Advertisement
ಮಿಲ್ಲರ್ ರಸ್ತೆಯ ಅಂಬೇಡ್ಕರ್ ಭವನದಲ್ಲಿ ಬುಧವಾರ ಆಯೋಜಿಸಲಾದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾರೂ ವಿದ್ಯುತ್ ಸಂಪರ್ಕದಿಂದ ವಂಚಿತರಾಗ ಬಾರದು ಎಂಬ ಉದ್ದೇಶದಿಂದಾಗಿ ಯಾವುದೇ ಪ್ರದೇಶದಲ್ಲಿ ಮನೆ ಹೊಂದಿದ್ದರೂ, ವಿದ್ಯುತ್‌ಗಾಗಿ ಅರ್ಜಿ ಸಲ್ಲಿಸಿದ ತಕ್ಷಣ ಸಂಪರ್ಕ ನೀಡುವ ಕಾನೂನು ರೂಪಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.
Related Articles
Advertisement
ಇಂಧನ ಸಚಿವ ವಿ.ಸುನಿಲ್‌ಕುಮಾರ್ ಮಾತನಾಡಿ, ವಿದ್ಯುತ್‌ಗೆ ಬೇಡಿಕೆಯೂ ಬಹಳ ದೊಡ್ಡ ಪ್ರಮಾಣದಲ್ಲಿದೆ. ಬೇಡಿಕೆಗೆ ತಕ್ಕಂತೆ ನಿಗಮದ ಕಡೆಯಿಂದ ಉತ್ಪಾದನೆ ಹೆಚ್ಚಿಸುತ್ತಿದ್ದೇವೆ. ಹಸಿರು ಇಂಧನ ಇನ್ನಷ್ಟು ಉತ್ಪಾದಿಸಬೇಕೆಂಬ ಕಾರಣಕ್ಕೆ ಹೈಬ್ರೆಡ್ ಪಾರ್ಕ್ ನಿರ್ಮಿಸಲು ಕಲ್ಪನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಟ್ಟಿದ್ದಾರೆ. ಶರಾವತಿಯಲ್ಲಿ ವಿದ್ಯುತ್ ಸಂಗ್ರಹಿಸುವ ಸ್ಟೋರೇಜ್ ನಿರ್ಣಯವನ್ನು ತೆಗೆದುಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ ನಾಯಕ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಸೇರಿದಂತೆ ಮತ್ತಿತರರು ಉಪ ಸ್ಥಿತರಿದ್ದರು.
ಪವರ್ ಪಾಲಿಟಿಕ್ಸ್ ಮತ್ತು ಪೀಪಲ್ ಪಾಲಿಟಿಕ್ಸ್ಪವರ್ ಪಾಲಿಟಿಕ್ಸ್ ಮತ್ತು ಪೀಪಲ್ ಪಾಲಿಟಿಕ್ಸ್ ಎಂಬ ಎರಡು ಆಯ್ಕೆಗಳು ನಮ್ಮ ಮುಂದಿದೆ. ಅಧಿಕಾರಿದಲ್ಲಿರುವುದು ಒಂದು ರಾಜಕೀಯವಾದರೆ, ಅದೇ ಅಧಿಕಾರವನ್ನು ಜನರ ಪರವಾಗಿ ಬಳಸಿದರೆ ಅದು ಪೀಪಲ್ ಪಾಲಿಟಿಕ್ಸ್ ಆಗುತ್ತದೆ. ಜನ ಸಾಮಾನ್ಯರು ಶ್ರೀಮಂತರಿದ್ದರೆ ಸರ್ಕಾರಕ್ಕೆ ತೆರಿಗೆ ಬರುತ್ತದೆ. ಸರ್ಕಾರ ಮಾತ್ರ ಶ್ರೀಮಂತವಿದ್ದರೆ ಪ್ರಯೋಜನವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.