ಹಾನಗಲ್ಲ: ವಿವಿಧ ಗ್ರಾಮಗಳಲ್ಲಿ ನಾಲ್ಕು ದಿನಗಳು ಸಂಚರಿಸುವ ಕಾನೂನು ಸಾಕ್ಷರತಾ ರಥಕ್ಕೆ ಸೋಮವಾರ ಬೆಳಗ್ಗೆ ಇಲ್ಲಿನ ನ್ಯಾಯಾಲಯ ಆವರಣದಲ್ಲಿ ಸಿವಿಲ್ ನ್ಯಾಯಾಧೀಶೆ ಶಾರದಾದೇವಿ ಹಟ್ಟಿ ಚಾಲನೆ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ಸೋಮಶೇಖರ ಕೊತಂಬರಿ, ಕಾರ್ಯದರ್ಶಿ ರಮೇಶ ತಳವಾರ, ಸದಸ್ಯರಾದ ಜೆ.ಬಿ.ಕೊಂಡೋಜಿ, ಎನ್.ಎಸ್.ದೊಡ್ಡಮನಿ, ಡಿ.ಎನ್.ಲಕ್ಮಾಪೂರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚನ್ನಬಸಪ್ಪ ಹಾವಣಗಿ, ಎಂ.ಎಸ್.ಹುಲ್ಲೂರ, ವಿನಾಯಕ ಕುರುಬರ, ಚಂದ್ರಶೇಖರ ಜಾಡರ, ಎಸ್.ಬಿ.ಕಳ್ಳಿನಿ, ರಂಗನಾಥ ಅಕ್ಕಿವಳ್ಳಿ, ಸತ್ಯನಾರಾಯಣ, ಆರ್.ಎಸ್.ಹಾದಿಮನಿ ಹಾಗೂ ಮತ್ತಿತರರು ಇದ್ದರು.
ಬಳಿಕ ತಾಲೂಕಿನ ಹೇರೂರ, ಉಪ್ಪಣಶಿ ಮತ್ತು ಸೋಮಸಾಗರ ಗ್ರಾಮಗಳಲ್ಲಿ ಸಾಕ್ಷರತಾ ರಥ ಸಂಚಾರ, ಕಾನೂನು ಅರಿವು-ನೆರವು ಕಾರ್ಯಕ್ರಮಗಳು ನಡೆದವು. ವಕೀಲರಾದ ಎಂ.ಎಸ್.ಹುಲ್ಲೂರ, ಜೆ.ಬಿ.ಕೊಂಡೋಜಿ, ವಿನಾಯಕ ಕುರುಬರಅವರು ಉಪನ್ಯಾಸ ನೀಡಿದರು.
Advertisement
ನಾನೂನು ಸಾಕ್ಷರತಾ ಕಾರ್ಯಕ್ರಮಗಳು ಮತ್ತು ಜನತಾ ನ್ಯಾಯಾಲಯವನ್ನು ಒಟ್ಟು 12 ಗ್ರಾಮಗಳಲ್ಲಿ ಆಯೋಜಿಸಲಾಗುತ್ತಿದೆ. ತಜ್ಞ ವಕೀಲರಿಂದ ಕಾನೂನು ವಿಷಯಗಳ ಬಗ್ಗೆ ವಿಶೇಷ ಉಪನ್ಯಾಸ ಮತ್ತು ಕಾನೂನು ತಿಳಿವಳಿಕೆ ನೀಡಲಾಗುತ್ತದೆ ಎಂದು ಹೇಳಿದರು.