ಬೆಂಗಳೂರು: ರೈತರು ಬ್ಯಾಂಕ್‌ಗಳಲ್ಲಿ ಮಾಡಿದ ಸಾಲ ಮರುಪಾವತಿಸದೆ ಸುಸ್ತಿದಾರರಾದಲ್ಲಿ ಅವರ ಆಸ್ತಿಯನ್ನು ಜಪ್ತಿ ಮಾಡ ದಂತೆ ನಿರ್ಬಂಧ ವಿಧಿಸಲು ಕಾನೂನು ಜಾರಿಗೆ ತರು ವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.
ಭಾರೀ ಪ್ರವಾಹದಿಂದ ಬೆಳೆನಷ್ಟ ಅನುಭವಿಸುತ್ತಿ ರುವ ರೈತರಿಗೆ ಈ ಮೂಲಕ ಸಮಾಧಾನಕರ ಸಂಗತಿಯೊಂದನ್ನು ಹೇಳಿದ್ದಾರೆ.
ಕೃಷಿ ಮೇಳದಲ್ಲಿ ಮಾತನಾಡಿದ ಅವರು, ರೈತರ ಆಸ್ತಿ ಜಪ್ತಿ ಬದಲಿಗೆ ಸಾಲ ಮರುಪಾವತಿಗೆ ಸಮಯ ನೀಡಬೇಕೆಂಬ ಕಾನೂನು ತರಲು ಕಾನೂನು ತಜ್ಞರು ಸೇರಿ ಇನ್ನಿತರರ ಜತೆ ಚರ್ಚಿಸಲಾಗಿದೆ ಎಂದರು.
ದಿನೇ ದಿನೆ ಕೃಷಿ ಕಾರ್ಯ ಕಡಿಮೆಯಾಗುತ್ತಿದೆ. ರೈತರ ಆದಾಯದಲ್ಲೂ ಕುಸಿತ ಕಾಣುತ್ತಿದೆ. ಅದಕ್ಕಾಗಿಯೇ ಕೇಂದ್ರ ಸರಕಾರ ಕೃಷಿ ಸಮ್ಮಾನ್ ಯೋಜನೆ ಜಾರಿಗೊಳಿಸಿದ್ದು, ರಾಜ್ಯ ಸರಕಾರವೂ ಅದಕ್ಕೆ ನೆರವಾಗುತ್ತಿದೆ. ಕೊರೊನಾ, ಬೆಳೆ ನಷ್ಟ ಸೇರಿ ಇನ್ನಿತರ ಕಾರಣಗಳಿಂದಾಗಿ ರೈತರು ಬ್ಯಾಂಕ್‌ಗಳಲ್ಲಿ ಮಾಡಿದ ಸಾಲ ಮರುಪಾವತಿಸಲು ಪರದಾಡು ವಂತಾಗಿದೆ. ಬ್ಯಾಂಕ್‌ಗಳು ರೈತರ ಆಸ್ತಿ ಜಪ್ತಿ ಮಾಡಲು ಮುಂದಾಗುತ್ತಿವೆ. ಕೃಷಿ ಕಾರಣಗಳಿಂದ ಬ್ಯಾಂಕ್‌ಗಳಲ್ಲಿ ಸುಸ್ತಿದಾರರಾದವರ ಆಸ್ತಿಯನ್ನು ಜಪ್ತಿ ಮಾಡಬಾರದು ಎಂದು ಹೇಳಿದರು.
ಕೃಷಿ ಚಟುವಟಿಕೆಗಳಿಗೆ ಬ್ಯಾಂಕ್‌ಗಳಿಂದ ದೊರೆಯುತ್ತಿರುವ ಸಾಲದ ಪ್ರಮಾಣ ತೀರಾ ಕಡಿಮೆ ಇದೆ. 2ರಿಂದ 3 ಹೆಕ್ಟೆರ್ ಭೂಮಿ ಹೊಂದಿರುವ ರೈತರಿಗೆ 40ರಿಂದ 60 ಸಾವಿರ ರೂ. ಸಾಲ ನೀಡ ಲಾಗುತ್ತಿದೆ. ಇಷ್ಟು ಹಣದಲ್ಲಿ ಕೃಷಿ ಚಟುವಟಿಕೆ ಸಾಧ್ಯವಿಲ್ಲ. ಹೀಗಾಗಿ ಬ್ಯಾಂಕ್‌ಗಳು ಸಾಲದ ಅಥವಾ ಆರ್ಥಿಕ ನೆರವಿನ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಸೂಚಿಸಿದರು.
ರೈತ ಶಕ್ತಿ ಅಡಿ ಡೀಸೆಲ್‌ಗೆ ಸಬ್ಸಿಡಿ
ರೈತರು ಟ್ರ್ಯಾಕ್ಟರ್ ಸೇರಿ ಇನ್ನಿತರ ವಾಹನ ಗಳನ್ನು ಬಳಸಿ ಕೃಷಿಯಲ್ಲಿ ಅಭಿವೃದ್ಧಿ ಹೊಂದಲು ಅನುಕೂಲವಾಗುವಂತೆ ರೈತ ಶಕ್ತಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಅದರಡಿ 1 ಎಕ್ರೆ ಕೃಷಿ ಭೂಮಿ ಹೊಂದಿರುವವರಿಗೆ ಡೀಸೆಲ್ ಖರೀದಿಯಲ್ಲಿ 250 ರೂ. ಸಬ್ಸಿಡಿ ನೀಡಲಾಗುವುದು. ಒಟ್ಟು 5 ಎಕ್ರೆವರೆಗೆ ಸಬ್ಸಿಡಿ ನೀಡಲಾಗುತ್ತಿದ್ದು, ಒಟ್ಟು 1,250 ರೂ. ಸಬ್ಸಿಡಿ ಹಣ ಪಡೆಯಬಹುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದರು.