Advertisement

ಉಗ್ರ ಆರೋಪ ಹೊತ್ತ ಕಾರಣಕ್ಕೆ ಜಾಮೀನು ನಿರಾಕರಿಸುವಂತಿಲ್ಲ

01:40 PM May 29, 2017 | Team Udayavani |

ಹೊಸದಿಲ್ಲಿ: ‘ಉಗ್ರ’ ಆರೋಪ ಹೊತ್ತ ಕಾರಣಕ್ಕಾಗಿ ವಿಚಾರಣೆಯನ್ನೂ ನಡೆಸದೇ ಜಾಮೀನು ನಿರಾಕರಿಸಬಾರದು ಎಂದು ಕಾನೂನು ಆಯೋಗ ಸಲಹೆ ನೀಡಿದೆ. ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ಇಂಥವರನ್ನು ಬಂಧಿಸಿ, ಅವರ ವಿಚಾರಣೆ ನಡೆಸುವಾಗ ಪೂರ್ವ ನಿರ್ಧಾರವೆಂಬಂತೆ ಜಾಮೀನು ನಿರಾಕರಿಸಬಾರದು, ಸಾಕ್ಷ್ಯಗಳನ್ನು ಪರಿಶೀಲಿಸಿ ಬಳಿಕ ಜಾಮೀನು ನೀಡುವ ಅಥವಾ ತಿರಸ್ಕರಿಸುವ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಶಿಫಾರಸು ಮಾಡಿದೆ.

Advertisement

‘ಜಾಮೀನು ಸಂಬಂಧಿತ ಅವಕಾಶಗಳು’ ಕುರಿತಂತೆ ನಿವೃತ್ತ ನ್ಯಾ. ಬಿ.ಎಸ್‌. ಚೌಹಾಣ್‌ ನೇತೃತ್ವದ ಕಾನೂನು ಆಯೋಗ, ಕೇಂದ್ರ ಕಾನೂನು ಸಚಿವಾಲಯಕ್ಕೆ ವರದಿಯೊಂದನ್ನು ನೀಡಿದೆ. ಇದರಲ್ಲಿ ಕಾನೂನುಭಂಗ ಚಟುವಟಿಕೆಗಳ ನಿಯಂತ್ರಣ ಕಾಯ್ದೆ(ಯುಎಪಿಎ)ಯಡಿ ಬಂಧಿತರಾದವರಿಗೆ ಜಾಮೀನನ್ನೂ ನೀಡದೇ ಅವರ ಬಂಧನ ಅವಧಿಯನ್ನು ವಿಸ್ತರಿಸುತ್ತಿರುವ ಬಗ್ಗೆ ಆಯೋಗ ಪ್ರಸ್ತಾವಿಸಿದೆ.

ಬಂಧಿತರಾದವರ ವಿರುದ್ಧದ ಸಾಕ್ಷ್ಯಗಳನ್ನು ಕೂಲಂಕುಶವಾಗಿ ಪರಿಶೀಲಿಸಿದ ನಂತರ ಜಾಮೀನಿನ ಬಗ್ಗೆ ನಿರ್ಧಾರ ಮಾಡಬಹುದು. ಆದರೆ ಬಹುತೇಕ ಪ್ರಕರಣಗಳಲ್ಲಿ ಇಂಥವರನ್ನು 90 ದಿನಗಳವರೆಗೆ ಜೈಲಿನಲ್ಲಿರಿಸಿ, ನಂತರ ವಿಶೇಷ ಕೋರ್ಟ್‌ಗೆ ಪಬ್ಲಿಕ್‌ ಪ್ರಾಸಿಕ್ಯೂಟರ್‌ ವರದಿ ಆಧಾರದ ಮೇಲೆ 180 ದಿನಗಳವರೆಗೆ ವಿಸ್ತರಿಸಲು ಅವಕಾಶವಿದೆ. ಆದರೆ ಯುಎಪಿಎ ಅಡಿ ಬಂಧನಕ್ಕೊಳಗಾದವರಿಗೆ ಕೇವಲ 90 ದಿನಗಳವರೆಗೆ ಜೈಲಿನಲ್ಲಿ ಇರಿಸಲು ಸಾಧ್ಯವಿದೆ. ಇದರಲ್ಲಿ ಜಾಮೀನು ನೀಡಿಕೆ ಬಗ್ಗೆ ಕಠಿನ ನಿಯಮಗಳೇನಿಲ್ಲ ಎಂದು ಈ ಆಯೋಗ ತಿಳಿಸಿದೆ. ಆದರೆ, ಈ ಕಾಯ್ದೆಯಡಿ ಬಂಧಿತರಾದವರಿಗೆ ಕಠಿನ ಷರತ್ತುಗಳನ್ನು ಹಾಕಿ ಬಿಡುಗಡೆ ಮಾಡಬಹುದು ಎಂದು ಸಲಹೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next