ಅಲಹಾಬಾದ್: ಇತ್ತೀಚೆಗಷ್ಟೇ ಕುಟುಂಬದ ವಿರೋಧದ ನಡುವೆಯೇ ಅಂತರ್‌ಜಾತಿ ವಿವಾಹವಾದ ಉತ್ತರಪ್ರದೇಶದ ಬಿಜೆಪಿ ಶಾಸಕ ರಾಜೇಶ್ ಮಿಶ್ರಾ ಅವರ ಪುತ್ರಿ ಸಾಕ್ಷಿ ಮಿಶ್ರಾ, ಆಕೆಯ ಪತಿ ಅಜಿತೇಶ್ ಕುಮಾರ್ ಮೇಲೆ ಸೋಮವಾರ ಅಲಹಾಬಾದ್ ಹೈಕೋರ್ಟ್ ಆವರಣದಲ್ಲೇ ಹಲ್ಲೆ ನಡೆದಿದೆ.
ವಿಶೇಷವೆಂದರೆ, ಅವರ ವಿವಾಹವನ್ನು ನ್ಯಾಯಾಲಯ ಮಾನ್ಯ ಮಾಡಿ, ದಂಪತಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ ಕೆಲವೇ ನಿಮಿಷಗಳಲ್ಲಿ ಈ ಹಲ್ಲೆ ನಡೆದಿದೆ.
ನಾನು ದಲಿತ ಯುವಕನನ್ನು ಪ್ರೀತಿಸಿ ವಿವಾಹವಾಗಿರುವ ಕಾರಣ ನಮ್ಮ ಮನೆಯಲ್ಲಿ ತೀವ್ರ ವಿರೋಧವಿದೆ. ನನ್ನ ಅಪ್ಪನೇ ನಮ್ಮನ್ನು ಕೊಲ್ಲುವ ಸಾಧ್ಯತೆಯಿದೆ. ಜೀವಬೆದರಿಕೆ ಇರುವ ಕಾರಣ ನಮಗೆ ರಕ್ಷಣೆ ನೀಡಬೇಕೆಂದು ಕೋರಿ ಸಾಕ್ಷಿ ಮಿಶ್ರಾ ಕೋರ್ಟ್ ಮೆಟ್ಟಿಲೇರಿ ದ್ದರು. ಸೋಮವಾರ ವಿಚಾರಣೆ ನಡೆಸಿದ ಕೋರ್ಟ್, ಇವರ ವಿವಾಹವನ್ನು ಮಾನ್ಯ ಮಾಡಿದ್ದಲ್ಲದೆ, ಸೂಕ್ತ ರಕ್ಷಣೆ ಒದಗಿಸುವಂತೆ ಪೊಲೀಸರಿಗೆ ನಿರ್ದೇಶಿಸಿತು. ಆದರೆ, ವಿಚಾರಣೆ ಮುಗಿಸಿ ಹೊರಬರುತ್ತಿದ್ದಂತೆ ದಂಪತಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.
ಕಿಡ್ನಾéಪ್ ಆಗಿಲ್ಲ: ಕೋರ್ಟ್ ಆವರಣದೊಳಗೆ ಸಾಕ್ಷಿ-ಅಜಿತೇಶ್ ಮೇಲೆ ಹಲ್ಲೆ ನಡೆಯುತ್ತಿದ್ದರೆ, ಅದೇ ಸಮಯದಲ್ಲಿ ಮತ್ತೂಂದು ದಂಪತಿ ಯನ್ನು ಯಾರೋ ಅಪಹರಿಸಿದ್ದಾರೆ. ಇದರಿಂದ ಕೆಲಕಾಲ ಗೊಂದಲ ಹಾಗೂ ಹೈಡ್ರಾಮಾ ಸೃಷ್ಟಿಯಾಯಿತು. ಎಲ್ಲರೂ ಸಾಕ್ಷಿ-ಅಜಿತೇಶ್‌ರನ್ನೇ ಯಾರೋ ಕಿಡ್ನಾéಪ್ ಮಾಡಿದರು ಎಂದೇ ಭಾವಿಸಿದರು. ಆದರೆ, ಕಿಡ್ನಾéಪ್ ಆದ ದಂಪತಿ ಅವರಲ್ಲ ಎಂಬುದು ತಿಳಿದ ಬಳಿಕ ನಿಟ್ಟುಸಿರು ಬಿಟ್ಟರು.