Advertisement

ಪಾಣಾಜೆ ಕಾಂಗ್ರೆಸ್‌ ಘಟಕಕ್ಕೆ ನೂತನ ಅಧ್ಯಕ್ಷರಾಗಿ ಲಕ್ಷ್ಮೀನಾರಾಯಣ ರೈ

02:55 AM Jul 14, 2017 | Team Udayavani |

ಪಾಣಾಜೆ : ಪಾಣಾಜೆ ಗ್ರಾಮದ ಕಾಂಗ್ರೆಸ್‌ ಪಕ್ಷದ ನೂತನ ಸಾರಥಿಯಾಗಿ ಖ್ಯಾತ ಸಾಹಿತಿ ಕೆದಂಬಾಡಿ ಜತ್ತಪ್ಪ ರೈ ಅವರ ಪುತ್ರ ಯುವ ಮುಖಂಡ ಲಕ್ಷ್ಮೀನಾರಾಯಣ ರೈ ಕೆದಂಬಾಡಿ ಆಯ್ಕೆಯಾಗಿದ್ದಾರೆ.

Advertisement

ಇತ್ತೀಚೆಗೆ ಪಾಣಾಜೆ ಸಿ.ಎ. ಬ್ಯಾಂಕ್‌ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಕಾರ್ಯಕರ್ತರ ಆಶಯದಂತೆ ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಹಾಗೂ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಫಝುಲ್‌ ರಹಿಂ ಅವರ ಉಪಸ್ಥಿತಿಯಲ್ಲಿ ಈ ಆಯ್ಕೆ ನಡೆಯಿತು.ಲಕ್ಷ್ಮೀನಾರಾಯಣ ರೈ ಅವರು ಪಾಣಾಜೆ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿಯಾಗಿ, ಉದಯಗಿರಿ ಶ್ರೀ ಅಯ್ಯಪ್ಪ ಸ್ವಾಮಿ ಭಜನ ಮಂದಿರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಹಾಗೂ ಹತ್ತು ಹಲವು ಸಂಘ-ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಕೆದಂಬಾಡಿ ಲಕ್ಷ್ಮೀನಾರಾಯಣ ರೈ ಅವರು ಮಾತನಾಡಿ,  ಶಾಸಕರ, ಪಕ್ಷದ ನಾಯಕರ ಹಾಗೂ ಕಾರ್ಯಕರ್ತರ ಸಲಹೆ ಸೂಚನೆಯಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮಾಡಲಾಗುವುದು ಎಂದು ಹೇಳಿದರು. 

ಪಾಣಾಜೆ ಗ್ರಾಮದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಅದಕ್ಕೆ ನಿಮ್ಮೆಲ್ಲರ ನೆರವು ಅತ್ಯಂತ ಅಗತ್ಯ ಎಂದು ನಾಯಕರ, ಕಾರ್ಯಕರ್ತರ ಸಹಕಾರವನ್ನು ಯಾಚಿಸಿದರು. ಬಳಿಕ ನೂತನ ಅಧ್ಯಕ್ಷರನ್ನು ಅಭಿನಂದಿಸಲಾಯಿತು.

ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್‌ ರೈ ಅಂಕೊತಿಮ್ಮಾರ್‌, ಅಮಲ ರಾಮಚಂದ್ರ,     ಕಾರ್ಯದರ್ಶಿ ಕ್ರಷ್ಣ ಪ್ರಸಾದ್‌ ಆಳ್ವ, ಅಲ್ಪಸಂಖ್ಯಾಖ ಘಟಕದ ಪ್ರಧಾನ ಕಾರ್ಯದರ್ಶಿ ಇಸಾಕ್‌ ಸಾಲ್ಮರ, ಕೋಶಾಧಿಕಾರಿ ಹಾಜಿ ಎಸ್‌. ಅಬೂಬಕ್ಕರ್‌ ಆರ್ಲಪದವು, ಪಾಣಾಜೆ ಗ್ರಾಮಪಂಚಾಯತ್‌ ಸದಸ್ಯ ಜಗನ್ಮೋಹನ ರೈ ಕೆದಂಬಾಡಿ, ಹಿರಿಯರಾದ ಅಬ್ದುಲ್ಲ ಹಾಜಿ ಕಡಮಾಜೆ, ಮಹಮ್ಮದ್‌ ಕುಂಇ ಕಂಚಿಲ್ಕುಂಜ,  ಶಿವಾನಂದ ಮಣಿಯಾಣಿ ನಡುಕಟ್ಟ, ಅಬ್ದುಲ್‌ ರಹಿಮಾನ್‌ ಹಾಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advertisement

ಮುಂದಿನ ಚುನಾವಣೆಗೆ ಪಾಣಾಜೆಯಿಂದಲೇ ತಯಾರಿ: ಶಕುಂತಳಾ ಟಿ. ಶೆಟ್ಟಿ 
2018ರ ಚುನಾವಣೆಗೆ ತಯಾರಾಗಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರಕಾರ ಅಧಿಕಾರ ಪಡೆಯಲು ಎಲ್ಲಾ ಕಾರ್ಯಕರ್ತರು ವೈಯುಕ್ತಿಕ ಪ್ರತಿಷ್ಟೆ ಬಿಟ್ಟು ಒಗ್ಗಟ್ಟಿನಿಂದ ದುಡಿಯಬೇಕು. ಪಾಣಾಜೆ ಗ್ರಾಮದ ಅಭಿವೃದ್ಧಿಗೆ ಗರಿಷ್ಠ ಪ್ರಮಾಣದ ಅನುದಾನ ನೀಡಿರುತ್ತೇನೆ. ಇನ್ನೂ ತಮ್ಮ ಗ್ರಾಮದ ಬೇಡಿಕೆಯನ್ನು ಪೂರೈಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಮುಂದಿನ ಚುನಾವಣೆಗೆ ಪಾಣಾಜೆಯಿಂದಲೇ  ಪ್ರಚಾರ  ಕಾರ್ಯವನ್ನು ಆರಂಭಿಸುತ್ತೇನೆ. ಎಲ್ಲರನ್ನು ಸೇರಿಸಿ ಬೃಹತ್‌ ಕಾರ್ಯಕರ್ತರ ಸಮಾವೇಶವನ್ನು ಪಾಣಾಜೆಯಲ್ಲಿ ಸಂಘಟಿಸುವುದಾಗಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಹೇಳಿದರು. ಬಳಿಕ ನೂತನ ವಲಯ ಅಧ್ಯಕ್ಷರಿಗೆ ಹಾಗೂ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next