Advertisement
ಸಹಕಾರ ನಗರದ ತಮ್ಮ ಕಚೇರಿಯಲ್ಲಿ ರಾಜ್ಯದಲ್ಲಿ “ಮೊದಲ ಮತದಾನ ಅಭಿಯಾನ’ದ ಜವಾಬ್ದಾರಿ ಹೊತ್ತ ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಎಐಸಿಸಿ ಸದಸ್ಯ ಎಂ.ಎಸ್.ರಕ್ಷಾ ರಾಮಯ್ಯ ಸಮ್ಮುಖದಲ್ಲಿ ಸಚಿವರು ಪ್ರಚಾರ ವಾಹನಗಳಿಗೆ ಹಸಿರು ನಿಶಾನೆ ತೋರಿಸಿದರು.
ನಂತರ ಮಾತನಾಡಿದ ರಕ್ಷಾ ರಾಮಯ್ಯ, ಯುವ ಸಮೂಹ ದೇಶದ ಶಕ್ತಿಯಾಗಿದ್ದು, ಮೊದಲ ಮತ ಅಭಿಯಾನ ಯುವ ಜನಾಂಗದ ಆಂದೋಲನವಾಗಲಿದೆ. ಇದರಲ್ಲಿ ಸಂವಾದ, ತಂತ್ರಜ್ಞಾನ ಆಧಾರಿತ ಪ್ರಚಾರ, ಕ್ಯುಆರ್ ಕೋಡ್ ಮೂಲಕ ಮತದಾರರ ಪಟ್ಟಿಗೆ ಹೆಸರು ನೋಂದಣಿ ಮಾಡಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಸರಕು ಸಾಗಾಣೆ ವಾಹನಗಳಲ್ಲಿ ಎಲ್‌ಇಡಿ ವ್ಯವಸ್ಥೆ, ಶಾಲಾ-ಕಾಲೇಜುಗಳು, ಟ್ಯೂಷನ್ ತಾಣಗಳು, ಬಸ್ ನಿಲ್ದಾಣಗಳು, ಮಾಲ್‌ಗಳಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಯೋಜಿಸಿದ್ದ ಯುವ ಮತ ಅಭಿಯಾನಕ್ಕೆ ಅಭೂಪೂರ್ವ ಸ್ಪಂದನೆ ದೊರೆತಿದ್ದು, ಕಾಂಗ್ರೆಸ್ ಶೇ.42 ಯುವ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಬಿಜೆಪಿಯನ್ನು ಹಿಂದಿಕ್ಕಿ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು. ಈ ಸಫಲತೆಯ ನಂತರ ಇದೀಗ “ಪೆಹಲಾ ವೋಟ್’ ಅಭಿಯಾನ ಆರಂಭಿಸಲಾಗಿದೆ. ಇದರಡಿ ಮತದಾನದ ಮಹತ್ವದ ಬಗ್ಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಸಹ ಅರಿವು ಮೂಡಿಸಲಿದ್ದಾರೆ ಎಂದು ಹೇಳಿದರು.