Advertisement

ನಿಯಮ ಜಾರಿ ಯಾರಿಗೂ ತೊಂದರೆ ಮಾಡುವುದ್ದಲ್ಲ

10:23 PM Jan 07, 2022 | Team Udayavani |

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಜನರ ಆರೋಗ್ಯ ಕಾಪಾಡುವ ಸಲುವಾಗಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದ್ದೇವೆ ಹೊರತು, ಯಾರಿಗೂ ತೊಂದರೆ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್‌ ಸ್ಪಷ್ಟಪಡಿಸಿದರು.

Advertisement

ನಗರದ ಒಕ್ಕಲಿಗರ ಕಲ್ಯಾಣಮಂಟಪದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ಕುಟುಂಬ ಸದಸ್ಯರಿಗೆ ಮತ್ತು ಮಳೆಯಿಂದ ಹಾನಿಯಾದ ಮನೆಗಳ ಮಾಲಿಕರಿಗೆ ಪರಿಹಾರ ವಿತರಿಸಿ ಮಾತನಾಡಿ, ರಾಜ್ಯದಲ್ಲಿ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ಕೊಡುವಂತಹ ಕೆಲಸವನ್ನು ಮಾಡುತ್ತೇವೆ.

ಮುಂದಿನ ಒಂದು ವಾರದಲ್ಲಿ ಎಲ್ಲಾ ಫಲಾನುಭವಿಗಳಿಗೆ ಪ್ರಥಮ ಡೋಸ್‌ ಲಸಿಕೆ ನೀಡುವ ಕೆಲಸ ಪೂರ್ಣಗೊಳಿಸುತ್ತೇವೆ ಎಂದ ಸಚಿವರು, ಪ್ರಸ್ತುತ ಕರ್ನಾಟಕ ಇಡೀ ದೇಶದಲ್ಲಿ 3ನೇ ಸ್ಥಾನ ಹೊಂದಿದೆ ಎಂದು ವಿವರಿಸಿದರು. ಡಿಕೆಶಿಗೆ ಕೋವಿಡ್‌ ಬಗ್ಗೆ ತಿಳಿವಳಿಕೆ ಇಲ್ಲ: ರಾಜ್ಯದಲ್ಲಿ ಕೊರೊನಾ ಸೋಂಕು ಮತ್ತು ರೂಪಾಂತÃ ‌ಗೊಂಡಿರುವ ಒಮಿಕ್ರಾನ್‌ ಸೋಂಕು ನಿಯಂತ್ರಿಸಲು ಕಠಿಣ ಕ್ರಮ ಕೈಗೊಂಡಿರುವುದಕ್ಕೆ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ. ಕೆ.ಶಿವಕುಮಾರ್‌ ಆಕ್ಷೇಪ ವ್ಯಕ್ತಪಡಿಸಿರುವುದಕ್ಕೆ ಅಸಮಾ ಧಾನಗೊಂಡ ಆರೋಗ್ಯ ಸಚಿವರು, ಸರ್ಕಾರ ಜಾರಿಗೊಳಿಸುತ್ತಿರುವ ಮಾರ್ಗ ಸೂಚಿಗಳಿಂದ ಆಟೋಚಾಲಕರಿಗೆ, ಡ್ರೈವರ್‌ಗಳಿಗೆ ತೊಂದರೆ ಆಗುತ್ತದೆ ಎಂದು ಹೇಳಿರುವುದು ದುರಾ ದೃಷ್ಟಕರ ಸಂಗತಿ.

ಅವರಿಗೆ(ಡಿಕೆಶಿ) ಕೋವಿಡ್‌ ಬಗ್ಗೆ ವಿಷಯ ತಿಳಿದುಕೊಂಡಿಲ್ಲ ಎಂದು ಟೀಕಿಸಿದರು. ಬೆಂಗಳೂರಲ್ಲೇ ಹೆಚ್ಚು: ಶಾಲೆಗಳಲ್ಲಿ ಆನ್‌ಲೈನ್‌ ವ್ಯವಸ್ಥೆ ಇರುವುದು ಕೇವಲ ಬೆಂಗಳೂರಿನಲ್ಲಿ ಮಾತ್ರ. ಇಡೀ ರಾಜ್ಯದಲ್ಲಿ ಪ್ರಸ್ತುತ ಶಾಲೆಗಳು ನಡೆಯುತ್ತಿದೆ. ಅದು ಮುಂದುವರಿಯುತ್ತದೆ. ಆದರೆ, ಬೆಂಗಳೂ ರಿ ನಲ್ಲಿ ಜನಸಂಖ್ಯೆ ಮತ್ತು ಸೋಂಕಿನ ಪ್ರಮಾಣ ಹೆಚ್ಚು ತ್ತಿ ರುವುದರಿಂದ ಬೆಂಗಳೂರಿಗೆ ಮಾತ್ರ ಕೆಲವೊಂದು ನಿ ಯಮಗಳನ್ನು ಜಾರಿಗೊಳಿಸಿದ್ದೇವೆ ಎಂದು ಹೇಳಿದರು.

ಪ್ರಯಾಣಿಕರ ಮೇಲೆ ಹದ್ದಿನ ಕಣ್ಣು: ಏರ್‌ಲೈನ್ಸ್‌ನಲ್ಲಿ ಏರ್‌ ಸುವೀಧಾ ಎನ್ನುವುದು ಇರುತ್ತದೆ. ವಿಮಾನದಲ್ಲಿ ಪ್ರಯಾಣ ಮಾಡುವವರು ಪ್ರಯಾಣ ಮಾಡುವ ಮೊದಲೇ ಅಂದರೆ 72 ಗಂಟೆ ಮುಂಚೆ ಕೋವಿಡ್‌ ನೆಗೆಟಿವ್‌ ವರದಿ ತೋರಿಸಬೇಕು. ಆಗ ಮಾತ್ರ ಅವರನ್ನು ಪ್ರಯಾಣ ಮಾಡಲು ಅವಕಾಶವನ್ನು ಕಲ್ಪಿಸಲಾಗುತ್ತದೆ. ಹೊರ ರಾಜ್ಯ ಅಥವಾ ಹೊರ ದೇಶಗಳಿಂದ ಬರುವ ಪ್ರಯಾಣಿಕರಿಗೆ ಇದು ಅನ್ವಯಿಸುತ್ತದೆ ಎಂದು ಹೇಳಿದರು.

Advertisement

ಘಿ ಮಹಾರಾಷ್ಟ್ರ ಇನ್ನಿತರೆ ಭಾಗಗಳಿಂದ ಪ್ರಯಾ ಣಿಕರು ಬರುತ್ತಿದ್ದಾರೆ ಎಂಬ ಮಾಹಿ  ತಿಯ ಹಿನ್ನೆಲೆ ಯಲ್ಲಿ ಸಿಎಂ ಅವರ ನೇತೃತ್ವದಲ್ಲಿ ಸಭೆ ನಡೆಸಿ ಗಡಿ ಭಾಗಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ, ಪ್ರಯಾಣಿಕರು ರಸ್ತೆ, ರೈಲಿನಲ್ಲಿ ಅಥವಾ ವಿಮಾನದಲ್ಲಿ ಬಂದರೂ ಅವರ ಮೇಲೆ ಹದ್ದಿನ ಕಣ್ಣಿಡಲಾಗಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next