Advertisement

ಬೆಂಗಳೂರಲ್ಲಿ ಲಘು ಯುದ್ಧ ವಿಮಾನ ಎಲ್‌ಸಿಎ ಎಂಕೆ-1 ಪರೀಕ್ಷೆ

10:23 AM Apr 29, 2022 | Team Udayavani |

ಹೊಸದಿಲ್ಲಿ: ಹಗುರ ಯುದ್ಧ ವಿಮಾನ (ಎಲ್‌ಸಿಎ) ಎಂಕೆ-1 ತಯಾರಿಸುತ್ತಿರುವ ಬೆಂಗಳೂರಿನ ಹಿಂದುಸ್ತಾನ್‌ ಏರೋನಾ ಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಅದರ ಪರೀಕ್ಷೆಯನ್ನು ಆರಂಭಿಸಿದೆ.

Advertisement

ಅದು ಪೂರ್ತಿಗೊಂಡ ಬಳಿಕ ವಾಯುಪಡೆಗೆ ಅದನ್ನು ಸೇರ್ಪಡಿಸಲಾಗುವುದು. ಬೆಂಗಳೂರಿನ ಏರ್‌ಕ್ರಾಫ್ಟ್ ರಿಸರ್ಚ್‌ ಆ್ಯಂಡ್‌ ಡಿಸೈನ್‌ ಸೆಂಟರ್‌ (ಎಆರ್‌ಡಿಸಿ)ನಲ್ಲಿ ಈ ಪ್ರಯೋಗ ಶುರುವಾಗಿದೆ.

ಎಲ್‌ಸಿಎ ಎಂಕೆ-1ನ್ನು ಈಗಾಗಲೇ ಐಎಎಫ್ಗೆ ಸೇರ್ಪಡಿಸ‌ಲಾಗಿದ್ದರೂ, ಯುದ್ಧಾವಶ್ಯಕತೆ ಮತ್ತು ವಾಯುಪಡೆಗೆ ಅಗತ್ಯವಾಗಿರುವ ರೀತಿಯಲ್ಲಿ ಅದು ಕಾರ್ಯನಿರ್ವಹಿಸುತ್ತದೆಯೋ ಎಂಬುದನ್ನು ಪರೀಕ್ಷೆಯ ಈ ಹಂತದಲ್ಲಿ ಪರಾಮರ್ಶಿಸಲಾಗುತ್ತದೆ ಎಂದು ಎಚ್‌ಎಎಲ್‌ನ ಅರೂಪ್‌ ಚಟರ್ಜಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next