ಚಿಕ್ಕಮಗಳೂರು: ಕಡೂರು ಕ್ಷೇತ್ರದ ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಅವರ ಗೆಲುವಿಗಾಗಿ ತನ್ನ ಸಂಪೂರ್ಣ ಆಸ್ತಿಯನ್ನೇ ಬಾಜಿ ಕಟ್ಟಲು ಮುಖಂಡರೊಬ್ಬರು ಮುಂದಾಗಿದ್ದಾರೆ.
ಕಡೂರು ತಾಲೂಕಿನ ನೀಲೇ ಗೌಡಲ ಕೊಪ್ಪಲು ಗ್ರಾಮದಲ್ಲಿ ಹನುಮಂತಪ್ಪ ಎನ್ನುವವರು, ಒಂದು ಕೋಟಿ ಎರಡು ಕೋಟಿನೂ ಅಲ್ಲ ಬಾಜಿ ಕಟ್ಟೋರು ಬನ್ನಿ. ಇಡೀ ನನ್ನ ಆಸ್ತಿಯನ್ನೇ ಬಾಜಿ ಕಟ್ತೀನಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ.
ಯಾರು ಬೇಕಾದರೂ ಚಾಲೆಂಜ್ ಮಾಡಿದರೆ ಮಾಡಿ, ಎಂದು ಬಿಜೆಪಿ ಮುಖಂಡ ಹನುಮಂತಪ್ಪ ಬೆಳ್ಳಿ ಪ್ರಕಾಶ್ ಪರ ಭರ್ಜರಿ ಬ್ಯಾಟಿಂಗ್ ಮಾಡಿ ಚಾಲೆಂಜ್ ಮಾಡೋರು ಬರಲಿ ನನ್ನ ಆಸ್ತಿಯ ಹಕ್ಕುಪತ್ರಕ್ಕೆ ಸಹಿ ಮಾಡಿ ಕೊಡುತ್ತೇನೆ ಎಂದಿದ್ದಾರೆ.
2018 ರಲ್ಲಿ ಬೆಳ್ಳಿ ಪ್ರಕಾಶ್ ಅವರು ಜೆಡಿಎಸ್ ಅಭ್ಯರ್ಥಿಯಾಗಿದ್ದ ವೈ.ಎಸ್.ವಿ.ದತ್ತ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರು. ದತ್ತ ಅವರು ಈ ಬಾರಿ ಕಾಂಗ್ರೆಸ್ ಸೇರ್ಪಡೆಯಾಗಿದ್ದು ಅಭ್ಯರ್ಥಿಯಾಗುವ ಸಾಧ್ಯತೆಗಳು ದಟ್ಟವಾಗಿದೆ.