Advertisement

ವಕೀಲರು ವೃತ್ತಿ ಧರ್ಮ ಮರೆಯಬೇಡಿ

07:25 PM Apr 02, 2019 | Team Udayavani |

ಕೆಂಗೇರಿ: ಯುವ ವಕೀಲರು ವೃತ್ತಿ ಧರ್ಮವನ್ನು ಮರೆಯಬಾರದು ಎಂದು ಹೈಕೋಟ್‌ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹೇಳಿದರು.

Advertisement

ಸರ್‌ ಎಂ.ವಿಶ್ವೇಶ್ವರಯ್ಯ ಬಡಾವಣೆಯ ಕೆಎಲ್‌ಇ ಕಾನೂನು ಕಾಲೇಜಿನಲ್ಲಿ ಸುರಾನ ಮತ್ತು ಕೆಎಲ್‌ಇ ಕಾನೂನು ಕಾಲೇಜು ಜಂಟಿಯಾಗಿ ಆಯೋಜಿಸಿದ್ದ “ಒಂದು ರಾಷ್ಟ್ರ ಒಂದು ಚುನಾವಣೆ’ ರಾಷ್ಟ್ರೀಯ ಸಾಂವಿಧಾನಿಕ ಕಾನೂನು ಅಣುಕು ನ್ಯಾಯಾಲಯ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ವಕೀಲರು ಮೊದಲು ತಮ್ಮ ಪಾತ್ರವನ್ನು ತಿಳಿದುಕೊಳ್ಳಬೇಕು. ವಕೀಲರು ಕರ್ತ್ಯವ್ಯ ಮರೆಯಬಾರದು. ನ್ಯಾಯಾಲಯದಲ್ಲಿ ಯುವ ವಕೀಲರು ನೈತಿಕತೆ ಮರೆಯದೆ ನಾಗರಿಕರಿಗೆ ಮೂಲಭೂತ ಹಕ್ಕುಗಳನ್ನು ಕಲ್ಪಿಸುವ, ರಕ್ಷಿಸುವ ಕೆಲಸಗಳನ್ನು ಮಾಡಬೇಕು ಎಂದರು.

ಎನ್‌ಎಲ್‌ಎಸ್‌ಐಯುವಿ ಉಪಕುಲಪತಿ ಡಾ.ಆರ್‌.ವೆಂಕಟರಾವ್‌, ಭಾರತ ಸರ್ಕಾರದ ಹೆಚ್ಚವರಿ ಸಾಲಿಸಿಟರ್‌ ಕೆ.ಪ್ರಭುಲಿಂಗ ಮುಖ್ಯ ಅಥಿತಿಗಳಾಗಿ ಪಾಲ್ಗೊಂಡಿದ್ದರು. ಕೆಎಲ್‌ಇ ಕಾಲೇಜಿನ ಪ್ರಾಂಶುಪಾಲ ಡಾ.ಜೆ.ಎಂ.ಮಲ್ಲಿಕಾರ್ಜುನಯ್ಯ, ಡಾ.ಅನಿತಾ.ಎಂ.ಜೆ, ಹಾಗೂ ಕಾಲೇಜಿನ ಸಿಬ್ಬಂದಿ, ದೇಶದ ವಿವಿಧ ರಾಜ್ಯಗಳ 50ಕ್ಕೂ ಹೆಚ್ಚು ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next