Advertisement
ಲಾವಂಚ ಬೆಳೆಯುವ ವಿಧಾನಗೊಂಚಲಿನ ರೂಪದಲ್ಲಿರುವ ಈ ಲವಂಚ ಗಿಡವನ್ನು ಬಿಡಿಸಿ ಒಂದೊಂದು ಹಿಳ್ಳುಗಳಾಗಿ ಮಾಡಿ ಸರಿ ಸುಮಾರು ಆರರಿಂದ ಆರುವರೆ ಇಂಚುಗಳಷ್ಟು ಅಂತರದಲ್ಲಿ ಗಿಡವನ್ನು ನೆಡಬೇಕು. ಇದೊಂದು ಬಹುವಾರ್ಷಿಕ ಬೆಳೆಯಾಗಿದ್ದು ಸಾಮಾನ್ಯವಾಗಿ ಎಲ್ಲ ವಿಧದ ಮಣ್ಣಿನಲ್ಲೂ ಬೆಳೆಯಬಹುದು. ಸುಮಾರು 2ರಿಂದ 3 ಅಡಿಗಳಷ್ಟು ಎತ್ತರವಾಗಿ ಬೆಳೆಯುವ ಈ ಹುಲ್ಲು ನಾಟಿ ಮಾಡಿದ 10 ತಿಂಗಳಿಗೆ ಕೊಯ್ಲಿಗೆ ಬರುತ್ತದೆ.
ನೆಟ್ಟು ಹತ್ತು ತಿಂಗಳಲ್ಲಿಯೇ ಇದರ ಬೇರನ್ನು ಕತ್ತರಿಸಿ ತೈಲ ತೆಗೆಯಬಹುದು. ಕತ್ತರಿಸುತ್ತಿದ್ದಂತೆಯೇ ಶೀಘ್ರದಲ್ಲಿ ಮೊತ್ತೊಂದು ಕೊಯ್ಲಿಗೆ ಸಿಗುವ ಲವಂಚ ಬಹುವಾರ್ಷಿಕ ಬೆಳೆಯಾಗಿದೆ.ಪಶ್ಚಿಮ ಮತ್ತು ಉತ್ತರ ಭಾರತದ ಕೃಷಿಕರಿಗೆ ಸಾಕಷ್ಟು ಪರಿಚಯವಿದೆ ಲವಂಚದ ಕೃಷಿ, ಪೊದೆ ಪೊದೆಯಾಗಿ ಬೆಳೆಯುತ್ತದೆ. ಮರಳು ಮಣ್ಣನ್ನು ಹೊರತುಪಡಿಸಿ ಬೇರೆ ಎಲ್ಲಾ ವಿಧದ ಮಣ್ಣಿನಲ್ಲೂ ಬೆಳೆಯಬಹುದು. ಸುಮಾರು ಒಂದೂವರೆಯಿಂದ ಎರಡು ಅಡಿಗಳಷ್ಟು ಎತ್ತರವಾಗಿ ಬೆಳೆಯುವ ಈ ಹುಲ್ಲು ಸಾಧಾರಣ ತೇವಾಂಶ ಹಾಗೂ ಉಷ್ಣಾಂಶ ಇರುವ ಪ್ರದೇಶಗಳಲ್ಲಿ ಹುಲುಸಾಗಿ ಜೊಂಡಿನಂತೆ ಹರಡುತ್ತದೆ. ಇನ್ನು ಇದನ್ನು ಕಾಲಕ್ಕೆ ತಕ್ಕಂತೆ ಕತ್ತರಿಸದೆ ಬೆಳೆಯಲು ಬಿಟ್ಟರೆ ಬೇರುಗಳು ಮಣ್ಣಿನಲ್ಲಿ ಎರಡು ಮೀಟರ್ ವರೆಗೂ ಬೆಳೆಯುವ ಮೂಲಕ ಮಣ್ಣಿನ ಸವಕಳಿಯನ್ನು ತಡೆಗಟ್ಟುವ ಸಾಮರ್ಥ್ಯವನ್ನು ಹೊಂದಿದೆ. ದರ್ಬೆಯ ಹುಲ್ಲಿನ ವಿನ್ಯಾಸವನ್ನು ಹೊಂದಿರುವ ಲವಂಚ ನಮ್ಮ ರೈತರಿಗೆ ಅಪರೂಪದ ಕೃಷಿಯೇನೂ ಅಲ್ಲ. ಆದರೆ ಸುಗಂಧ ದ್ರವ್ಯಕ್ಕಾಗಿ ಬಳಸ ಬಹುದಾದ ಈ ಹುಲ್ಲನ್ನು ವ್ಯಾಪಕ ಬೆಳೆದು ಆರ್ಥಿಕ ಲಾಭ ಮಾಡಿಕೊಳ್ಳುವ ಯತ್ನದಲ್ಲಿ ಮಾತ್ರ ರೈತರು ಸ್ಪಲ್ಪ ಪ್ರಮಾಣದಲ್ಲಿ ಹಿಂದೆ ಉಳಿದಿದ್ದಾರೆ. ಇದರ ಹುಲ್ಲಿನ ಕೆಳಭಾಗದಲ್ಲಿ ತಂತುಗಳಾಗಿ ಹರಡುವ ಬೇರುಗಳಿದ್ದು, ಸುಗಂಧಿತ ತೈಲವನ್ನು ಪಡೆಯಲು ಈ ಬೇರುಗಳನ್ನು ಭಟ್ಟಿಯಿಳಿಸುತ್ತಾರೆ.
Advertisement
ಲಾವಂಚ ಉಪಯೋಗಗಳು
ಕುಡಿಯುವ ನೀರಿಗೆ ಲವಂಚದ ಬೇರು ಹಾಕಿದರೆ ನೀರು ಸುಗಂಧ ಭರಿತವಾಗುವುದಲ್ಲದೆ ಆರೋಗ್ಯಕ್ಕೆ ಪೂರಕವಾಗಿಯತ್ತದೆ. ಇದಕ್ಕೆ ನೀರನ್ನು ಶುದ್ಧೀಕರಿಸುವ ವಿಶೇಷ ಶಕ್ತಿ ಇದ್ದು, ಕಲುಷಿತ ನೀರನ್ನು ಶುದ್ಧಿಕರುಸುವ ಹಾಗೂ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಬಳಸಲಾಗುತ್ತದೆ. ಲಾವಂಚದ ಇತರೆ ಉತ್ಪನ್ನಗಳು ಲಾವಂಚ ಕೇವಲ ಸುಗಂಧ ದ್ಯವ್ಯ, ಔಷಧಗಳ ತಯಾರಿಕೆಯಲ್ಲಿ ಮಾತ್ರವಲ್ಲದೆ ಸುವಾಸನೆ ಬೀರುವ ಬೀಸಣಿಕೆಗಳು, ಹಾರಗಳು, ಚಾಪೆಗಳು, ಟೋಪಿಗಳು, ಮುಂತಾದವುಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಇಷ್ಟೆ ಅಲ್ಲದೆ ಇದರ ಬೇರುಗಳನ್ನುಬಳಸಿ ಹೆಣೆದಿರುವ ಕುರ್ಚಿ, ಮಂಚಗಳಿಗೂ ಕೂಡಾ ಭಾರತೀಯ ಹಾಗೂ ಅಂತರ್ ರಾಷ್ಠ್ರೀಯ ಮಾರುಕಟ್ಟೆಯಲ್ಲಿಯೂ ಹೆಚ್ಚಿನ ಪ್ರಮಾಣದ ಬೇಡಿಕೆ ಪಡೆದಿವೆ. ಈ ಬೇರುಗಳಿಂದ ತಯಾರಿಸಲಾದ ವಸ್ತುಗಳಿಗೆ ನೀರು ಸಿಂಪಡಿಸಿದರೆ ಸುತ್ತಮುತ್ತಲಿನ ವಾತಾವರಣದಲ್ಲಿ ಸುವಾಸನೆ ತುಂಬಿಕೊಳ್ಳುತ್ತದೆ. *ಆದರ್ಶ ಕೆ.ಜಿ