ತಾಳಿಕೋಟೆ: ತಾಳಿಕೋಟೆ ಪಟ್ಟಣ ಸ್ವತ್ಛತೆಗೆ ನಾಗರಿಕರು ಆದ್ಯತೆ ನೀಡಬೇಕು. ಪುರಸಭೆಯಿಂದ ಬರುವ ಕಸ ವಿಲೇವಾರಿ ವಾಹನದಲ್ಲಿಯೇ ಕಸ ಹಾಕಿ ಸಹಕರಿಸಿದರೆ ಸುಂದರ ಪಟ್ಟಣವನ್ನಾಗಿ ಮಾಡಲು ಸಾಧ್ಯವಾಗುತ್ತದೆ ಎಂದು ಪುರಸಭೆ ನೂತನ ಮುಖ್ಯಾಧಿಕಾರಿ ಸುರೇಶ ನಾಯಕ ಹೇಳಿದರು.
ಬುಧವಾರ ಪುರಸಭೆಯಲ್ಲಿ ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ ಅವರು, ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಅವರು ತಾಳಿಕೋಟೆ ಪಟ್ಟಣದ ಅಭಿವೃದ್ಧಿ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡು ಕೆಲಸಗಳನ್ನು ಮಾಡುತ್ತಿದ್ದಾರೆ. ಅವರಿಗೆ ಪುರಸಭೆಯ ಆಡಳಿತ ಮಂಡಳಿ ಹಾಗೂ ಸರ್ವ ಸದಸ್ಯರುಗಳು ಸಹಕಾರ ನೀಡುತ್ತ ಸಾಗಿದಂತೆ ಮುಂದೆಯೂ ಕೂಡಾ ಎಲ್ಲ ರೀತಿಯಿಂದ ಸಹಕಾರ ನೀಡಿ ಅಭಿವೃದ್ಧಿ ಕಾರ್ಯಗಳಿಗೆ ಕೈ ಜೋಡಿಸಬೇಕು ಎಂದರು.
ಸಿಬ್ಬಂದಿಗಳು ಹಿಂದೆ ಏನು ಕೆಲಸ ಮಾಡಿದ್ದೀರಿ ಎಂಬುವುದಕ್ಕಿಂತ ಮುಂದೆ ಯಾವ ರೀತಿ ಕೆಲಸ ಕಾರ್ಯಗಳನ್ನು ಮಾಡಬೇಕು ಎಂಬುದರ ಬಗ್ಗೆ ಗಮನ ನೀಡಬೇಕು. ಸಾರ್ವಜನಿಕರಿಗೆ ಸ್ವತ್ಛತೆ ಬಗ್ಗೆ ಅರಿವು ಮೂಡಿಸುವುದು ಮತ್ತು ಪುರಸಭೆಯ ಬಾಕಿ ವಸೂಲಾತಿ, ಇನ್ನಿತರ ಅಭಿವೃದ್ಧಿ ದೃಷ್ಟಿಕೋನ ಇಟ್ಟುಕೊಂಡು ಕೆಲಸ ಮಾಡಬೇಕೆಂದು ಸಿಬ್ಬಂದಿಗೆ ಹೇಳಿದರು.
ಈ ವೇಳೆ ನೂತನವಾಗಿ ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಸುರೇಶ ನಾಯಕ ಅವರಿಗೆ ಸಿಬ್ಬಂದಿ ಸ್ವಾಗತ ಕೊರಿದರಲ್ಲದೇ ವರ್ಗಾವಣೆಗೊಂಡ ಮುಖ್ಯಾಧಿಕಾರಿ ಬಿ.ಟಿ. ಬಂಡಿವಡ್ಡರ ಅವರಿಗೆ ಬೀಳ್ಕೋಟ್ಟರು.
ಕಂದಾಯ ಅಧಿಕಾರಿ ಎನ್.ಎಸ್. ಪಾಟೀಲ, ಸಿದ್ರಾಯ ಕಟ್ಟಿಮನಿ, ಸಿದ್ದಲಿಂಗ ಚೊಂಡಿಪಾಟೀಲ, ವಿ.ವಿ. ರೋಖಡೆ, ಎಸ್.ವಿ. ಮಠ, ಎ.ವಿ. ಗಲಗಲಿ, ಶಿವಾನಂದ ಜುಮನಾಳ, ಬಸವರಾಜ ಖಾಜಿಬಿಳಗಿ, ರಜೀಯಾ ಸುಲ್ತಾನ್, ದಾವಲಸಾಬ ಜಾನ್ವೇಕರ, ಪ್ರಭು ನಾಲತವಾಡ, ಆನಂದ ನಾಯಕ, ಎಸ್.ಎ. ಘತ್ತರಗಿ, ಶಂಕರಗೌಡ ಬಿರಾದಾರ ಇದ್ದರು.
ತಾಳಿಕೋಟೆ ಪಟ್ಟಣವನ್ನು ಸುಂದರ ನಗರ ಪಟ್ಟಣವನ್ನಾಗಿ ಮಾಡಲು ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಶ್ರಮ ವಹಿಸುತ್ತಿದ್ದಾರೆ. ಅವರ ಜೊತೆಗೆ ಪುರಸಭೆಯೂ ಕೈ ಜೋಡಿಸಿ ಅಭಿವೃದ್ಧಿ ವೇಗ ಹೆಚ್ಚಿಸುವಂತಹ ಕೆಲಸ ಮಾಡುತ್ತ ಸಾರ್ವಜನಿಕರು ಸ್ವತ್ಛತೆಗೆ ಆದ್ಯತೆ ನೀಡಿ ಪುರಸಭೆಯೊಂದಿಗೆ ಸಹಕರಿಸಬೇಕು.
-ಸುರೇಶ ನಾಯಕ ಪುರಸಭೆ ಮುಖ್ಯಾಧಿಕಾರಿ