Advertisement

ಪಿಎಸ್‌ಐ ವಿರುದ್ಧ ನ್ಯಾಯವಾದಿಗಳ ಪ್ರತಿಭಟನೆ

10:42 AM Jun 09, 2019 | Suhan S |

ಮೂಡಲಗಿ: ಸ್ಥಳೀಯ ದಿವಾಣಿ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಚಿಕ್ಕೋಡಿ ಪಿಎಸ್‌ಐ ಎಸ್‌.ಬಿ. ಪಾಟೀಲ ನ್ಯಾಯವಾದಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನಿಸಿದ್ದನ್ನು ಖಂಡಿಸಿ ನ್ಯಾಯವಾದಿಗಳು ನ್ಯಾಯಾಲಯ ಕಲಾಪದಿಂದ ದೂರ ಉಳಿದು ಪ್ರತಿಭಟಣೆ ನಡೆಸಿದರು.

Advertisement

ಈ ವೇಳೆ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಪಿ. ಮಗದುಮ್‌ ಮಾತನಾಡಿ, ವಕೀಲರ ನಿಂದನೆ ಮಾಡುವುದು ನ್ಯಾಯಾಂಗ ವ್ಯವಸ್ಥೆಯ ನಿಂದನೆ ಮಾಡಿದಂತೆ, ಕಾನೂನು ತಿಳಿದ ವಕೀಲರನ್ನೇ ಅವಮಾನ ಮಾಡಿ ಪೊಲೀಸ್‌ ಠಾಣೆಯಲ್ಲಿ ಪಿರ್ಯಾದು ಸ್ವೀಕರಿಸದೇ ಹೋದರೆ ಸಾಮಾನ್ಯ ಪ್ರಜೆಗಳ ಗತಿಯೇನು. ಶೀಘ್ರವೇ ಪಿಎಸ್‌ಐ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮೇಲಿಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿದ್ದು ಇಂತವರ ವಿರುದ್ದ ಪ್ರತಿಯೊಂದು ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸುವ ಮೂಲಕ ಇಂತಹ ಪೊಲೀಸ್‌ ಅಧಿಕಾರಿಗಳಿಗೆ ಬುದ್ಧಿ ಕಲಿಸಬೇಕು ಎಂದರು.

ಹಿರಿಯ ನ್ಯಾಯವಾದಿ ಯು.ಆರ್‌. ಜೋಕಿ ಮಾತನಾಡಿ, ವಕೀಲರಾದ ಸಂದೀಪ ಮಾಳಿ, ಬಸವರಾಜ ಟೊಣ್ಣೆ ಹಾಗೂ ಅಶೋಕ ಹರಗಾಪೂರೆ ಇವರು ಕಕ್ಷಿದಾರನ ಪಿರ್ಯಾದು ಸಲ್ಲಿಸಲು ಪೊಲೀಸ್‌ ಠಾಣೆಗೆ ತೆರಳಿದ ಸಂದರ್ಭದಲ್ಲಿ ನ್ಯಾಯವಾದಿಗಳಿಗೆ ಅಪಮಾನ ಮಾಡಿರುವ ಘಟನೆ ದುರದೃಷ್ಟಕರ. ಪಿರ್ಯಾದು ಸ್ವೀಕರಿಸುವುದು ಪೊಲೀಸರ ಕರ್ತವ್ಯವಾಗಿದೆ. ಅದನ್ನು ಬಿಟ್ಟು ಕಕ್ಷಿದಾರನ ಪರ‌ ವಕೀಲರ ನಿಂದನೆ ಮಾಡುವುದು ಕರ್ತವ್ಯಲೋಪವಾಗುತ್ತದೆ. ಆದ್ದರಿಂದ ಇವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಎಸ್‌.ವಾಯ್‌. ಹೊಸಟ್ಟಿ, ಪ್ರಧಾನ ಕಾರ್ಯದರ್ಶಿ ಎಲ್.ವೈ. ಅಡಿಹುಡಿ, ಸಹ ಕಾರ್ಯದರ್ಶಿ ಆರ್‌.ಎಸ್‌. ರೊಡ್ಡನವರ ಮತ್ತು ಪಿ.ಎಲ್. ಮನ್ನಿಕೇರಿ, ಖಜಾಂಚಿ ವಿ.ಕೆ. ಪಾಟೀಲ, ಮಹಿಳಾ ಪ್ರತಿನಿಧಿ ಎ.ಎಚ್. ಗೊಡ್ಯಾಗೋಳ, ಹಿರಿಯ ನ್ಯಾಯವಾದಿಗಳಾದ ಕೆ.ಎಲ್. ಹುಣಶ್ಯಾಳ, ಎಸ್‌.ಎಸ್‌. ಗೋಡಿಗೌಡರ, ಎ.ಕೆ. ಮದಗನ್ನವರ, ವಿ.ವಿ. ನಾಯಿಕ, ಬಿ.ಎನ್‌. ಸಣ್ಣಕ್ಕಿ, ಆರ್‌.ಬಿ. ಮಮದಾಪೂರ, ಎಂ.ಎಲ್. ಸವಸುದ್ದಿ, ಆರ್‌.ಎಂ. ಐಹೊಳಿ, ಬಿ.ವೈ. ಹೆಬ್ಟಾಳ, ಎ.ಎಸ್‌. ಕೌಜಲಗಿ, ಎ.ಬಿ. ಬಾಗೋಜಿ, ಎಲ್.ಬಿ. ವಡೇರ, ಪಿ.ಎಸ್‌. ಮಲ್ಲಾಪೂರ, ಆರ್‌.ಬಿ. ಕುಳ್ಳೂರ, ಎಸ್‌.ಎಲ್. ಪಾಟೀಲ, ವೈ.ಎಸ್‌. ಖಾನಟ್ಟಿ, ರಾಮನಗೌಡ ನಾಡಗೌಡರ ಮತ್ತು ಹಿರಿಯ ನ್ಯಾಯವಾದಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next