Advertisement
ಶನಿವಾರ ಮಾತನಾಡಿದ ಪಾಕ್ ಪ್ರಧಾನಿಯ ಸಲಹೆಗಾರ ಸರ್ತಾಜ್ ಅಜೀಜ್, “ನ್ಯಾಯಾಲಯವು ಅಂತಿಮ ತೀರ್ಪು ಬರುವವರೆಗೆ ಗಲ್ಲು ಶಿಕ್ಷೆ ವಿಧಿಸಬೇಡಿ ಎಂದಿದೆಯೇ ವಿನಾ ಜಾಧವ್‌ಗೆ ರಾಯಭಾರಿ ಭೇಟಿಗೆ ಅವಕಾಶ ಕಲ್ಪಿಸಿ ಎಂದು ಹೇಳಿಲ್ಲ,’ ಎನ್ನುವ ಮೂಲಕ ಉದ್ಧಟತನ ಪ್ರದರ್ಶಿಸಿದ್ದಾರೆ.
ಐಸಿಜೆಯಲ್ಲಿ ವಾದಿಸಲು ಪಾಕಿಸ್ಥಾನವು ತನ್ನ ಅಟಾರ್ನಿ ಜನರಲ್ ಅಷ¤ರ್ ಔಸಫ್ ಅಲಿ ಅವರನ್ನು ನೇಮಕ ಮಾಡಿದ ಬೆನ್ನಲ್ಲೇ ಅಜೀಜ್ ಈ ವಿಚಾರ ತಿಳಿಸಿದ್ದಾರೆ. ಮೊನ್ನೆಯ ವಿಚಾ ರಣೆ ವೇಳೆ ಬ್ರಿಟನ್ ಮೂಲದ ಖವಾರ್ ಖುರೇಷಿ ಸಮರ್ಥ ವಾಗಿ ವಾದ ಮಂಡಿಸಿಲ್ಲ ಎಂದು ಟೀಕೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪಾಕ್ ಸರಕಾರ ಈ ನಿರ್ಧಾರ ಕೈಗೊಂಡಿದೆ. ಜಾಧವ್ ತಾಯಿಯ ಅರ್ಜಿ ಸ್ವೀಕರಿಸಿದ್ದೇವೆ: ಜಾಧವ್ ಗಲ್ಲು ಪ್ರಶ್ನಿಸಿ ಅವರ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ಪರಿಧಿಗಣಿಸಲಾಗಿದೆ ಎಂದೂ ಅಜೀಜ್ ತಿಳಿಸಿದ್ದಾರೆ. ಎ.26ರಂದೇ ಜಾಧವ್ ತಾಯಿ ಮೇಲ್ಮನವಿ ಸಲ್ಲಿಸಿದ್ದರು.ಪ್ರತಿಯನ್ನು ಭಾರತೀಯ ಹೈಕಮಿಷನ್ ಪಾಕ್ ವಿದೇಶಾಂಗ ಕಾರ್ಯದರ್ಶಿಗೆ ಹಸ್ತಾಂತರಿಸಿತ್ತು.
Related Articles
Advertisement
ಖುರೇಷಿ ನೇಮಿಸಿದ್ದ ಯುಪಿಎ ಸರಕಾರಐಸಿಜೆಯಲ್ಲಿ ಪಾಕ್ ಪರ ವಾದಿಸಿದ್ದ ವಕೀಲ ಖುರೇಷಿ ಅವರನ್ನು 2004ರಲ್ಲಿ ಮಧ್ಯಸ್ಥಿಕೆ ಪ್ರಕರಣವೊಂದರಲ್ಲಿ ವಾದಿಸಲು ಯುಪಿಎ ಸರಕಾರ ನೇಮಿಸಿತ್ತೆಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. ದಾಭೋಲ್ ವಿದ್ಯುತ್ ಯೋಜನೆಗೆ ಸಂಬಂಧಿಸಿ ಅಮೆರಿಕದ ಜತೆ ಬಿಕ್ಕಟ್ಟು ಸೃಷ್ಟಿಯಾದಾಗ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ವಾದಿಸು ತ್ತಿದ್ದ ಭಾರತದ ಪ್ರತಿನಿಧಿಗಳನ್ನು ಬದಲಿಸಿ, ಖುರೇಷಿ ಅವರನ್ನು ಸರಕಾರ ನೇಮಿಸಿತ್ತು. ಇದು ಯುಪಿಎ ಸರಕಾರದ ಪಾಕ್ ಪರ ನೀತಿಯನ್ನು ತೋರಿಸುತ್ತದೆ ಎಂದಿರುವ ಬಿಜೆಪಿ ನಾಯಕ ಜಿ.ವಿ.ಎಲ್. ನರಸಿಂಹ ರಾವ್, ಕಾಂಗ್ರೆಸ್‌ಗೆàನು ಭಾರತದಲ್ಲಿ ವಕೀ ಲರೇ ಸಿಗಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಖುರೇಷಿ ವಿಗ್ ಧರಿಸಿದ್ದೇಕೆ?
