Advertisement

ವಕೀಲರ ಉಪವಾಸ ಸತ್ಯಾಗ್ರಹಕ್ಕೆ ಸಿಎಂ ಸಿದ್ದರಾಮಯ್ಯ ಬೆಂಬಲ 

04:13 PM Feb 05, 2018 | |

ಬೆಂಗಳೂರು : ಹೈಕೋರ್ಟ್‌ ನ್ಯಾಯಮೂರ್ತಿಗಳ ನೇಮಕಾತಿಗೆ ಆಗ್ರಹಿಸಿ  ಸೋಮವಾರ ಹೈಕೋರ್ಟ್‌ ವಕೀಲರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. 

Advertisement

ಮಾಜಿ ಅಡ್ವೋಕೇಟ್‌ ಜನರಲ್‌ ಹಾಗೂ ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರು ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಧರಣಿ ವೇಳೆ ಸ್ವಲ್ಪ ಅಸ್ವಸ್ಥಗೊಂಡ ಅವರನ್ನು ಹೈಕೋರ್ಟ್‌ ವೈದ್ಯರು ಪರಿಶೀಲಿಸಿ ಆಹಾರ ಸ್ವೀಕರಿಸುವಂತೆ ಸಲಹೆ ನೀಡಿದರು. ಆ ಬಳಿಕ ಧರಣಿ ಸ್ಥಳಕ್ಕೆ ಮರಳಿದರು. 

ಕೇಂದ್ರ ಸರ್ಕಾರ ನಮ್ಮ ಹೋರಾಟವನ್ನು  ಪರಿಗಣಿಸದೇ ಹೋದರೆ ರಾಜ್ಯದಾದ್ಯಂತ ಒಂದು ದಿನದ ಮಟ್ಟಿಗೆ ನ್ಯಾಯಾಲಯಗಳ ಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸುವುದಾಗಿ ವಕೀಲರು ಎಚ್ಚರಿಕೆ ನೀಡಿದ್ದಾರೆ. ಸಂಸತ್ ಭವನದ ಮುಂದೆಯೂ  ವಕೀಲರ ನಿಯೋಗವು ಸಾಂಕೇತಿವಾಗಿ ಪ್ರತಿಭಟನೆ ನಡೆಸಲೂ ವಕೀಲರು ತೀರ್ಮಾನಿಸಿದ್ದಾರೆ. 

ರಾಜ್ಯ ಹೈಕೋರ್ಟ್‌ಗೆ ಮಂಜೂರಾಗಿರುವ ಒಟ್ಟು ನ್ಯಾಯಮೂರ್ತಿಗಳ ಸಂಖ್ಯೆ 65. ಆ ಪೈಕಿ  38 ಹುದ್ದೆಗಳು  ಖಾಲಿ ಇವೆ ಎಂದು ತಿಳಿದು ಬಂದಿದೆ. 

ನಮ್ಮ ಬೆಂಬಲ ಸಂಪೂರ್ಣ ಬೆಂಬಲ 
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರೊಂದಿಗೆ ಧರಣಿ ನಡೆಯುತ್ತಿದ್ದ ಸ್ಥಳಕ್ಕಾಗಮಿಸಿ ವಕೀಲರೊಂದಿಗೆ ಮಾತುಕತೆ ನಡೆಸಿದರು. 

Advertisement

ಕರ್ನಾಟಕದ ವಿಚಾರದಲ್ಲಿ ಕೇಂದ್ರ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಹೈಕೋರ್ಟ್‌ನ ಶೇಕಡಾ  62 ರಷ್ಟು ಹುದ್ದೆಗಳು ಖಾಲಿ ಇವೆ . ಹೀಗಾದರೆ 
ನ್ಯಾಯಾಂಗ ವ್ಯವಸೆœಗೆ ಧಕ್ಕೆ ಯಾಗುತ್ತದೆ. ಸದನದಲ್ಲಿ ಗೊತ್ತುವಳಿ ಅಂಗೀಕರಿಸುವ ಬಗ್ಗೆಯೂ ಚಿಂತನೆ ನಡೆಸಿದ್ದೇವೆ ಎಂದರು. 

ವಕೀಲರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಈ ವೇಳೆ ಅವರು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next