Advertisement
ಬೆಳಗ್ಗೆ ಸಂತೆ ನಡೆಯುವ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಮುಖಂಡರು, ಪದಾಧಿಕಾರಿಗಳು ಬಟ್ಟೆ ಕೈ ಚೀಲವನ್ನು ಗ್ರಾಹಕರಿಗೆ ವಿತರಿಸುವ ಮೂಲಕ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ವತಃ ಶಾಸಕರೇ ಗ್ರಾಹಕರಿಗೆ ಬಟ್ಟೆಯ ಕೈಚೀಲ ವಿತರಿಸಿದರು.
ಸಂತೆಯಲ್ಲಿ ಗ್ರಾಹಕರು ಪ್ಲಾಸ್ಟಿಕ್ ಚೀಲಗಳಲ್ಲಿ ತರಕಾರಿ ತುಂಬಿಸಿಕೊಂಡು ಹೋಗುತ್ತಿರುವುದನ್ನು ಗಮನಿಸಿದ ಬಿಜೆಪಿ ಕಾರ್ಯಕರ್ತರು ಹಾಗೂ ಶಾಸಕರು, ಅವರಿಗೆಲ್ಲ ಬಟ್ಟೆಯ ಕೈಚೀಲ ವಿತರಿಸಿದರು. ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿದ್ದ ತರಕಾರಿ ವಸ್ತುಗಳನ್ನು ತೆಗೆಸಿ ಬಟ್ಟೆಯ ಚೀಲಗಳಿಗೆ ತುಂಬಿಸಿ ನೀಡಲಾಯಿತು. ಪ್ಲಾಸ್ಟಿಕ್ ಚೀಲಗಳನ್ನು ನಗರಸಭೆ ಸ್ವತ್ಛತಾ ಸಿಬಂದಿಗೆ ಒಪ್ಪಿಸಲಾಯಿತು. ಪ್ಲಾಸ್ಟಿಕ್ ಕೈಚೀಲಗಳನ್ನು ವಿತರಿಸದಂತೆ ಸಂತೆ ವರ್ತಕರಲ್ಲೂ ವಿನಂತಿಸಲಾಯಿತು.
Related Articles
Advertisement
ಪಕ್ಷದ ನಗರ ಮಂಡಲ ಅಧ್ಯಕ್ಷ ಜೀವಂಧರ ಜೈನ್, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ರಾಮದಾಸ್ ಹಾರಾಡಿ ಹಾಗೂ ಗೌರಿ ಬನ್ನೂರು, ಬಿಜೆಪಿ ಮುಖಂಡರಾದ ಚಂದ್ರಶೇಖರ ರಾವ್ ಬಪ್ಪಳಿಗೆ, ಆರ್.ಸಿ. ನಾರಾಯಣ್, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಬಿಜೆಪಿಯ ನಗರಸಭಾ ಸದಸ್ಯರು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ಲಾಸ್ಟಿಕ್ ಮುಕ್ತ ಆಶಯವಾರದ ಸಂತೆಗೆ ಗ್ರಾಹಕರು ಪ್ಲಾಸ್ಟಿಕ್ ಕೈಚೀಲ ತರುತ್ತಾರೆ. ಸಂತೆಯಿಂದ ನಿರ್ಗಮಿಸುವಾಗಲೂ ಪ್ಲಾಸ್ಟಿಕ್ ಚೀಲದಲ್ಲಿ ತರಕಾರಿ ಒಯ್ಯುತ್ತಾರೆ. ಈ ಅಭ್ಯಾಸ ನಿಲ್ಲಬೇಕೆಂಬ ಆಶಯದಿಂದ ಮೊದಲಿಗೆ ಇಲ್ಲಿಯೇ ಚಾಲನೆ ನೀಡಲಾಗಿದೆ. ಮುಂದಿನ ವಾರದ ಸಂತೆ ಸಂಪೂರ್ಣ ಪ್ಲಾಸ್ಟಿಕ್ ಮುಕ್ತವಾಗುವ ಆಶಯವನ್ನು ಹೊಂದಿದ್ದೇವೆ ಎಂದು ಸಂಜೀವ ಮಠಂದೂರು ಹೇಳಿದರು.