ಅಂತಾರಾಷ್ಟ್ರೀಯ ಕೋರ್ಟ್‌ನಲ್ಲಿ ವಾದಿಸುವಾಗ ಪಾಕ್ ಪರ ವಕೀಲ ಖುರೇಷಿ ಅವರು ತಲೆಗೆ ವಿಗ್(ಕೃತಕಕೂದಲಿನ ಟೋಪಿ) ಧರಿಸಿದ್ದನ್ನು ಅನೇಕರು ಗಮನಿಸಿರಬಹುದು. ಆದರೆ, ಭಾರತದ ಪರ ನ್ಯಾಯವಾದಿ ಹರೀಶ್ ಸಾಳ್ವೆ ಅವರು ಮಾಮೂಲಿ ವಸ್ತ್ರದಲ್ಲಿದ್ದರು. ಹಾಗಾದರೆ, ಖುರೇಷಿ ವಿಗ್ ಧರಿಸಿದ್ದೇಕೆ, ಅದು ಐಸಿಜೆಯಲ್ಲಿ ಕಡ್ಡಾಯವೇ? ಇಲ್ಲ, ಹಿಂದೆಲ್ಲ ನ್ಯಾಯಾಲಯದಲ್ಲಿ ವಕೀಲರು ಬಿಳಿ ಕೂದಲಿನಂತೆ ಕಾಣುವ ವಿಗ್ ಧರಿಸುತ್ತಿದ್ದರು. ಆದರೆ, ಈಗ ಅಂಥ ಪದ್ಧತಿ ಇಲ್ಲ. ಐಸಿಜೆಯಲ್ಲೂ ಅದು ಕಡ್ಡಾಯವಲ್ಲ. ಆದರೆ, ಖುರೇಷಿ ಮೂಲತಃ ಲಂಡನ್‌ನವರಾಗಿದ್ದು, ಅಲ್ಲಿ ಈಗಲೂ ವಿಗ್ ಧರಿಸಿಯೇ ವಾದ ಮಾಡಲಾಗುತ್ತದೆ. ಹಾಗಾಗಿ, ಅವರು ಅದನ್ನೇ ಐಸಿಜೆಯಲ್ಲೂ ಪಾಲಿಸಿದರು. ಆಯಾ ದೇಶದ ವಕೀಲರು ಅವರವರ ದೇಶದಲ್ಲಿನ ನ್ಯಾಯವಾದಿಗಳ ಉಡುಗೆಯಲ್ಲೇ ವಾದಿಸಲು ಐಸಿಜೆಯಲ್ಲಿ ಅವಕಾಶವಿದೆ. ಕುಲಭೂಷಣ್ ಜಾಧವ್ ಕಸಬ್‌ಗಿಂತಲೂ ದೊಡ್ಡ ಭಯೋತ್ಪಾದಕ. ಆತ ಹಲವರನ್ನು ಇಲ್ಲಿಗೆ ಕರೆಸಿಕೊಂಡು ವಿಧ್ವಂಸಕ ಕೃತ್ಯ ನಡೆಸಿದ್ದಾನೆ. ಎಷ್ಟೋ ಮಂದಿಯ ಸಾವಿಗೆ ಕಾರಣರಾಗಿದ್ದಾನೆ.
– ಜ| ಪರ್ವೇಜ್ ಮುಷರ್ರಫ್, ಪಾಕ್ ಮಾಜಿ ಅಧ್ಯಕ್ಷ