Advertisement

ಭೇದಭಾವವಿಲ್ಲದ ದುಡಿಮೆಯೇ ದೇಶ ಪ್ರೇಮ : ಬ್ರಹ್ಮಶ್ರೀ ರವೀಶ ತಂತ್ರಿ

11:45 AM Apr 12, 2018 | Karthik A |

ಕೋಟೂರು: ಮೇಲು ಕೀಳೆಂಬ ಭೇದವಿಲ್ಲದೆ ದುಡಿಯುವುದೇ ಸರಿಯಾದ ದೇಶಪ್ರೇಮ ಎಂಬುದಾಗಿ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರು ಅಭಿಪ್ರಾಯಪಟ್ಟರು. ಮುಳಿಯಾರು ಕೋಟೂರಿಗೆ ಸಮೀಪದ ಎರಿಂಜೇರಿ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನದ ಪುನರ್‌ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಜರಗಿದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಪ್ರವಚನ ನೀಡಿದರು. ಜಾತಿ ಭೇದಭಾವವಿಲ್ಲದೆ ಒಂದಾಗಿ ದುಡಿದ ಪ್ರಯತ್ನದಿಂದ ಭವ್ಯವೂ ದಿವ್ಯವೂ ಆದ ದೇಗುಲ ನಿರ್ಮಾಣವಾಗಿದೆ. ಹಾಗಾಗಿ ಸರ್ವರೂ ಒಂದಾಗಿ ದುಡಿಯಬೇಕೆಂಬುದಾಗಿ ಅವರು ಹೇಳಿದರು.

Advertisement

ಶ್ರೀ ಕ್ಷೇತ್ರ ಪುನರ್‌ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ವಾಮನ ಆಚಾರ್‌ ಬೋವಿಕ್ಕಾನ ಅಧ್ಯಕ್ಷತೆ ವಹಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ತಾರಾನಾಥ ಮಧೂರು ಅವರು ಪ್ರಾಸ್ತಾವಿಕ ನುಡಿಗಳ ನ್ನಾ ಡಿದರು. ನಿವೃತ್ತ ಸಹಾಯಕ ಜಿಲ್ಲಾಧಿಕಾರಿ ಬಾಲಕೃಷ್ಣ ಅಗ್ಗಿತ್ತಾಯ ಮಧೂರು, ಕಾರಡ್ಕ ಬ್ಲಾಕ್‌ ಪಂಚಾಯತ್‌ ಸದಸ್ಯ ವಾರಿಜಾಕ್ಷನ್‌, ಶಂಕರ ಪಾತನಡ್ಕ, ಎ. ಕೃಷ್ಣ, ಇ. ಚಂದ್ರಶೇಖರ, ಸಣ್ಣಪ್ಪು, ಸುಂದರ ಕಡಪ್ಪುರ, ಸುನೀತ, ಶಾಲಿನಿ, ಮೋಹನನ್‌ ನೆಕ್ರಾಜೆ, ಜಗದೀಶ ಎ., ವಿಜಯನ್‌ ಮೊದಲಾದವರು ಶುಭಹಾರೈಸಿದರು. ರಮೇಶನ್‌ ಸ್ವಾಗತಿಸಿದರು. ವೇಣುಗೋಪಾಲ ಸುಳ್ಯ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next