Advertisement

ಭಿಕ್ಷುಕನನ್ನು ರಕ್ಷಿಸಿ ಶಾಸಕಿ ಮಾನವೀಯತೆ

06:07 PM Aug 14, 2019 | Team Udayavani |

ಕೆಜಿಎಫ್: ಬೀದಿ ಬದಿ ತ್ಯಾಜ್ಯದ ನಡುವೆ ವರ್ಷದಿಂದ ಜೀವನ ನಡೆಸುತ್ತಿದ್ದ ಭಿಕ್ಷುಕನನ್ನು ಶಾಸಕಿ ಎಂ.ರೂಪಕಲಾ ರಕ್ಷಿಸಿ ಮಾನವೀಯತೆ ಮೆರೆದ ಘಟನೆ ನಡೆದಿದೆ.

Advertisement

ಶಾಸಕಿ ಎಂ.ರೂಪಕಲಾ ನಗರದಲ್ಲಿ ಪಾದಯಾತ್ರೆ ನಡೆಸುವ ವೇಳೆ, ಭಿಕ್ಷುಕ ತ್ಯಾಜ್ಯದಲ್ಲಿರುವುದನ್ನು ಕಂಡು ರಕ್ಷಿಸುವಂತೆ ಸೂಚಿಸಿದ್ದರು. ಆದರೆ, ಅಧಿಕಾರಿಗಳು ಕ್ರಮ ಕೈಗೊಂಡಿರಲಿಲ್ಲ. ಸಾರ್ವಜನಿಕರ ಕೋರಿಕೆಯಂತೆ ಸ್ಥಳಕ್ಕೆ ಆಗಮಿಸಿದ ಶಾಸಕಿ, ಕೂಡಲೇ ನಗರಸಭೆ ಆಯುಕ್ತ ಆರ್‌.ಶ್ರೀಕಾಂತ್‌, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಕುಮಾರ್‌ ಅವರನ್ನು ಸ್ಥಳಕ್ಕೆ ಕರೆಸಿದರು. ತ್ಯಾಜ್ಯದಲ್ಲಿದ್ದ ಭಿಕ್ಷುಕನನ್ನು ನಗರಸಭೆ ಸಿಬ್ಬಂದಿ ಆ್ಯಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಿ ಸ್ವಚ್ಛಗೊಳಿಸಿದರು. ಹಲವಾರು ತಿಂಗಳಿಂದ ಸ್ನಾನ ಮಾಡದೆ ಇದ್ದ ಆತನಿಗೆ ಸ್ನಾನ ಮಾಡಿಸಿ, ಹೊಸ ಬಟ್ಟೆ ಕೊಡಿಸಲಾಯಿತು. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿಕೊಡಲಾಯಿತು.

ತರಾಟೆ: ನಗರಸಭೆಯಲ್ಲಿ ವಿವಿಧ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಶಾಸಕಿ, ಬೆಸ್ಕಾಂ ಅಧಿಕಾರಿ ಪ್ರವೀಣ್‌ ಅವರನ್ನು ತರಾಟೆಗೆ ತೆಗೆದುಕೊಂಡರು. ಗೀತಾ ರಸ್ತೆಯಲ್ಲಿ ರಸ್ತೆ ಅಗಲೀಕರಣ ಮಾಡಲು ಬೆಸ್ಕಾಂ ವಿದ್ಯುತ್‌ ಕಂಬ ಬದಲಾಯಿ ಸುತ್ತಿಲ್ಲ. ಕೆಲಸ ಮುಗಿಸಿ ರಸ್ತೆ ದುರಸ್ತಿಪಡಿಸಬೇಕೆಂದರು.

ಸುಸಜ್ಜಿತ ಬಡಾವಣೆ ನಿರ್ಮಿಸಿ ನಿವೇಶನ ನೀಡಲಾಗುವುದು. ಸಾರ್ವಜನಿಕ ಪಾಲುದಾರಿಕೆ ಆಧಾರದಲ್ಲಿ ಬಿಪಿಎಲ್, ಎಪಿಎಲ್ ಕಾರ್ಡು ಇರುವವರಿಗೆ ಮನೆ ನೀಡಲಾಗುವುದು ಎಂದು ತಿಳಿಸಿದರು. ಊರಿಗಾಂ ಪೇಟೆ ಸೋಮೇಶ್ವರ ದೇವಾಲಯದಲ್ಲಿ ವೇದಪಾಠ ಶಾಲೆ ಪ್ರಾರಂಭಕ್ಕೆ ಮತ್ತು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯುರ್ವೇದ ವೈದ್ಯರ ನೇಮಕಕ್ಕೆ ಪ್ರಯತ್ನ ಮಾಡಲಾಗುವುದು ಎಂದು ಶಾಸಕಿ ತಿಳಿಸಿದರು. ಈ ಮುನ್ನ ಪಾಂಡಾರ್‌ ಲೈನಿಗೆ ಭೇಟಿ ನೀಡಿ ಕಾಲೋನಿಯ ಜನರ ಜೊತೆ ಮಾತುಕತೆ ನಡೆಸಿದರು. ನಗರಸಭೆ ಆಯುಕ್ತ ಆರ್‌.ಶ್ರೀಕಾಂತ್‌, ತಹಶೀಲ್ದಾರ್‌ ನಾಗರಾಜ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next