Advertisement

ತೇಜಸ್‌ ಯಶಸ್ವಿ ಪರೀಕ್ಷೆ

06:00 AM Aug 03, 2018 | Team Udayavani |

ಹೊಸದಿಲ್ಲಿ  /ಬೆಂಗಳೂರು: ದೇಶದ ನೌಕಾ ಪಡೆಗೆಂದೇ ತಯಾರಿಸಲಾಗಿರುವ ತೇಜಸ್‌ ಲಘು ಯುದ್ಧ ವಿಮಾನವನ್ನು ಗೋವಾ ಕರಾವಳಿಯಾಚೆ ಇರುವ ಯುದ್ಧನೌಕೆ ಐಎನ್‌ಎಸ್‌ ವಿಕ್ರಮಾದಿತ್ಯ ದಲ್ಲಿ ಹಲವು ಯಶಸ್ವಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಿಂದಾಗಿ ಅಮೆರಿಕ, ರಷ್ಯಾ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿರುವ ಯುದ್ಧ ನೌಕೆಗಳಲ್ಲಿರುವಂತೆ ಭಾರತದ ಯುದ್ಧನೌಕೆಯಿಂದಲೂ ನೇರವಾಗಿ ಹಾರಾಟ ನಡೆಸುವ ವಿಮಾನಗಳನ್ನು ಹೊಂದುವಂತಾಗಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ 2019ರ ಅಂತ್ಯದಲ್ಲಿ 2 ತೇಜಸ್‌ ಯುದ್ಧ ವಿಮಾನಗಳು ಐಎನ್‌ಎಸ್‌ ವಿಕ್ರಮಾ ದಿತ್ಯದಿಂದ ಹಾರಾಟ ನಡೆಸಲಿವೆ ಎಂದು ನಿರೀಕ್ಷಿಸಲಾಗಿದೆ. 

Advertisement

ಗುರುವಾರ ನಡೆದ ಪರೀಕ್ಷೆಯಲ್ಲಿ ಟ್ಯಾಕ್ಸಿ -ಇನ್‌ ಅಂದರೆ, ವಿಮಾನ ಲ್ಯಾಂಡಿಂಗ್‌ ಸೇರಿದಂತೆ ಹಲವು ಪರೀಕ್ಷೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ವಿಮಾನಕ್ಕೆ ಮರು ಇಂಧನ ಪೂರೈಕೆ, ಚೆಕ್‌ ಲ್ಯಾಂಡಿಂಗ್‌ ಸೇರಿದಂತೆ ಹಲವು ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಬೆಂಗಳೂರಿನಲ್ಲಿ ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ಅಧಿಕಾರಿಗಳು ತಿಳಿಸಿದ್ದಾರೆ. ಗಮನಾರ್ಹ ಅಂಶವೆಂದರೆ ಈ ವಿಮಾನ 4 ದಶಕಗಳಷ್ಟು ಹಳೆಯದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next