Advertisement

ಪಿಸಿಆರ್‌ಎ ವತಿಯಿಂದ ಸಕ್ಷಮ-2019ಕ್ಕೆ ಚಾಲನೆ

07:26 AM Jan 20, 2019 | Team Udayavani |

ನವದೆಹಲಿ: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ನೇತೃತ್ವದಲ್ಲಿ ಪೆಟ್ರೋಲಿಯಂ ಕನ್ಸರ್ವೇಷನ್‌ ರಿಸರ್ಚ್‌ ಅಸೋಸಿಯೇಷನ್‌ (ಪಿಸಿಆರ್‌ಎ) ಒಂದು ತಿಂಗಳ ಅವಧಿಗೆ ಸಾರ್ವಜನಿಕ ಕೇಂದ್ರಿತ ಮೆಗಾ ಪ್ರಚಾರ “ಸಕ್ಷಮ’ (ಸಂರಕ್ಷಣ್‌ ಕ್ಷಮತ ಮಹೋತ್ಸವ) ಹಮ್ಮಿಕೊಂಡಿದೆ.

Advertisement

ದೆಹಲಿಯಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪ್ರಭಾರ ಕಾರ್ಯದರ್ಶಿ ಮತ್ತು ಹಣಕಾಸು ಸಲಹೆಗಾರ ರಾಜೀವ್‌ ಬನ್ಸಾಲ್‌ ಅವರು ಸಕ್ಷಮ-2019 ಅನ್ನು ಉದ್ಘಾಟಿಸಿ, ಇಂಧನ ಸಂರಕ್ಷಣೆಯ ಪ್ರಾಮುಖ್ಯತೆ ಹಾಗೂ ಸಕ್ಷಮ್‌ ಕೇಂದ್ರೀಕೃತವಾದ ಕಾರ್ಯಕ್ರಮಗಳನ್ನು ವಿವರಿಸಿದರು.

ನಂತರ ಸಕ್ಷಮ ರಾಷ್ಟ್ರೀಯ ಸ್ಪರ್ಧೆ-2018ರ ವಿಜೇತ ಶಾಲಾ ಮಕ್ಕಳಿಗೆ ಸಿಂಗಪೂರ್‌ ಶೈಕ್ಷಣಿಕ ಪ್ರವಾಸ,  ಲ್ಯಾಪ್‌ಟಾಪ್‌ಗ್ಳು, ಟ್ಯಾಬ್ಲೆಟ್‌ಗಳು ಹಾಗೂ ನಗದು ಬಹುಮಾನಗಳನ್ನು ವಿತರಿಸಿದರು.

ಸಕ್ಷಮ-2019ರ ಅಂಗವಾಗಿ ಇಂಧನ ಉಳಿತಾಯದ ಜಾಗೃತಿ ಸಲುವಾಗಿ ದೇಶದ 200 ನಗರಗಳಲ್ಲಿ ಆಯೋಜಿಸಿರುವ ಸೈಕಲ್‌ ಡೇ, ಸೈಕ್ಲಥಾನ್‌, ಮೈಗೌ ಬಗ್ಗೆ ಕಿರು ಚಿತ್ರ ತಯಾರಿಕೆ ಸ್ಪರ್ಧೆ, ವಾಣಿಜ್ಯ ವಾಹನ ಚಾಲಕರಿಗೆ ಕಾರ್ಯಾಗಾರ, ಗೃಹಿಣಿಯರಿಗೆ ಸೆಮಿನಾರ್‌ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಒಎನ್‌ಜಿಸಿ ನಿರ್ದೇಶಕ ಎನ್‌.ಸಿ. ಭಂಡಾರಿ, ಎಂಪಿ ಮತ್ತು ಎನ್‌ಜಿಯ ಜಂಟಿ ಕಾರ್ಯದರ್ಶಿ, ಗೇಲ್‌ ಸಿಎಂಡಿ ಬಿ.ಸಿ.ತ್ರಿಪಾಠಿ, ಐಒಸಿಎಲ್‌ ಅಧ್ಯಕ್ಷ ಸಂಜೀವ್‌ ಸಿಂಗ್‌ ಹಾಗೂ ಇತರರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next