Advertisement
ಈ ಕುರಿತು ಸುದ್ದಿಗಾರರ ಜತೆ ಮಾತನಾಡಿ, ಭಾನುವಾರ ಇ-ಮೇಲ್ ಮೂಲಕ ಸಂತ್ರಸ್ತೆಯ ಪತ್ರ ನೀಡಿರುವ ದೂರಿನ ಪ್ರತಿಯನ್ನು ನೇರವಾಗಿ ಪೊಲೀಸ್ ಆಯುಕ್ತರಿಗೆ ನೀಡಲು ಬಂದಿದ್ದೇವೆ. ರಮೇಶ್ ಜಾರಕಿಹೊಳಿ ಅವರಿಗೆ ಕೊರೊನಾ ದೃಢವಾಗಿದೆ ಎಂಬುದು ಗೊತ್ತಾಗಿದೆ. ಅವರ ಆರೋಗ್ಯದ ಬಗ್ಗೆ ಕಾಳಜಿಯಿದೆ. ಅವರ ಆರೋಗ್ಯ ಬೇಗ ಚೇತರಿಸಿಕೊಳ್ಳಲಿ, ಬೇಗ ಎಸ್‌ಐಟಿ ಕಡೆ ಕಳುಹಿಸಲಿ ಎಂದು ಕೊಲ್ಲಾಪುರ ದೆಲಿ ಹಾಗೂ ರೇಣುಕಾ ಯಲ್ಲಮ್ಮ ದೇವಿಯ ಬಳಿ ಪ್ರಾರ್ಥಿಸುತ್ತೇವೆ. ಆದರೆ, ಕೆಲವೊಂದು ಅನುಮಾನವಿದೆ. ಆರೋಪಿ ಆಸ್ಪತ್ರೆಯಲ್ಲೇ ಇಲ್ಲ. ಆರೋಪಿ ಕೊರೊನಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿಲ್ಲ ಎಂದು ನಮ್ಮ ಸ್ಥಳೀಯ ವಕೀಲರು ಮಾಹಿತಿ ಕೊಟ್ಟಿದ್ದಾರೆ. ಹೀಗಾಗಿ ಆರೋಪಿಗೆ ಕೊರೊನಾ ಬಂದಿರುವುದೇ ಅನುಮಾನವಿದೆ ಎಂದು ಜಗದೀಶ್ ಹೇಳಿದ್ದಾರೆ.
ರಾಜ್ಯ ಸರ್ಕಾರದ ಪ್ರಕರಣದ ಎಸ್‌ಐಟಿ ಪರವಾಗಿ ವಾದ ಮಂಡಿಸಲು ಹಿರಿಯ ಸರ್ಕಾರಿ ಅಭಿಯೋಜಕರಾದ ಪಿ.ಪ್ರಸನ್ನಕುಮಾರ್ ಮತ್ತು ಕಿರಣ್ ಜವಳಿ ಅವರನ್ನು ನೇಮಿಸಿತ್ತು. ಅದಕ್ಕೆ ಸಿಡಿ ಪ್ರಕರಣದ ಸಂತ್ರಸ್ತೆ, ನನ್ನ ಸಮ್ಮತಿಯಿಲ್ಲದೆ ಈ ಪ್ರಕ್ರಿಯೆ ನಡೆಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಸಂಬಂಧ ಮಂಗಳವಾರ ಸಂತ್ರಸ್ತೆ ತನ್ನ ಪರ ವಕೀಲರ ಮೂಲಕ ಗೃಹ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮತ್ತೂಂದೆಡೆ ವಕೀಲ ಮಂಜುನಾಥ್ ಅವರನ್ನು ವಕೀಲರ ಪರಿಷತ್‌ನಿಂದ ಅಮಾನತು ಮಾಡಿರುವ ಹಿನ್ನೆಲೆಯಲ್ಲಿ ಸಂತ್ರಸ್ತೆ ಪರವಾದ ಮಂಡಿಸಲು ಹಿರಿಯ ವಕೀಲರನ್ನು ನೇಮಕ ಮಾಡಲಾಗುವುದು ಎಂದು ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ :ಸಿ.ಡಿ. ಪ್ರಕರಣ ಸಿಬಿಐಗೆ ವಹಿಸಲು ಕೋರಿ ಅರ್ಜಿ: ಸರಕಾರ, ಎಸ್‌ಐಟಿಗೆ ಹೈಕೋರ್ಟ್ ನೋಟಿಸ್