Advertisement

ಸರ್ಕಾರಿ ಪ್ರೌಢಶಾಲೆಗಳಿಗೆ ಎಲ್‌ಸಿಡಿ, ಲ್ಯಾಪ್‌ಟಾಪ್‌ ಪೂರೈಕೆ: HDK

06:00 AM Dec 22, 2018 | Team Udayavani |

ವಿಧಾನಪರಿಷತ್ತು: ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಿಕ್ಷಣ ಗುಣಮಟ್ಟ ಹೆಚ್ಚಳ, ಕಂಪ್ಯೂಟರ್‌ ಸೇರಿದಂತೆ ಆಧುನಿಕ ಕಲಿಕಾ ಸವಲತ್ತುಗಳ ನೀಡಿಕೆ ನಿಟ್ಟಿನಲ್ಲಿ 2018-19ನೇ ಸಾಲಿನಲ್ಲಿ 750 ಸರ್ಕಾರಿ ಪ್ರೌಢಶಾಲೆಗಳಿಗೆ ಎಲ್‌ಸಿಡಿ ಮತ್ತು ಲ್ಯಾಪ್‌ ಟಾಪ್‌ ಸಾಮಗ್ರಿಗಳನ್ನು ಪೂರೈಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. 

Advertisement

ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯ ಮಂತ್ರಿಯವರು, ರಾಜ್ಯದಲ್ಲಿ ಇನ್ನುಳಿದ 2,242 ಸರ್ಕಾರಿ ಪ್ರೌಢ ಶಾಲೆಗಳಿಗೂ ಸಾಮಗ್ರಿಗಳನ್ನು ಪೂರೈಸಲಾಗುವುದು. ಸರ್ಕಾರಿ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಶಿಕ್ಷಣ ಗುಣ ಮಟ್ಟದ ವೃದ್ಧಿಗೆ ತಂತ್ರಜ್ಞಾನ ನೆರವಿನ ಕಲಿಕಾ (ಟಿಎಎಲ್‌ಪಿ)ಕಾರ್ಯಕ್ರಮವನ್ನು 2016-17 ನೇ ಸಾಲಿನಿಂದ ಐದು ವರ್ಷಗಳ ಕಾರ್ಯಕ್ರಮ ವಾಗಿ ಅನುಷ್ಠಾನಗೊಳಿಸಲಾಗುತ್ತದೆ. ಈ ಕಾರ್ಯಕ್ರಮದಡಿ 1,750 ಸರ್ಕಾರಿ ಪ್ರೌಢಶಾಲೆಗಳಿಗೆ ಲ್ಯಾಪ್‌ಟ್ಯಾಪ್‌, ಎಲ್‌ಸಿಡಿ ಪ್ರೊಜೆಕ್ಟರ್‌ ನೀಡಲಾಗುತ್ತಿದ್ದು, 1,000 ಶಾಲೆಗಳಿಗೆ ಕಂಪ್ಯೂಟರ್‌ ಲ್ಯಾಬ್‌ ಸಿದಟಛಿಗೊಳಿಸಲಾಗಿದ್ದು, ಕಂಪ್ಯೂಟರ್‌ ನೀಡಿಕೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
 
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಂಪ್ಯೂಟರ್‌ ಸೇರಿದಂತೆ ಆಧುನಿಕ ಕಲಿಕಾ ಸವಲತ್ತು ನೀಡಿಕೆ ನಿಟ್ಟಿನಲ್ಲಿ
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ ಹಂತ ಹಂತವಾಗಿ ಕೇಂದ್ರ ಸರ್ಕಾರದಿಂದ 74 ಆದರ್ಶ ವಿದ್ಯಾಲಯ, 254 ಉನ್ನತೀಕರಣ, 1,626 ಬಲವರ್ಧನೆ ಯೋಜನೆಗಳಡಿ ಒಟ್ಟಾರೆ 1,954 ಸರ್ಕಾರಿ ಪ್ರೌಢಶಾಲಾ ಕಟ್ಟಡ ಕಾಮಗಾರಿ ಕೈಗೊಳ್ಳಲಾಗಿದೆ. ಗ್ರಾಮೀಣ ಭಾಗದಲ್ಲಿ ಸಾಮಾಜಿಕವಾಗಿ ಹಿಂದುಳಿದ, ಆರ್ಥಿಕವಾಗಿ ಕಷ್ಟದಲ್ಲಿರುವ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿಕೆಗೆ ಐದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 4ರಿಂದ 10ನೇ ತರಗತಿವರೆಗಿನ ಸುಮಾರು 36 ಲಕ್ಷ ವಿದ್ಯಾರ್ಥಿಗಳಿಗೆ ಗಣತಿ ಆಧಾರಿತ ಕಲಿಕಾ ಗುಣಮಟ್ಟ ಸಮೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದರು.

