Advertisement
ನಗರದ ಬಹುತೇಕ ಪ್ರಮುಖ ಶಿಕ್ಷಣ ಸಂಸ್ಥೆಗಳು ಶಾಲಾ ವಾಹನಗಳನ್ನು ಹೊಂದಿವೆ. ಆದರೆ ಎಲ್ಲ ಮಕ್ಕಳೂ ಈ ವಾಹನಗಳಲ್ಲಿ ಸಂಚರಿಸುತ್ತಿಲ್ಲ. ಖಾಸಗಿ ಬಾಡಿಗೆ ಟ್ಯಾಕ್ಸಿ ಅಥವಾ ಆಟೋ ರಿಕ್ಷಾಗಳಲ್ಲಿ ಬಹಳಷ್ಟು ಮಕ್ಕಳು ಪ್ರಯಾಣ ಮಾಡುತ್ತಾರೆ. ಖಾಸಗಿ ಬಾಡಿಗೆ ವಾಹನಗಳಲ್ಲಿ ಮಿತಿ ಮೀರಿ ಮಕ್ಕಳನ್ನು ಸಾಗಾಟ ಮಾಡಲಾಗುತ್ತಿದೆ ಎಂಬ ಆರೋಪ ಹಲವು ವರ್ಷಗಳಿಂದ ಇದ್ದು, ಈ ಹಿನ್ನೆಲೆಯಲ್ಲಿ ಮಂಗಳೂರಿನ ಪೊಲೀಸ್ ಆಯುಕ್ತರು ಈ ವರ್ಷ ಶಾಲಾರಂಭದಲ್ಲಿಯೇ ಎಲ್ಲ ಶಿಕ್ಷಣ ಸಂಸ್ಥೆಗಳ ಆಡಳಿತದ ಪ್ರತಿನಿಧಿಗಳನ್ನು ಕರೆಸಿ ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆಯ ಅಧಿಕಾರಿಗಳು, ಬಸ್ ಮಾಲಕರು, ಟ್ಯಾಕ್ಸಿ ಮತ್ತು ರಿಕ್ಷಾ ಚಾಲಕ/ ಮಾಲಕರ ಸಂಘಟನೆಗಳ ಪದಾಧಿಗಳ ಸಮಕ್ಷಮ ಜಾಗೃತಿ ಕಾರ್ಯಕ್ರಮವನ್ನು ನಡೆಸಿದ್ದಾರೆ.
Related Articles
Advertisement
ಮಾರ್ಗಸೂಚಿ ವಿವರ
•ಶಾಲಾ ವಾಹನಗಳಿಗೆ ಹಳದಿ ಬಣ್ಣದ ಜತೆ ಸ್ಟಿಕ್ಕರ್ ಅಳವಡಿಸಿರಬೇಕು. ಬಾಡಿಗೆ ವಾಹನವಾಗಿದ್ದರೆ ‘ಆನ್ ಸ್ಕೂಲ್ ಡ್ಯೂಟಿ’ ಎಂದು ಬರೆದಿರಬೇಕು.••ಪ್ರಥಮ ಚಿಕಿತ್ಸಾ ಪೆಟ್ಟಿಗೆ
•• ಕಿಟಿಕಿಯ ಭಾಗದಲ್ಲಿ ಗ್ರಿಲ್ಸ್ ಅಳವಡಿಸಿರಬೇಕು.
•• ಶಾಲೆಯ ಹೆಸರು ಮತ್ತು ಫೋನ್ ನಂಬ್ರ ಬರೆಯಬೇಕು.
•• ಮಕ್ಕಳ ಬ್ಯಾಗ್ ಇರಿಸಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು.
•• ಬಸ್ಸಿನಲ್ಲಿ ಮಕ್ಕಳ ಮೇಲುಸ್ತುವಾರಿಗೆ ಸಿಬಂದಿ ನೇಮಕ
•• ಜಿಪಿಎಸ್ ತಂತ್ರಜ್ಞಾನ
•• ಪಾರದರ್ಶಕ ಕಿಟಕಿ
•• ವಿದ್ಯಾರ್ಥಿಗಳ ಪೂರ್ಣವಾದ ಮಾಹಿತಿ
•• ಚಾಲಕನ ವಿವರ ಇರಬೇಕು
•• ಸ್ಪೀಡ್ ಗವರ್ನರ್ ಅಳವಡಿಸಿರಬೇಕು
•• ಅಗ್ನಿಶಾಮಕ ವ್ಯವಸ್ಥೆ ಇರಬೇಕು
•• ವಾಹನಗಳ ಬಾಗಿಲಿಗೆ ಬೀಗ ಇರುವುದು ಕಡ್ಡಾಯ
•• ವಾಹನದಲ್ಲಿ ಮಕ್ಕಳನ್ನು ಮಿತಿ ಮೀರಿ ತುಂಬಿಸ ಬಾರದು; ಇನ್ನೊಂದು ಮಗುವಿನ ಮಡಿಲಿನಲ್ಲಿ ಕುಳ್ಳಿರಿಸ ಬಾರದು
•• ಚಾಲಕನಿಗೆ ಕನಿಷ್ಠ 5 ವರ್ಷಗಳ ಚಾಲನಾ ಅನುಭವ ಅಗತ್ಯ
•• ವರ್ಷದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಮೋಟಾರು ವಾಹನ ನಿಯಮ ಉಲ್ಲಂಘನೆ ಅಥವಾ ಇತರ ಅಪರಾಧ ಎಸಗಿದವರನು ಚಾಲಕನಾಗಿ ನೇಮಿಸ ಬಾರದು.
•• ಮಿತಿ ಮೀರಿದ ವೇಗ, ಮದ್ಯಪಾನ ಮಾಡಿ ಅಥವಾ ಅಪಾಯಕಾರಿಯಾಗಿ ವಾಹನ ಚಲಾಯಿಸಿದ ಬಗ್ಗೆ ಒಂದು ಬಾರಿ ಕೇಸು ದಾಖಲಾದವರನ್ನು ಕೂಡ ನೇಮಿಸ ಬಾರದು.
•• ಮೋಟಾರು ವಾಹನ ಕಾಯ್ದೆ 1988ರ ಕಲಂ 74ರ ಪ್ರಕಾರ ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳು ಒಪ್ಪಂದ ವಾಹನ ರಹದಾರಿ ಹೊಂದಿರಬೇಕು. ಚಾಲಕರು ನೀಲಿಬಣ್ಣದ ಸಮವಸ್ತ್ರ ಮತ್ತು ಕಪ್ಪು ಬಣ್ಣದ ಜೂಟ್ ಧರಿಸಿರಬೇಕು. 12 ವರ್ಷದ ಒಳಗಿನ ಮಕ್ಕಳನ್ನು ಆಟೋ ರಿಕ್ಷಾದಲ್ಲಿ 6 ಮಂದಿಯನ್ನು ಹಾಗೂ ಆಮ್ನಿ ವಾಹನದಲ್ಲಿ 8 ಮಂದಿಯನ್ನು ಮಾತ್ರ ಕರೆದೊಯ್ಯಲು ಅವಕಾಶವಿದೆ. 12 ವರ್ಷಕ್ಕಿಂತ ಮೇಲಿನ ಮಕ್ಕಳನ್ನು ವಾಹನದ ಸೀಟುಗಳ ಸಾಮರ್ಥ್ಯದಷ್ಟೇ ಕರೆದೊಯ್ಯಬೇಕು