Advertisement

ಬಸ್‌ ಸೌಲಭ್ಯಕ್ಕೆ ಆಗ್ರಹಿಸಿ ವಕೀಲರ ಪ್ರತಿಭಟನೆ

09:27 AM Jul 03, 2019 | Team Udayavani |

ಹುಬ್ಬಳ್ಳಿ: ನೂತನ ನ್ಯಾಯಾಲಯಗಳ ಸಂಕೀರ್ಣಕ್ಕೆ ನಗರ ಸಾರಿಗೆ ಬಸ್‌ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ವಕೀಲರು ನ್ಯಾಯಾಲಯದ ಆವರಣ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

Advertisement

ನ್ಯಾಯಾಲಯದ ವರೆಗೆ ಬಸ್‌ ಸೌಲಭ್ಯ ಇಲ್ಲದ್ದರಿಂದ ವಿವಿಧ ಕೆಲಸಗಳಿಗಾಗಿ ಬರುವ ಸಾರ್ವಜನಿಕರಿಗೆ, ನ್ಯಾಯ ಕೋರಿ ಬರುವ ಕಕ್ಷಿದಾರರಿಗೆ, ವಕೀಲರಿಗೆ ಹಾಗೂ ಕೋರ್ಟ್‌ ಸಿಬ್ಬಂದಿಗೆ ತುಂಬಾ ಸಮಸ್ಯೆ ಆಗುತ್ತಿದೆ. ಕೋರ್ಟ್‌ಗೆ ಹೋಗಲು-ಬರಲು ಖಾಸಗಿ ವಾಹನ ಇಲ್ಲವೆ ಆಟೋರಿಕ್ಷಾಗಳನ್ನೇ ಅವಲಂಬಿಸಬೇಕಾಗಿದೆ. ಅವರು ಕೇಳಿದಷ್ಟು ಹಣ ಕೊಡಬೇಕಾಗಿದೆ. ಹೀಗಾಗಿ ಹೆಚ್ಚಿನ ಹೊರೆ ಆಗುತ್ತಿದೆ. ಕೂಡಲೇ ಕೋರ್ಟ್‌ ವರೆಗೆ ಬಸ್‌ ಸೌಲಭ್ಯ ಒದಗಿಸಬೇಕೆಂದು ಪ್ರತಿಭಟನಾಕಾರರು ವಾಕರಸಾ ಸಂಸ್ಥೆಯನ್ನು ಒತ್ತಾಯಿಸಿದರು.

ಸಂಸ್ಥೆಯ ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸಂಘದ ಮನವಿ ಸ್ವೀಕರಿಸಿ, ಕೋರ್ಟ್‌ ವರೆಗೆ ಬಸ್‌ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಂಘದ ಅಧ್ಯಕ್ಷ ಅಶೋಕ ಬಳಿಗಾರ, ಕಾರ್ಯದರ್ಶಿ ಗುರು ಹಿರೇಮಠ, ಎಸ್‌.ವಿ. ಕೊಪ್ಪರ, ಜಯಪ್ರಕಾಶ ಪಾಟೀಲ, ವಿಠuಲ ಸೋಮನಕೊಪ್ಪ, ಕಾಮಧೇನು, ಶೋಭಾ ಪವಾರ, ಬಿ.ವಿ. ಕೋರಿಮಠ, ಮಂಜುನಾಥ ಕಟ್ಟಿ, ಅಶೋಕ ಅಣವೇಕರ, ಶಿವಾನಂದ ವಡ್ಡಟ್ಟಿ, ಗುರು ಕೆಲಗೇರಿ, ವಿ.ಕೆ. ಹಿರೇಮಠ, ಮಂಜುನಾಥ ಗುಡಗೇರಿ, ವೆಂಕಟೇಶ ಮಲ್ಯಾಲಿ, ಮುರಳಿ ಪೂಜಾರ, ಲಿಂಗರಾಜ ಪಾಟೀಲ, ಸಂತೋಷ ರೆಡ್ಡಿ, ಸವಿತಾ ಪಾಟೀಲ, ಉಮಾ ಹಂಡಿ, ಮಹಾದೇವಿ ಮುತ್ತಗಿ, ರೇಖಾ ಮುತ್ತಗಿ, ಪ್ರಭಾ ಕುಂಬಾರ, ನಂದಾ ಮಾಳವದೆ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next