ಮಾಗಡಿ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಎ.ಮಂಜುಗೆ 40 ಸಾವಿರ ಮತ ಮತ ಹಾಕಿಸಿ ಗೆಲ್ಲಿಸಿದ್ದೇನೆ. ಆದರೆ ಅವರು ನಮ್ಮನ್ನು ನಿರ್ಲಕ್ಷಿಸಿದ್ದಾರೆ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ಹಾಗೂ ಕೆಂಪೇಗೌಡ ಪ್ರಾಧಿಕಾರದ ನಿರ್ದೆಶಕ ಎಚ್.ಎಂ.ಕೃಷ್ಣಮೂರ್ತಿ ಆರೋಪಿಸಿದರು.
ಪಟ್ಟಣದ ನಾಡಪ್ರಭು ಕೆಂಪೇಗೌಡ ಪ್ರತಿಮೆ ಬಳಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ನನ್ನ ಪರವಾದ 40 ಸಾರ ಮತವನ್ನು ಶಾಸಕ ಎ. ಮಂಜುಗೆ ಹಾಕಿಸಿ ಗೆಲ್ಲಿಸಲು ಸಹಕರಿಸಿದ್ದೇನೆ. ಜೊತೆಗೆ ಪುರಸಭಾ ಚುನಾವಣೆ ವೇಳೆ ಅನಾರೋಗ್ಯದಿಂದ ನಾನು ಬಳಲುತ್ತಿದ್ದರೂ, ಶಾಸಕ ಎ.ಮಂಜು ಪರ ಚುನಾವಣೆ ಮಾಡಿ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದೇನೆ ಎಂದರು.
ತಾಲೂಕಿನ ಅಭಿವೃದ್ಧಿ ಬಗ್ಗೆ ನಿಲಕ್ಷ್ಯ: ಸರ್ಕಾರ ಮತ್ತು ಬಿಬಿಎಂಪಿ ಕೋಟ್ಯಾಂತರ ರೂ. ಹಣ ಬಿಡು ಗಡೆ ಮಾಡಿದರೂ, ಆ ಹಣವನ್ನು ತಂದು ಅಭಿವೃದ್ದಿ ಪಡಿಸುವ ಚಿಂತನೆ ಮಾಡಿಲ್ಲ. ನಾನು ಪ್ರತಿವರ್ಷ ಆಯೋಜಿಸುವ ಕೆಂಪೇಗೌಡ ಜಯಂತಿ, ಉಚಿತ ಆರೋಗ್ಯ ಶಿಬಿರ ಸೇರಿದಂತೆ ಇತರೆ ಯಾವುದೇ ಕಾರ್ಯಕ್ರಮಗಳಿಗೆ ಶಾಸಕ ಎ.ಮಂಜು ಅವರು ಭಾಗಿಯಾಗದೆ ತಾಲೂಕಿನ ಅಭಿವೃದ್ದಿ ಬಗ್ಗೆ ನಿರ್ಲಕ್ಷಿಸಿದ್ದಾರೆ ಎಂದರು.
ಕೆಂಪೇಗೌಡ ಕೋಟೆ ಅನಾಥ: ನಾಡಪ್ರಭು ಕೆಂಪೇ ಗೌಡ ಕಟ್ಟಿದ ಕೋಟೆ ಅಭಿವೃದ್ಧಿ ಕಾಣದೆ ಅನಾಥ ವಾಗಿದೆ. ಕೆಂಪಾಪುರ ಗ್ರಾಮದ ಕೆಂಪೇಗೌಡ ಸಮಾಧಿ ಅಭಿವೃದ್ಧಿಯಾಗಿಲ್ಲ. ಕನಿಷ್ಠ ಪಕ್ಷ ಗ್ರಾಮದ ಹಿರಿಯರನ್ನು ಗುರುತಿಸಿ ಅವರಿಗೆ ಕೆಂಪೇಗೌಡ ಪ್ರಶಸ್ತಿ ನೀಡಲಿಲ್ಲ. ಕೆಂಪೇಗೌಡರು ನಿರ್ಮಿಸಿರುವ ನೂರಾರು ಕೆರೆ, ಕಟ್ಟೆ, ಕಲ್ಯಾಣಿಗಳನ್ನು ದುರಸ್ಥಿಪಡಿಸಿ ಜೀಣ್ರೋದ್ಧಾರ ಮಾಡಲು ಮುಂದಾಗಲಿಲ್ಲ.ಕೆಂಪಾಪುರದ ಗ್ರಾಮ ಜನರನ್ನು ಒಪ್ಪಿಸಿ ಭೂಸ್ವಾಧೀನಪಡಿಸಿಕೊಂಡು ಗ್ರಾಮವನ್ನು ಅಭಿವೃದ್ದಿಗೊಳಿಸಲು ಸರ್ಕಾರ ಮುಂದಾಗಬೇಕು ಎಂದು ಸರ್ಕಾರವನ್ನು ಒತಾ್ತುಸಿದರು.
ಕೆಂಪೇಗೌಡ ಸಮಾಧಿ ಸ್ಥಳದಿಂದ ಜ್ಯೋತಿ: ಬುಧವಾರದಂದು ಬೆಂಗಳೂರಿನ ರಾಜಕುಮಾರ್ ಗಾಜಿನ ಮನೆಯಲ್ಲಿ ನಡೆಯುವ 510ನೇ ಕೆಂಪೇ ಗೌಡ ಜಯಂತೋತ್ಸವಕ್ಕೆ ತಾಲೂಕಿನ ಕೆಂಪಾಪುರದ ಕೆಂಪೇಗೌಡ ಸಮಾಧಿ ಸ್ಥಳದಿಂದ ಭವ್ಯ ಮರವಣಿಗೆ ಯಲ್ಲಿ ಜ್ಯೋತಿ ಕೊಂಡೊಯ್ಯುವುದು. ಎಂದು ತಿಳಿಸಿದರು.
ಬೆಂಗಳೂರಿನ ಲಾಲ್ಬಾಗ್‌ನ ರಾಜಕುಮಾರ್ ಗಾಜಿನ ಮನೆಯಲ್ಲಿ ನಡೆಯಲಿರುವ ಕೆಂಪೇಗೌಡ ಜಯಂತೋತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗವಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕೇಂದ್ರ ಸಚಿವ ಸದಾನಂದ ಗೌಡ, ಉಪಮುಖ್ಯಮಂತ್ರಿ ಅಶ್ವಥ್‌ನಾರಾಯಣ, ಸೇರಿದಂತೆ ಅನೇಕ ಸಚಿವರು, ಶಾಸಕರು, ಬಿಬಿಎಂಪಿ ಮೇಯರ್ ಸೇರಿದಂತೆ ಜಿಲ್ಲಾಧಿಕಾರಿ, ಚಿಂತಕರು, ಸಂಶೋಧಕರು, ಸಾತಿಗಳು ಭಾಗವಹಿಸ ಲಿದ್ದು, ತಾಲೂಕಿನ ಜನತೆಯೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಸಿ ಕಾರ್ಯಕ್ರಮ ಯಶಸ್ವಿ ಗೊಳಿಸುವಂತೆ ಮನವಿ ಮಾಡಿದರು.