ಮಲ್ಪೆ: ಮರಿಮೀನು ಬೇಟೆಯನ್ನು ನಿಷೇಧಿಸುವ ಮೀನುಗಾರರ ನಿರ್ಧಾರಕ್ಕೆ ಸರಕಾರದ ಪೂರ್ಣ ಬೆಂಬಲವಿದೆ. ಮೀನುಗಾರಿಕೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮೀನುಗಾರರು ಯಾವುದೇಕಾನೂನನ್ನು ಸರಕಾರದ ವತಿಯಿಂದ ರೂಪಿಸಲು ಶಿಫಾರಸು ಮಾಡಿ ದಲ್ಲಿ ಅದನ್ನು ಜಾರಿಗೊಳಿಸಲು ಸಿದ್ದವಿರುವುದಾಗಿ ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನುಗಾರಿಕಾ ಇಲಾಖೆ ವತಿಯಿಂದ 24 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರಕಾರ ಆರಂಭದಿಂದಲೂ ಮೀನುಗಾರಿಕಾ ಬಂದರಿನ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡುತ್ತಾ ಬಂದಿದೆ. ಮಲ್ಪೆ ಬಂದರಿನಲ್ಲಿ 5 ಕೋ. ರೂ. ವೆಚ್ಚದಲ್ಲಿ 75 ಮೀ. ಜೆಟ್ಟಿ ನಿರ್ಮಾಣದ ಕಾಮಗಾರಿ ಆರಂಭವಾಗ ಲಿದೆ. ಬಂದರಿನ ಡ್ರೈನೇಜ್ ಸರಿಪಡಿಸುವ, ಇನ್ನಿತರ ಕೆಲಸಕ್ಕೆ ಹೆಚ್ಚುವರಿ 5 ಕೋಟಿ ರೂಪಾಯಿಯನ್ನು ಒದಗಿಸಲಾಗಿದ್ದು, ಮುಂದೆ ಹಂತಹಂತವಾಗಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ನಗರಸಭಾ ಸದಸ್ಯರಾದ ನಾರಾಯಣ ಪಿ. ಕುಂದರ್, ಗಣೇಶ್ ನೆರ್ಗಿ, ಸತೀಶ್ ಅಮೀನ್ ಪಡುಕರೆ, ಮೀನುಗಾರ ಮುಖಂಡರುಗಳಾದ ಸಾಧು ಸಾಲ್ಯಾನ್, ಶೇಖರ್ ಜಿ. ಕೋಟ್ಯಾನ್, ಎನ್.ಟಿ. ಅಮೀನ್, ಹರೀಶ್ ಜಿ. ಕೋಟ್ಯಾನ್, ಸಂತೋಷ್ ಕೊಳ, ಜಗನ್ನಾಥ ಸುವರ್ಣ, ಯೋಗೀಶ್ ಡಿ. ಸುವರ್ಣ, ಶಂಕರ್ ಎಲ್. ಪುತ್ರನ್, ಅರುಣ್ ಕೊಳ, ರಾಮ ಸುವರ್ಣ, ತಂಬಿ, ಉದಯಕುಮಾರ್, ಮಹಮ್ಮದ್ ಫೈಮ್, ಸದಾನಂದ ಬಂಕೇರಕಟ್ಟ, ಶ್ರೀಧರ ಉಪ್ಪುಂದ, ಆನಂದ ಸಾಲ್ಯಾನ್, ಸದಾನಂದ ಬೈಲಕರೆ, ಇಲಾಖಾಧಿಕಾರಿಗಳಾದ ಗಣಪತಿ ಭಟ್, ಪಾರ್ಶ್ವನಾಥ್, ಶಿವಕುಮಾರ್, ದಯಾನಂದ್, ಕಿರಣ್ ಕುಮಾರ್, ನಾಗರಾಜ್ ಉಪಸ್ಥಿತರಿದ್ದರು.
ಕೇಶವ ಎಂ. ಕೋಟ್ಯಾನ್ ಸ್ವಾಗತಿಸಿದರು. ಅಚ್ಯುತ್ತ ಅಮೀನ್ ಕಲ್ಮಾಡಿ ವಂದಿಸಿದರು. ರತ್ನಾಕರ ಸಾಲ್ಯಾನ್‌ಕಾರ್ಯಕ್ರಮ ನಿರೂಪಿಸಿದರು.
ಅಕ್ರಮ ಸಕ್ರಮ ಬೋಟಿಗೆ ಸಬ್ಸಿಡಿ ಡೀಸೆಲ್
ಅಕ್ರಮ ಸಕ್ರಮ ಸೇರಿದಂತೆ ಇದುವರೆಗೆ ನೀಡಲಾದ ಸಾಧ್ಯತಾ ಪತ್ರದಲ್ಲಿ ಬೋಟ್‌ನಿರ್ಮಾಣ ಮಾಡಿದ ಒಟ್ಟು 104 ಮಂದಿ ಮೀನು ಗಾರರಿಗೆ ಆ.7ರಂದು ಡೀಸೆಲ್ ಸಬ್ಸಿಡಿಯ ಪಾಸ್‌ಬುಕ್ ವಿತರಿಸಲಾಗುತ್ತಿದೆ. ಅಂದಿನಿಂದಲೇ ಅವರು ಸಬ್ಸಿಡಿ ಡೀಸೆಲನ್ನು ಪಡೆಯಬಹುದಾಗಿದೆ. ಅಸಮರ್ಪಕ ಬೋಟಿನ ದಾಖಲೆ ಪತ್ರಗಳನ್ನು ಸಕ್ರಮಗೊಳಿಸುವ ಕೆಲಸವನ್ನು ಮಾಡಲಾಗುತ್ತದೆ ಎಂದು ಸಚಿವ ಪ್ರಮೋದ್ ತಿಳಿಸಿದರು.