Advertisement

Rapido Cab ಆರಂಭ: ಚಾಲಕರಿಗೆ ಕಮಿಷನ್‌ ಕಾಟವಿಲ್ಲ

10:25 PM Dec 06, 2023 | Team Udayavani |

ನವದೆಹಲಿ: ಬೈಕ್‌ ಟ್ಯಾಕ್ಸಿ ಹಾಗೂ ರಿಕ್ಷಾ ಸೇವೆಗಳ ಮೂಲಕ ಪ್ರಸಿದ್ಧಿ ಹೊಂದಿದ್ದ ರ್ಯಾಪಿಡೊ ಸಂಸ್ಥೆ ಇದೀಗ ಕ್ಯಾಬ್‌ ಸೇವೆಗಳನ್ನು ಆರಂಭಿಸಿರುವುದಾಗಿ ಘೋಷಿಸಿದೆ. ವಿಶೇಷವೆಂದರೆ ಕ್ಯಾಬ್‌ ಚಾಲಕರಿಂದ ಕಮಿಷನ್‌ ಪಡೆಯುವುದಿಲ್ಲವೆಂದೂ ಘೋಷಣೆ ಮಾಡಿದೆ. ದೆಹಲಿ, ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ಸಂಸ್ಥೆಯ ಆರಂಭಿಕ ಕ್ಯಾಬ್‌ ಸೇವೆ ಪ್ರಾರಂಭಗೊಂಡಿದೆ. ರ್ಯಾಪಿಡೊ ಅನ್ವಯ ಸೇವೆ ಒದಗಿಸುವ ಕ್ಯಾಬ್‌ಗಳ ಚಾಲಕರು ಸಂಸ್ಥೆಗೆ ಯಾವುದೇ ಕಮಿಷನ್‌ ನೀಡಬೇಕಾದ ಅಗತ್ಯವಿಲ್ಲ.

Advertisement

ಆದರೆ, ರ್ಯಾಪಿಡೊ ಸಾಫ್ಟ್ವೇರ್‌ ಚಂದಾದಾರಿಕೆಗೆ ಮಾತ್ರ ಹಣ ಪಾವತಿ ಮಾಡಬೇಕಾಗುತ್ತದೆ. ಅಂದರೆ ರ್ಯಾಪಿಡೊ ಅನ್ವಯ ಬುಕಿಂಗ್‌ ಪಡೆದು ಕ್ಯಾಬ್‌ ಚಾಲಕರು ಸುಮಾರು 10,000 ರೂ.ಗಳವರೆಗೆ ಗಳಿಕೆ ಕಾಣುತ್ತಿದ್ದಾರೆ ಎನ್ನುವುದಾದರೆ ಆಗ 500 ರೂ.ಗಳ ಶುಲ್ಕವನ್ನು ಭರಿಸಬೇಕಾಗಬಹುದು ಎಂದು ಸಂಸ್ಥೆ ತಿಳಿಸಿದೆ. ಶೀಘ್ರವೇ ದೇಶಾದ್ಯಂತ ರ್ಯಾಪಿಡೋ ಕ್ಯಾಬ್‌ ಪರಿಚಯಿಸಲು ಸಂಸ್ಥೆ ಉತ್ಸುಕವಾಗಿರುವುದಾಗಿಯೂ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next