ಒಟ್ಟಾವಾ: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಸಾವಿನ ಹಿಂದೆ ಭಾರತ ಸರ್ಕಾರದ ಕೈವಾಡವಿದೆ ಎಂಬ ಹೇಳಿಕೆಯಿಂದ ಭಾರತ ಹಾಗೂ ಕೆನಾಡ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗಿರುವ ನಡುವೆ ಕೆನಾಡದಲ್ಲಿ ಮತ್ತೊರ್ವ ಖಲಿಸ್ತಾನಿ ಉಗ್ರ ನಾಯಕ ಸುಖಾ ದುನೆಕೆ ಹತ್ಯೆಯಾಗಿದೆ.
ಕೆನಡಾದ ಮೊಗಾ ಜಿಲ್ಲೆಯಲ್ಲಿ ದವೀಂದರ್ ಬಾಂಬಿಹಾ ಗ್ಯಾಂಗ್‌ನ ಸುಖದುಲ್ ಸಿಂಗ್ ಅಲಿಯಾಸ್ ಸುಖ ದುನೆಕೆಯನ್ನು ಬುಧವಾರ ರಾತ್ರಿ ಹತ್ಯೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
2017 ರಲ್ಲಿ ನಕಲಿ ಪಾಸ್‌ಪೋರ್ಟ್‌ನಲ್ಲಿ ಪಂಜಾಬ್‌ನ ಮೊಗಾದಿಂದ ಕೆನಡಾಕ್ಕೆ ಪಲಾಯನ ಮಾಡಿದ ಡುನೆಕೆ “ಎ” ವರ್ಗದ ದರೋಡೆಕೋರರಾಗಿದ್ದರು. ಆತ ಭಯೋತ್ಪಾದಕ ಅರ್ಷ್‌ದೀಪ್ ದಲ್ಲಾ ಅವರ ನಿಕಟ ಸಹಚರನಾಗಿದ್ದ ಮತ್ತು ಖಲಿಸ್ತಾನ್ ಮತ್ತು ಕೆನಡಾದೊಂದಿಗೆ ಸಂಪರ್ಕ ಹೊಂದಿರುವ 43 ದರೋಡೆಕೋರರಲ್ಲಿ ಈತನೂ ಒಬ್ಬರಾಗಿದ್ದ ಎನ್ನಲಾಗಿದೆ. ಬುಧವಾರ ರಾತ್ರಿ ಈತನನ್ನು ಹತ್ಯೆ ಮಾಡಿರುವ ಮಾಹಿತಿ ಇದೀಗ ಲಭ್ಯವಾಗಿದೆ.
ಹತ್ಯೆ ಹೊಣೆ ಹೊತ್ತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್:
ಕೆನಡಾದ ವಿನ್ನಿಪೆಗ್ ನಗರದಲ್ಲಿ ಭಯೋತ್ಪಾದಕ ಸುಖದೂಲ್ ಸಿಂಗ್ ಹತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ ಎಂದು ಫೇಸ್‌ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಫೇಸ್ ಬುಕ್ ನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹಾಕಲಾದ ಪೋಸ್ಟ್‌ನಲ್ಲಿ ದರೋಡೆಕೋರರಾದ ಗುರ್ಲಾಲ್ ಬ್ರಾರ್ ಮತ್ತು ವಿಕ್ಕಿ ಮಿಡ್ಖೇರಾ ಅವರ ಹತ್ಯೆಯಲ್ಲಿ ಸುಖ ಡುನುಕೆ ಎಂದೂ ಕರೆಯಲ್ಪಡುವ ಸುಖದೂಲ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿಕೊಂಡಿದ್ದು ಇದರ ಸೇಡು ತೀರಿಸಿಕೊಳ್ಳಲು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಯೋಜನೆ ರೂಪಿಸಿತ್ತು ಎಂದು ಹೇಳಿಕೊಂಡಿದೆ.
ಇದನ್ನೂ ಓದಿ: Cauvery issue ಸುಪ್ರೀಂ ಬಿಗ್ ಶಾಕ್; ತಮಿಳುನಾಡಿಗೆ ನಿತ್ಯ ನೀರು ಬಿಡಲು ರಾಜ್ಯಕ್ಕೆ ಸೂಚನೆ