ಪಟ್ಟಣತಿಟ್ಟ: ಕೇರಳದ ಸಂಸ್ಕೃತಿಯು ಆಧ್ಯಾತ್ಮಿಕತೆಯಲ್ಲಿ ಬೇರೂರಿದೆ, ಆದರೆ ಯುಡಿಎಫ್ ಮತ್ತು ಎಲ್ ಡಿಎಫ್ ನವರು ನಂಬಿಕೆಗಳನ್ನು ನಾಶ ಮಾಡುವುದಕ್ಕೆ ಹೆಸರುವಾಸಿಯಾಗಿದ್ದಾರೆ.ಕೇರಳದ ಸಂಸ್ಕೃತಿಯು ಶಾಂತಿಯಿಂದ ಬೇರೂರಿದ್ದು,ಯುಡಿಎಫ್ ಮತ್ತು ಎಲ್ ಡಿಎಫ್ ನವರು ರಾಜಕೀಯ ಹಿಂಸಾಚಾರಕ್ಕೆ ಹೆಸರುವಾಸಿಯಾಗಿಸಿದ್ದಾರೆ ಎಂದು ಶುಕ್ರವಾರ ಪ್ರಧಾನಿ ಮೋದಿ ಕಿಡಿ ಕಾರಿದ್ದಾರೆ.
ಪತ್ತನಂತಿಟ್ಟದಲ್ಲಿ ಬಿಜೆಪಿ ಅಭ್ಯರ್ಥಿ ಎ.ಕೆ. ಆಂಟನಿ ಪರ ಬೃಹತ್ ಪ್ರಚಾರ ಸಭೆಯಲ್ಲಿ ಮಾತನಾಡಿ”ಈ ಉತ್ಸಾಹವು ಕೇರಳದಲ್ಲಿ ‘ಕಮಲ’ ಅರಳುತ್ತದೆ ಎಂದು ನನಗೆ ಭರವಸೆ ನೀಡುತ್ತದೆ” ಎಂದರು.
”ಎಲ್‌ಡಿಎಫ್ ಮತ್ತು ಯುಡಿಎಫ್ ಎದುರಾಳಿಗಳಂತೆ ನಟಿಸುತ್ತವೆ, ಆದರೆ ದೆಹಲಿಯಲ್ಲಿ ಅವರು ಪರಸ್ಪರ ‘ತಬ್ಬಿಕೊಳ್ಳುತ್ತಾರೆ. ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ಪರಸ್ಪರ ಹೆಸರುಗಳನ್ನು ಕರೆಯುತ್ತಾರೆ, ಆದರೆ ದೆಹಲಿಯಲ್ಲಿ ಅವರು ಮೈತ್ರಿ ಮಾಡಿಕೊಳ್ಳುತ್ತಾರೆ.ಕಾಂಗ್ರೆಸ್ ಮತ್ತು ಎಡಪಕ್ಷಗಳೆರಡೂ ಕೊಲೆಗಡುಕರು ಮತ್ತು ಕೇರಳದ ಜನರು ಈ ವಾಸ್ತವವನ್ನು ಅರ್ಥಮಾಡಿಕೊಂಡಿದ್ದಾರೆ” ಎಂದು ಕಿಡಿ ಕಾರಿದರು.
”ಕೇರಳದಲ್ಲಿ ಅಸಮರ್ಥ ಮತ್ತು ಭ್ರಷ್ಟ ಸರ್ಕಾರ ಆಡಳಿತ ನಡೆಸುತ್ತಿದೆ. ಕಾನೂನು ಸುವ್ಯವಸ್ಥೆ ತುಂಬಾ ಹದಗೆಟ್ಟಿದೆ. ಪರಿಸ್ಥಿತಿ ಎಷ್ಟು ದುರದೃಷ್ಟಕರವಾಗಿದೆ ಎಂದರೆ ಚರ್ಚ್ ಪಾದ್ರಿಗಳೂ ಸುರಕ್ಷಿತವಾಗಿಲ್ಲ. ಕಾಲೇಜುಗಳು ಕಮ್ಯುನಿಸ್ಟರ ಗೂಂಡಾಗಳ ಕೇಂದ್ರವಾಗುತ್ತಿವೆ.ಕೇರಳದ ಜನರು ಪ್ರಗತಿಪರರು ಮತ್ತು ದೂರದೃಷ್ಟಿಯುಳ್ಳವರು, ಆದರೆ ಕಾಂಗ್ರೆಸ್ ಇನ್ನೂ 19 ನೇ ಶತಮಾನದ ಚಿಂತನೆಗಳೊಂದಿಗೆ ಬದುಕುತ್ತಿದೆ. ಎಲ್‌ಡಿಎಫ್‌ನ ಸಿದ್ಧಾಂತವು ಸಂಪೂರ್ಣವಾಗಿ ಹಳೆಯದಾಗಿದೆ. ಈ ಎರಡೂ ಪಕ್ಷಗಳ ಸಾಮಾನ್ಯ ಅಸಹಾಯಕ ಸಂಸ್ಕೃತಿಯು ಕೇರಳದ ಜನರ ಶ್ರೇಷ್ಠ ಸಂಪ್ರದಾಯಗಳು ಮತ್ತು ಪ್ರಗತಿಪರ ಮನಸ್ಥಿತಿಗೆ ನಿಖರವಾಗಿ ವಿರುದ್ಧವಾಗಿದೆ” ಎಂದು ನಿರಂತರ ವಾಗ್ದಾಳಿ ನಡೆಸಿದರು.