ರಾಯಚೂರು: ದೇವದಾಸಿ ಪದ್ಧತಿಯನ್ನು ದೇವರು ನಿರ್ಮಿಸಿದಲ್ಲ. ಯಾವುದೊ ಸಂದರ್ಭದಲ್ಲಿ ಹುಟ್ಟಿಕೊಂಡ ಆಚರಣೆಯಾಗಿದೆ. ಈ ಆಚರಣೆಯು ಕಾನೂನು ಬಾಹಿರವಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾ ಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎಂ.ಸಿ ನಾಡಗೌಡ ತಿಳಿಸಿದರು.
ನಗರದ ಹರಿಜನವಾಡ ಬಡಾವಣೆಯ ಸಮುದಾಯ ಭವನದಲ್ಲಿ ನಡೆದ ಮಾಜಿ ದೇವದಾಸಿ ಮಹಿಳೆಯರಿಗೆ ಕಾನೂನು ಅರಿವು-ನೆರವು ಹಾಗೂ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತ ಕಾರ್ಯಕ್ರಮ ಉದ್ಘಾಟಿಸಿಅವರು ಮಾತನಾಡಿದರು. ಮಹಿಳೆಯರುತಮ್ಮ ಎಲ್ಲಾ ಹಕ್ಕುಗಳನ್ನು ಪಡೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ಸೇವಾ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿ ಗೋಪಾಲ ನಾಯಕ ಮಾತನಾಡಿ, ದೇವದಾಸಿ ಪದ್ಧತಿ ಸರ್ಕಾರ ನಿರ್ಮೂಲನೆ ಮಾಡಲು ಕಟ್ಟು ನಿಟ್ಟಿನ ಕಾನೂನನ್ನು ಜಾರಿಗೆ ತಂದಿದೆ. ಸರ್ಕಾರ ಈ ಕುರಿತು ಅರಿವು, ಆರ್ಥಿಕ ಹಾಗೂ ಆರೋಗ್ಯ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ವಿವರಿಸಿದರು.
ವಕೀಲರಾದ ವಿಜಯಲಕ್ಷ್ಮೀ ಮಾತನಾಡಿ, ಸಂವಿಧಾನದಲ್ಲಿಪುರುಷರಿಗೆ ಮತ್ತು ಮಹಿಳೆಯರಿಗೆಸಮಾನತೆಯನ್ನು ನೀಡಿದೆ. ಯಾವುದೇಕಾನೂನು ಸಂವಿಧಾನದ ಹೊರತಾಗಿಲ್ಲ.ಮಹಿಳೆಯರಿಗೆ ಇರುವ ಕಾನೂನುಗಳುಜಾರಿಯಾಗಬೇಕಾದ ಮನಸ್ಥಿತಿಗಳು ಬದಲಾಗಬೇಕು ಎಂದರು.
ಜಿಲ್ಲಾ ಮಹಿಳಾ ಶಕ್ತಿ ಕೇಂದ್ರದ ಕಲ್ಯಾಣಾಧಿಕಾರಿ ಗಿರಿಜಾ ವಿ.ಅಕ್ಕಿ ಮಾತನಾಡಿ, ಪ್ಲಾಸ್ಟಿಕ್ ಬಳಕೆ ನಿಲ್ಲಿಸಲು ಪ್ರತಿಯೊಬ್ಬರು ಪಣತೊಡಬೇಕು. ಈಗಾಗಲೇ ಜಿಲ್ಲೆಯಲ್ಲಿಪ್ಲಾಸ್ಟಿಕ್ ಕವರ್‌ಗಳ ಬಳಕೆಯನ್ನು ನಮ್ಮ ಹಂತದಲ್ಲಿ ಸ್ವಲ್ಪ ಮಟ್ಟಿಗೆ ನಿಲ್ಲಿಸುವ ಪ್ರಯತ್ನ ನಡೆಸಲಾಗಿದೆ ಎಂದರು.
ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಅಧ್ಯಕ್ಷ ಎಚ್.ಪದ್ಮಾ ಮಾತನಾಡಿದರು. ಸಂಘದ ಗೌರವ ಅಧ್ಯಕ್ಷ ಕೆ.ಜಿ. ವೀರೇಶ, ನವರತ್ನ ಸಂಘದ ಯುವಕಸಂಘದ ಅಧ್ಯಕ್ಷ ಕೆ.ಪಿ.ಅನೀಲ್ ಕುಮಾರ ಹಾಗೂ ಮಾಜಿ ದೇವದಾಸಿ ಮಹಿಳೆಯರು ಇದ್ದರು. ಶ್ರೀನಿವಾಸ ವಂದಿಸಿದರು.