Advertisement
ಕೆಂಪಗೆ ಕುದಿಯುವ ದ್ರವವನ್ನು ಹೊರಸೂಸುತ್ತಾ ಪರ್ವತಗಳು ಆರ್ಭಟಿಸುವುದನ್ನು “ಜ್ವಾಲಾಮುಖೀ ಸ್ಫೋಟ’ ಎಂದು ಕರೆಯುತ್ತಾರೆ. ಆ ಪರ್ವತವನ್ನು ಅಗ್ನಿ ಪರ್ವತ ಎಂದು ಎನ್ನುತ್ತಾರೆ. ಸಾವಿರಾರು ಕಿ.ಮೀ ವ್ಯಾಪಿಸಿ ಜೀವಸಂಕುಲವನ್ನು ನಾಶಮಾಡುವ ದೈತ್ಯ ಜ್ವಾಲಾಮುಖೀಗಳು ಎಂದಿನಿಂದಲೂ ಭೂಮಿಯ ಮೇಲೆ ತನ್ನ ಕರಾಳಮುಖವನ್ನು ತೋರಿವೆ. ಡೈನೋಸಾರ್ ಅವಸಾನ ಹೊಂದುವುದಕ್ಕೆ ಏನೇನು ಕಾರಣವಾಗಿರಬಹುದು ಎಂಬ ಪಟ್ಟಿಯಲ್ಲಿ ಜ್ವಾಲಾಮುಖೀ ಕೂಡಾ ಸೇರಿದೆ ಎಂದರೆ ಜ್ವಾಲಾಮುಖೀಯ ಶಕ್ತಿಯ ಆಗಾಧತೆಯನ್ನು ನಾವು ತಿಳಿಯಬಹುದು. ಸಮುದ್ರದÇÉಾಗುವ ಜ್ವಾಲಾಮುಖೀಗಳು ಬೃಹತ್ ಸುನಾಮಿಯನ್ನು ಸೃಷ್ಟಿಸಬಹುದು, ತೀವ್ರ ಪ್ರಮಾಣದ ಭೂಕಂಪನವನ್ನೂ ಉಂಟು ಮಾಡಬಹುದು.
ಭೂಮಿಯ ಅಡಿಯಲ್ಲಿ ಟೆಕ್ಟಾನಿಕ್ ತಟ್ಟೆಗಳಿವೆ. ಅದಕ್ಕೂ ಕೆಳಗೆ ಕುದಿಯುವ ಲಾವಾ ರಸವಿದೆ. ಟೆಕ್ಟಾನಿಕ್ ತಟ್ಟೆಗಳು ದೂರ ದೂರ ಸರಿದಾಗ ಅದರಡಿಯಲ್ಲಿ ಕುದಿಯುತ್ತಿರುವ ಲಾವಾ ಹೊರಚಿಮ್ಮಲು ಅಣಿಯಾಗುತ್ತದೆ. ಆ ಸಂದರ್ಭದಲ್ಲಿ ಭೂಮಿಯಡಿ ಒತ್ತಡ ಸೃಷ್ಟಿಯಾಗುತ್ತದೆ. ಕಬ್ಬಿಣ, ನಿಕ್ಕೆಲ್ ಮುಂತಾದ ಲೋಹಗಳಿಂದ ರೂಪಿತವಾಗಿದೆ. ಭೂಮಿಯಡಿಯಿಂದ ಲಾವಾ ಹೊರಕ್ಕೆ ಬರಲು ಕಿಂಡಿಗಳನ್ನು ತಡಕಾಡುತ್ತದೆ. ಈ ಕಿಂಡಿಗಳೇ ಅಗ್ನಿಪರ್ವತಗಳು. ಭೂಮಿಯಡಿ ಹರಿಯುವ ಲಾವಾ ರಸ ಇರುವ ಪದರದ ಉಷ್ಣತೆ ಸೂರ್ಯನ ಹೊರ ಮೈ ಉಷ್ಣತೆಯಷ್ಟಿರಬಹುದೆಂದು ಅಂದಾಜಿಸಲಾಗಿದೆ. ಭಾರತದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿಯೂ ಜ್ವಾಲಾಮುಖೀಯಿದ್ದು, ಅದು ದೇಶದ ಏಕೈಕ ಜ್ವಾಲಾಮುಖೀ ಎಂಬ ಖ್ಯಾತಿಗೆ ಪಾತ್ರವಾಗಿದೆ. ರಿಂಗ್ ಆಫ್ ಫೈರ್
ಪೆಸಿಫಿಕ್ ಮಹಾಸಾಗರವನ್ನು ಶಾಂತ ಸಾಗರ ಎಂದು ಕರೆಯಲಾಗುತ್ತದೆ. ಆದರೆ ಅದರ ತಳದಲ್ಲಿ ಸುಮಾರು 40,000 ಕಿ.ಮೀ ಉದ್ದ ಪ್ರದೇಶವನ್ನು ವಿಜ್ಞಾನಿಗಳು “ರಿಂಗ್ ಆಫ್ ಫೈರ್’ ಎಂದು ಗುರುತಿಸಿದ್ದಾರೆ. ರಿಂಗ್ ಎಂದು ಕರೆದರೂ ಇದು ನಿಜಕ್ಕೂ ಇಂಗ್ಲಿಷ್‌ನ “ಯು’ ಆಕಾರದಲ್ಲಿ ಕಂಡುಬರುತ್ತದೆ. ಜಗತ್ತಿನ ಶೇ.90ರಷ್ಟು ಭೂಕಂಪನಗಳು ಈ ಪ್ರದೇಶದಲ್ಲೇ ಘಟಿಸುವುದು. ಕಳೆದ 10,000 ವರ್ಷಗಳಲ್ಲಿ ಭೂಮಿ ಕಂಡ ಅತ್ಯಂತ ಭೀಕರ ಭೂಕಂಪಗಳು ಆಗಿರುವುದು ಈ ಪ್ರದೇಶದಲ್ಲೇ ಎನ್ನುವುದು ಆತಂಕಕಾರಿ ಸಂಗತಿ. ರಿಂಗ್ ಆಫ್ ಫೈರ್ ಪ್ರದೇಶ, ಅಮೆರಿಕದ ಪಶ್ಚಿಮ ಕರಾವಳಿ, ನ್ಯೂಝಿಲೆಂಡ್, ಫಿಲಿಪೈನ್ಸ್ ದ್ವೀಪ, ರಷ್ಯಾ, ಮೆಕ್ಸಿಕೊ ಏಷ್ಯಾದ ತೀರವನ್ನು ಹಾದು ಹೋಗುತ್ತದೆ.
Related Articles
ಅಮೆರಿಕ- 173
ರಷ್ಯಾ- 166
ಇಂಡೋನೇಷ್ಯಾ- 139
ಐಸ್‌ಲ್ಯಾಂಡ್- 130
ಜಪಾನ್- 112
ಚಿಲಿ- 104
ಇಥಿಯೋಪಿಯಾ- 57
ಪಪುವಾ ನ್ಯೂಗಿನಿಯಾ- 53
ಫಿಲಿಪೈ®Õ…- 50
ಮೆಕ್ಸಿಕೊ- 43
Advertisement
– ಅರ್ಚನಾ ಎಚ್