Advertisement
ಪಟ್ಟಣಕ್ಕೆ ವಿವಿಧ ರಾಜ್ಯಗಳಿಂದ ಆಗಮಿಸಿ ವಸತಿ ನಿಲಯಗಳಲ್ಲಿ ಸಾಂಸ್ಥಿಕ ಕ್ವಾರೆಂಟೈನ್ ನಲ್ಲಿ ಉಳಿದುಕೊಂಡಿರುವವರಿಗೆ ಶ್ರೀ ಘನಮಠೇಶ್ವರ ಕಾಲೇಜ್ ಆವರಣದಲ್ಲಿ ಸಿದ್ಧಪಡಿಸಲಾಗುತ್ತಿರುವ ಅಡುಗೆ ತಯಾರಿಕೆಗೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿದ ಅವರು, ಬಡತನದಲ್ಲಿ ಹುಟ್ಟಿ ಬೆಳೆದು ಬಂದ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಬಡವರ ಕಷ್ಟ ಅನುಭವಿಸಿದ್ದಾರೆ. ಜನರಿಗಾಗಿ ಜನರಿಗೋಸ್ಕರ ತಮ್ಮ ಜೀವನವನ್ನುಮುಡಿಪಾಗಿಟ್ಟು ಕೆಲಸ ಮಾಡುತ್ತಿದ್ದಾರೆ. ವಿವಿಧ ರಾಜ್ಯಗಳಿಗೆ ದುಡಿಯಲು ಹೋಗಿದ್ದ ಬಡ ಕೂಲಿಕಾರ್ಮಿಕರು ಕೆಲಸವೂ ಇಲ್ಲದೇ ಇತ್ತ ಮರಳಿ ಬರಲೂ ಆಗದೇ ಅಲ್ಲಿಯೇ ಉಳಿದು ಊಟಕ್ಕೂ ಗತಿಯಿಲ್ಲದಂತೆ ತೊಂದರೆ ಪಡುತ್ತಿರುವುದನ್ನು ತಿಳಿದು ಶಾಸಕ ನಡಹಳ್ಳಿ ಅವರು ಆ ಎಲ್ಲರನ್ನು ಮರಳಿ ನಮ್ಮ ತಾಲೂಕಿಗೆ ಕರೆತಂದು ತಿಂಗಳಿಗಾಗುವಷ್ಟು ಊಟದ ಕಿಟ್ ನೀಡಿದ್ದಾರೆ. ಇಂತಹ ದಾಸೋಹವನ್ನು ಮೈಗೂಡಿಸಿಕೊಂಡು ಸಮಾಜಕ್ಕಾಗಿ ಮಿಡಿಯುತ್ತಿರುವ ಹೃದಯಕ್ಕೆ ಶ್ರೀ ಖಾಸ್ಗತರ ಹಾಗೂ ಶ್ರೀ ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಸದಾ ಇರಲಿ ಎಂದು ಹಾರೈಸಿದರು.
Advertisement
ಶಾಸಕರ ದಾಸೋಹ ಕಾರ್ಯ ಶ್ಲಾಘನೀಯ: ಸ್ವಾಮೀಜಿ
06:56 AM May 16, 2020 | Suhan S |
Advertisement
Udayavani is now on Telegram. Click here to join our channel and stay updated with the latest news.