Advertisement

ಪೊಲೀಸ್‌ ದೌರ್ಜನ್ಯ ಖಂಡಿಸಿ ವಕೀಲರ ಪ್ರತಿಭಟನೆ

12:30 PM Jan 26, 2021 | Team Udayavani |

ಯಳಂದೂರು: ಪಟ್ಟಣದಲ್ಲಿ ಪೊಲೀಸರು ವಾಹನ ಸವಾರರಿಗೆ ನಿತ್ಯ ಕಿರುಕುಳ ನೀಡುತ್ತಿದ್ದು, ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲೂಕು ವಕೀಲರ ಸಂಘದಿಂದ ಸೋಮವಾರ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಲಾಯಿತು.

Advertisement

ಈ ಸಂದರ್ಭದಲ್ಲಿ ಹಿರಿಯ ವಕೀಲ ಎಂ. ಮಾದೇಶ್‌ ಮಾತನಾಡಿ, ಸಬ್‌ಇನ್ಸ್‌ಪೆಕ್ಟರ್‌, ಪೇದೆಗಳು, ಗೃಹ ರಕ್ಷಕ ಸಿಬ್ಬಂದಿ ಪಟ್ಟಣದ
ಪ್ರಮುಖ ಸರ್ಕಲ್‌ಗ‌ಳಲ್ಲಿ 8 ರಿಂದ 10 ಜನರು ಗುಂಪು ಕಟ್ಟಿಕೊಂಡು ಪ್ರತಿನಿತ್ಯ ವಾಹನ ಸವಾರರಿಗೆ ತಪಾಸಣೆ ನಡೆಸುವ ನೆಪದಲ್ಲಿ
ದೌರ್ಜನ್ಯ ಎಸಗುತ್ತಿದ್ದಾರೆ. ಇಲ್ಲಿ ಕಾನೂನು ನಿಯಮಗಳ ಉಲ್ಲಂಘನೆಯಾಗುತ್ತಿದೆ. ಬೈಕ್‌ ಸವಾರರ ವಾಹನ ನಿಲ್ಲಿಸಿದ ಕೂಡಲೇ ಕೀಯನ್ನು ಕಿತ್ತುಕೊಳ್ಳುತ್ತಾರೆ. ಆಸ್ಪತ್ರೆಗೆ ತೆರಳುವ ಉದ್ದೇಶದಿಂದ ಅಥವಾ ಇತರೆ ತುರ್ತು ಸಂದರ್ಭಗಳಲ್ಲೂ ಸವಾರರಿಗೆ ಹೆಲ್ಮೆಟ್‌, ಇತರೆ ವಿಚಾರಗಳಿಗೆ ದಂಡ ವಸೂಲು ಮಾಡುತ್ತಾರೆ.

ಈ ಬಗ್ಗೆ ಪ್ರಶ್ನಿಸಿದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಕೂಡಲೇ ಇದಕ್ಕೆ ಸಂಬಂಧಪಟ್ಟವರ ಕ್ರಮ ವಹಿಸಬೇಕು ಎಂದು
ಆಗ್ರಹಿಸಿದರು. ವಕೀಲರ ಸಂಘದ ಅಧ್ಯಕ್ಷ ಮಹದೇವ ಸ್ವಾಮಿ ಮಾತನಾಡಿ, ಪೊಲೀಸ್‌ ದೌರ್ಜನ್ಯದ ವಿರುದ್ಧ ಜಿಲ್ಲಾಧಿಕಾರಿ, ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ, ಉಸ್ತುವಾರಿ ಸಚಿವರು, ಗೃಹ ಸಚಿವಾಲಯ, ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಲಾಗುವುದು ಎಂದರು.

ಪ್ರತಿಭಟನೆಯಲ್ಲಿ ವಕೀಲರ ಸಂಘದ ಸಿದ್ದರಾಜು, ಕೆ.ಬಿ. ಶಶಿಧರ, ನಾಗರಾಜು, ಯರಿಯೂರು ಶಂಕರಸ್ವಾಮಿ, ಹೊನ್ನೂರು
ನಾಗರಾಜು, ರವೀಶ್‌, ಗಂಗವಾಡಿ ಸಂಪತ್ತು, ಬೂದಿತಿಟ್ಟು ನಾಗೇಂದ್ರ, ಶಾಂತರಾಜು, ಪ್ರತಿಮಾದೇವಿ, ಮಂಜುಳಾ ಮತ್ತಿತರರು
ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next