ಆಲೂರು: ಮೊದಲ ಪತ್ನಿ ಬದುಕಿದ್ದಾಗ ಅವಳಿಂದ ವಿಚ್ಛೇಧನ ಪಡೆಯದೆ ಎರಡನೆ ಮದುವೆಯಾದರೆ, ಎರಡನೆ ಪತ್ನಿಗೆ ಆಸ್ತಿಯಲ್ಲಿ ಹಕ್ಕು ಸಿಗುವುದಿಲ್ಲ ಎಂದು ಜೆಎಂಎಫ್ ನ್ಯಾಯಾಧೀಶೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಡಿ. ಎಸ್. ಪ್ರತಿಭಾ ತಿಳಿಸಿದರು. ಪಾಳ್ಯ ಹೋಬಳಿ ನಾಕಲಗೂಡು ಗ್ರಾಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾ. ವಕೀಲರ ಸಂಘ, ಕಣತೂರು ಗ್ರಾಪಂ ಮತ್ತು ತಾಲೂಕಿನ ಎಲ್ಲ ಇಲಾಖೆಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ, ಸ್ವಾತಂತ್ರ್ಯದ ಅಮೃತ ಮಹೊತ್ಸವದ ಅಂಗವಾಗಿ, ರಾಷ್ಟ್ರೀಯತೆ ಜಾಗೃತಿ ಮತ್ತು ಅಪರಿಮಿತ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಜನರಿಗೆ ಕಾನೂನು ಬಗ್ಗೆ ಅರಿವಿಲ್ಲದೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ವಿಶೇಷವಾಗಿ ಆಸ್ತಿಗೆ ಸಂಬಂಧಿಸಿದ ಪ್ರಕರಣ ಗಳು ನ್ಯಾಯಾಲಯದಲ್ಲಿ ದಾಖಲಾಗುತ್ತಿವೆ. ಇಂತಹ ಪ್ರಕರಣ ಗಳನ್ನು ಶೀಘ್ರ ಇತ್ಯರ್ಥ ಮಾಡಲೆಂದು ತಿಂಗಳು, ಎರಡು ತಿಂಗಳಿಗೊಮ್ಮೆ ನ್ಯಾಯಾಲಯದಲ್ಲಿ ಜನತಾ ನ್ಯಾಯಾಲಯ ನಡೆಯುತ್ತದೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ನ್ಯಾಯಾಧೀಶರ ಸಮ್ಮುಖದಲ್ಲಿ ಹಳ್ಳಿಗಳಿಗೆ ಹೋಗಿ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ;- ಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣ: ಆಶಿಶ್ ಮಿಶ್ರಾ ಜಾಮೀನು ಅರ್ಜಿ ವಜಾ
ವಕೀಲ ಕೆ. ಜಿ. ನಾಗರಾಜು ರವರು ಮಾತನಾಡಿ, ಕೆಲ ದಶಕ ಗಳ ಹಿಂದೆ ಪ್ರತಿ ಗ್ರಾಮಗಳಲ್ಲಿ ಪಂಚಾಯಿತಿ ತೀರ್ಮಾನಕ್ಕೆ ಬಲವಿತ್ತು. ನ್ಯಾಯಾಲಯದಲ್ಲೂ ಇದೆ ತೀರ್ಮಾನವಾಗುವುದ ರಿಂದ, ಅಂತಿಮವಾಗಿ ಪಂಚಾಯಿತಿ ತೀರ್ಮಾನಕ್ಕೆ ತಲೆ ಬಾಗ ಬೇಕಾಗುತ್ತದೆ. ಜನತಾ ನ್ಯಾಯಾಲಯವನ್ನು ಸದ್ಬಳಕೆ ಮಾಡ ಕೊಂಡರೆ ಸಮಯ, ಹಣ ಉಳಿಯುವುದರೊಂದಿಗೆ ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ ಎಂದು ಹೇಳಿದರು.
ತಾಪಂ ಮಾಜಿ ಸದಸ್ಯ ನಟರಾಜ್ ಅಧ್ಯಕ್ಷತೆ ವಹಿಸಿದ್ದರು. ತಾ. ವಕೀಲರ ಸಂಘದ ಅಧ್ಯಕ್ಷ ಕೆ. ಎಸ್. ರವಿಶಂಕರ್, ಸಹಾಯಕ ಸರ್ಕಾರಿ ಅಭಿಯೋಜಕಿ ಜಯಶ್ರೀ, ವಕೀಲರಾದ ಆರ್. ಬಿ. ಸುರೇಶ್, ಎಚ್. ಡಿ. ಮಧು, ಗ್ರಾಪಂ ಸದಸ್ಯೆ ಪದ್ಮಜಗದೀಶ್, ಅರಣ್ಯ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಪಿಡಿಒ ಪುರುಷೋತ್ತಮ, ಮೋಹನ್ ಇತರರು ಹಾಜರಿದ್ದರು.
ಸೂಕ್ತ ನಿರ್ಧಾರದಿಂದ ವಿವಾದ ತಡೆ ಸಾಧ್ಯ ಪತಿ ಬದುಕಿದ್ದಾಗ ಪಿತ್ರಾರ್ಜಿತ ಪತ್ನಿಗೆ ಆಸ್ತಿಯಲ್ಲಿ ಹಕ್ಕು ಬರುವುದಿಲ್ಲ. ಹಕ್ಕುದಾರ ಮರಣ ಹೊಂದಿದ ನಂತರ ಅವನ ಪತ್ನಿ ಜತೆಗೆ ಮಕ್ಕಳನ್ನೂ ಸೇರಿಸಿ ಖಾತೆ ಮಾಡಿದರೆ ಮುಂಬರುವ ವಿವಾದಗಳನ್ನು ತಡೆಗಟ್ಟಬಹುದು. ಪಿತ್ರಾರ್ಜಿತ ಆಸ್ತಿಗೆ ಎಲ್ಲರೂ ಹಕ್ಕುದಾರರಾಗಿರುತ್ತಾರೆ. ಸ್ವಯಾರ್ಜಿತ ಆಸ್ತಿಗೆ ಕೊಂಡವರು ಮಾತ್ರ ಹಕ್ಕುದಾರರಾಗಿ ರುತ್ತಾರೆ ಎಂದು ವಕೀಲ ಬಿ. ಡಿ ಸಂದೀಪ್ ವಿವರಿಸಿದರು.