಡಿದೆ.
-ಲೋಕೇಶ್ ರಾಮ್