Advertisement

BJP ಬರ ಅಧ್ಯಯನ ಪ್ರವಾಸದಲ್ಲಿ ಸ್ವಪಕ್ಷ ನಾಯಕರ ಹೊಡೆದಾಟ!; ಕಪಾಳಮೋಕ್ಷ

07:43 PM Nov 09, 2023 | Team Udayavani |

ರಾಮನಗರ: ಬಿಜೆಪಿ ಬರ ಅಧ್ಯಯನ ಮಾಡುವ ವೇಳೆ ಸ್ವಪಕ್ಷ ನಾಯಕ -ಮುಖಂಡನ ನಡುವೆಯೇ ಗಲಾಟೆ ನಡೆದ ಘಟನೆ ವಿಭೂತಿ ಕೆರೆ ಗ್ರಾಮದಲ್ಲಿ ಗುರುವಾರ ನಡೆದಿದೆ.

Advertisement

ವಿಧಾನಪರಿಷತ್ ಸದಸ್ಯ ಆ. ದೇವೇಗೌಡ ಹಾಗೂ ಚನ್ನಪಟ್ಟಣ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಜಯರಾಮ್ ನಡುವೆ ಗಲಾಟೆ ನಡೆದಿದೆ. ಗಲಾಟೆ ವೇಳೆ ಜಯರಾಮ್ ಕಾಪಾಳಕ್ಕೆ ಆ. ದೇವೇಗೌಡ ಅವರು ಬಾರಿಸಿದ್ದಾರೆ.

ಬರ ಅಧ್ಯಯನಕ್ಕೆ ವಿಭೂತಿಕೆರೆ ಗ್ರಾಮಕ್ಕೆ ಆಗಮಿಸಿದ ಬಿಜೆಪಿ ತಂಡ ಆಗಮಿಸಿದ್ದ ವೇಳೆ ಪದವೀಧರ ಕ್ಷೇತ್ರದ ಚುನಾವಣೆ ವಿಚಾರಕ್ಕೆ ಇಬ್ಬರು ನಾಯಕರು ಪರಸ್ಪರ ಕೈಕೈ ಮಿಲಾಯಿಸಿಕೊಂಡಿದ್ದಾರೆ ಎನ್ನಲಾಗಿದ್ದು ಬಳಿಕ ಇಬ್ಬರನ್ನೂ ಸ್ಥಳೀಯ ಮುಖಂಡರು ಸಮಾಧಾನಪಡಿಸಿದ್ದಾರೆ.

ರಾಮನಗರದಲ್ಲಿ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಬರ ಅಧ್ಯಯನ ಪ್ರವಾಸ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.