ಮಕ್ಕಳಿಗೆ ಆಂಗ್ಲಭಾಷೆ ತರಬೇತಿ ನಿಟ್ಟಿನಲ್ಲಿ 1ನೇ ತರಗತಿಯಿಂದಲೇ ಆಂಗ್ಲ ಭಾಷೆ ಕಲಿಕೆಗೆ ತೀರ್ಮಾನಿಸಲಾಗಿದೆ. 2018-19ನೇ ಸಾಲಿನಲ್ಲಿ ಎಸ್‌.ಎಸ್‌.ಎ.ವತಿಯಿಂದ 204 ಸಂಪನ್ಮೂಲ ಶಿಕ್ಷಕರು, 1,710 ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಂಗ್ಲ ಭಾಷಾ ಕೌಶಲ್ಯ ಅಭಿವೃದಿಟಛಿಪಡಿಸಲು ಹಾಗೂ ತಂತ್ರಜ್ಞಾನ ಸಂವಹನ ಕೌಶಲ್ಯ ಹೆಚ್ಚಿಸಲು 30 ದಿನಗಳ ದೀರ್ಘ‌ಕಾಲದ ಆಂಗ್ಲ ಭಾಷಾ ಸಬಲೀಕರಣ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ 2.5 ಕೋಟಿ ರೂ.ಅನುದಾನ ಒದಗಿಸಲಾಗಿದೆ. ಬೆಂಗಳೂರಿನ ಆರ್‌.ಐ.ಇ .ಸಹಯೋಗದೊಂದಿಗೆ ಆಂಗ್ಲ ಭಾಷಾ ಬೋಧನಾ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದ್ದು, ಈ ಸಾಲಿನಲ್ಲಿ 1,461
ಶಿಕ್ಷಕರಿಗೆ ತರಬೇತಿ ಪೂರ್ಣಗೊಳಿಸಲಾಗಿದೆ ಎಂದು ವಿವರಿಸಿದರು.

“ಕಲಾಪ ವ್ಯರ್ಥಕ್ಕೆ ಬಿಜೆಪಿ ಕಾರಣ’
ಬೆಳಗಾವಿ: ಚಳಿಗಾಲದ ಅಧಿವೇಶನದ ಆರಂಭದಲ್ಲಿ ಎರಡೂ ಸದನಗಳು ಸುಗಮವಾಗಿ ನಡೆದಿದ್ದು, ಕೊನೆಯ ಎರಡು ದಿನ ಕಲಾಪ ವ್ಯರ್ಥವಾಗಲು ಬಿಜೆಪಿಯೇ ಕಾರಣ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಹತ್ತು ದಿನಗಳ ಬೆಳಗಾವಿ ಅಧಿವೇಶನ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅಧಿವೇಶನದ ಆರಂಭದಲ್ಲಿ ಎರಡೂ ಸದನದಲ್ಲಿ ಸುಗಮವಾಗಿ ಕಲಾಪಗಳು ನಡೆದವು. ಅದಕ್ಕಾಗಿ ಸಭಾಧ್ಯಕ್ಷ ಹಾಗೂ ಸಭಾಪತಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಭಾಗದ ಕುರಿತು 9.5 ಗಂಟೆ ಕಾಲ ಚರ್ಚೆ ನಡೆದಿದೆ. ಸರ್ಕಾರ ಎಲ್ಲ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಟ್ಟಿದೆ. ಸಾಲ ಮನ್ನಾ ಬಗ್ಗೆ ಸದನದಲ್ಲಿ ಉತ್ತರ ನೀಡಲು ಬಿಜೆಪಿ ಅವಕಾಶ ಕೊಡಲಿಲ್ಲ ಎಂದು ಹೇಳಿದರು. “ನಾನು ಸದನದಲ್ಲಿ ಎಲ್ಲಿಯೂ ಉದಟಛಿಟತನ ತೋರಿಲ್ಲ. ನಾನು ಬುದ್ದಿವಂತ, ಬೃಹಸ್ಪತಿ ಎಂದು ಎಲ್ಲಿಯೂ ಹೇಳಿಲ್ಲ. ಸಾಲ ಮನ್ನಾ ಮಾಡುವ ಬಗ್ಗೆ ಬಿಜೆಪಿಯವರಿಗೆ ಸಲಹೆ ನೀಡುವಂತೆ ಕೇಳಿದ್ದೇನೆ. ನಮ್ಮ ಸರ್ಕಾರದ ಸಾಲ ಮನ್ನಾ ಯೋಜನೆಯು ಮಾದರಿ ಯೋಜನೆ. ಯಡಿಯೂರಪ್ಪ ಅವರು ಬುದ್ದಿವಂತರು’ ಎಂದು ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next