Advertisement
ಕಾನೂನು ಮತ್ತು ಸುವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರ್ಕಾರವು ಆಡಳಿತಾತ್ಮಕ ಪುನರ್ರಚನೆಯ ಭಾಗವಾಗಿ ಹಲವಾರು ಜಿಲ್ಲೆಗಳಲ್ಲಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ನೀಡಿದೆ. ಅದರಂತೆ ವಾರಣಾಸಿ, ಆಗ್ರಾ, ಗೌತಮ್ ಬುದ್ಧ ನಗರ, ಗಾಜಿಯಾಬಾದ್, ಅಯೋಧ್ಯೆ, ಮಥುರಾ, ಲಕ್ನೋ, ಬಹ್ರೈಚ್ ಮತ್ತು ಪ್ರಯಾಗ್‌ರಾಜ್ ಸೇರಿದಂತೆ ವಿವಿಧ ಜಿಲ್ಲೆಗಳ 16 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
Related Articles
Advertisement
ಹೈದರಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿಯ ಸಮಯದಲ್ಲಿ ಲಕ್ಷ್ಮೀ ಸಿಂಗ್ ಅವರನ್ನು ಅತ್ಯುತ್ತಮ ಪ್ರೊಬೇಷನರ್ ಎಂದು ಘೋಷಿಸಲಾಯಿತು. 2000ನೇ ಬ್ಯಾಚ್‌ನ ಐಪಿಎಸ್ ಲಕ್ಷ್ಮಿ ಸಿಂಗ್ ಅವರು ಪ್ರಧಾನಿಯವರಿಂದ ಬೆಳ್ಳಿಯ ಲಾಠಿ ಸ್ವೀಕರಿಸಿದರು. ಇದಲ್ಲದೇ ಕೇಂದ್ರ ಗೃಹ ಸಚಿವಾಲಯದಿಂದ 9 ಎಂಎಂ ಪಿಸ್ತೂಲ್ ಅನ್ನು ಬಹುಮಾನವಾಗಿ ಪಡೆದಿದ್ದರು ಎನ್ನಲಾಗಿದೆ.
ಫೈರ್‌ಬ್ರಾಂಡ್ ಐಪಿಎಸ್ ಅಧಿಕಾರಿ ಲಕ್ಷ್ಮೀ ಸಿಂಗ್ ಅವರು ಇದುವರೆಗೆ ತಮ್ಮ ಅಧಿಕಾರಾವಧಿಯಲ್ಲಿ ಹಲವು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ಈ ಹಿಂದೆ ವಾರಣಾಸಿ ಮತ್ತು ಚಿತ್ರಕೂಟ, ಗೊಂಡಾ, ಫರೂಕಾಬಾದ್, ಬಾಗ್ಪತ್ ಮತ್ತು ಬುಲಂದ್‌ಶಹರ್‌ನಲ್ಲಿ ಎಸ್‌ಪಿ ಮತ್ತು ಎಸ್‌ಎಸ್‌ಪಿಯಾಗಿ ಸೇವೆ ಸಲ್ಲಿಸಿದ್ದಾರೆ. ಇದರೊಂದಿಗೆ, ಮಾಫಿಯಾ ಮತ್ತು ಸಂಘಟಿತ ಅಪರಾಧಗಳ ವಿರುದ್ಧ ಹುರುಪಿನ ಅಭಿಯಾನವನ್ನು ನಡೆಸುವ ಮೂಲಕ ಅವರು ಅನೇಕ ಬಾರಿ ಬೆಳಕಿಗೆ ಬಂದರು. ಇದಲ್ಲದೆ, ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಮತ್ತು ಪೊಲೀಸ್ ಸಿಬ್ಬಂದಿಯ ಸಮಸ್ಯೆಗಳ ಪರಿಹಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇದನ್ನೂ ಓದಿ: ವರ್ಕ್ ಫ್ರಮ್ ಹೋಮ್ ಎಫೆಕ್ಟ್… : ಅತ್ತ ಮದುವೆ ನಡೆಯುತ್ತಿದ್ದರೆ ಇತ್ತ ಲ್ಯಾಪ್ ಟಾಪ್ ನಲ್ಲೇ ಬ್ಯುಸಿಯಾದ ವರ