Advertisement

3 ದಿನಗಳ ವಾಟರ್‌ ಎಕ್ಸ್‌ಪೋಗೆ ಚಾಲನೆ

06:07 AM Feb 08, 2019 | Team Udayavani |

ಬೆಂಗಳೂರು: ಕಲುಷಿತ ನೀರಿನ ಸಂಸ್ಕರಣೆ ಹಾಗೂ ಮರುಬಳಕೆ ಕುರಿತು ಸಾರ್ವಜನಿಕರು ಹಾಗೂ ಉದ್ದಿಮೆದಾರರಿಗೆ ಜಾಗೃತಿ ಮೂಡಿಸಲು ವಾರ್‌ ಇಂಡಿಯಾ ಕಂಪನಿಯು ನಗರದ ಮ್ಯಾನ್ಫೋ ಕನ್ವೆನನ್‌ ಸೆಂಟರ್‌ನಲ್ಲಿ ಹಮ್ಮಿಕೊಂಡ ಮೂರು ದಿನಗಳ “ವಾಟರ್‌ ಎಕ್ಸ್‌ಪೋ-2019’ಕ್ಕೆ ಗುರುವಾರ ಚಾಲನೆ ದೊರೆಯಿತು.

Advertisement

ಪ್ರದರ್ಶನಕ್ಕೆ ಭೇಟಿ ನೀಡಿದ ಗ್ರಾಹಕರಿಂದಲೇ ಇದಕ್ಕೆ ಚಾಲನೆ ನೀಡಲಾಯಿತು. ದೇಶದ ವಿವಿಧ ರಾಜ್ಯಗಳು ಹಾಗೂ ಜಪಾನ್‌, ಜರ್ಮನಿ, ಚೀನಾ ಸೇರಿದಂತೆ ಹಲವು ದೇಶಗಳ ಕಂಪನಿಗಳು ಭಾಗವಹಿಸಿದ್ದು, ನೀರಿನ ಬಾಟಲಿ ತಯಾರಿಕ ಯಂತ್ರಗಳು, ನೀರು ಶುದ್ಧೀಕರಣದ ಅತ್ಯಾಧುನಿಕ ಯಂತ್ರಗಳು (ಸಣ್ಣ ಪ್ರಮಾಣದಿಂದ ದೊಡ್ಡ ಪ್ರಮಾಣದಲ್ಲಿ ನೀರು ಶುದ್ಧೀಕರಣ), ಕಲುಷಿತ ನೀರಿನ ಸಂಸ್ಕರಣೆಯ ವಿನೂತನ ಮಾದರಿಗಳು, ಮನೆಗಳಲ್ಲಿ ಬಳಕೆಯಲ್ಲಿರುವ ನೀರು ಶುದ್ಧೀಕರಣ ಯಂತ್ರಗಳನ್ನು ಇಲ್ಲಿ ಕಾಣಬಹುದು.

ಹೆಚ್ಚುತ್ತಿರುವ ಜಾಗತಿಕ ತಾಪಮಾನ ಹಾಗೂ ಅನಗತ್ಯ ಪೋಲು ಮಾಡುವುದರಿಂದ ಇತ್ತೀಚಿನ ದಿನಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗುತ್ತಿದೆ. ಇಂಥ ವೇಳೆ ನೀರಿನ ಸದ್ಬಳಕೆ ಮತ್ತು ಮರುಬಳಕೆ ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ನೀರಿನ ಮಹತ್ವವನ್ನು ತಿಳಿಸುವ ಮತ್ತು ತಂತ್ರಜ್ಞಾನ ಆಧಾರಿತ ಪರಿಹಾರೋಪಾಯಗಳ ಕುರಿತು ಪ್ರದರ್ಶನದಲ್ಲಿ ತಿಳಿಸಿಕೊಡಲಾಗುವುದು.

ಈ ಸಂಬಂಧದ ಸುಮಾರು 200ಕ್ಕೂ ಹೆಚ್ಚಿನ ನೀರಿನ ಶುದ್ಧೀಕರಣ ಕಂಪನಿಗಳು ಪ್ರದರ್ಶನದಲ್ಲಿ ಭಾಗಿಯಾಗಿದ್ದು, ಜತೆಗೆ ತಾವು ತಯಾರಿಸಿದ ಉತ್ಪನ್ನಗಳ ಮಾದರಿ ಪ್ರಾತ್ಯಕ್ಷಿಕೆಗಳೂ ಇಲ್ಲಿವೆ. ಪ್ರದರ್ಶನದಲ್ಲಿ ಜಲಸಂಪನ್ಮೂಲ ಸದ್ಬಳಕೆಗೆ ಅಗತ್ಯವಿರುವ ಎಲ್ಲಾ ಮಾಹಿತಿಯೂ ಒಂದೇ ಸೂರಿನಡಿ ಲಭ್ಯವಿದ್ದು, ಇಲ್ಲಿನ ಬಹುತೇಕ ಯಂತ್ರೋಪಕರಣಗಳು ಕೇಂದ್ರಸರ್ಕಾರದ ಮೇಕ್‌ ಇನ್‌ ಇಂಡಿಯಾ ಯೋಜನೆಯಡಿ ಹೊಸದಾಗಿ ತಯಾರಿಸಲಾಗಿದೆ ಎಂದು ಕಂಪನಿಯ ಪ್ರತಿನಿಧಿಗಳು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next