Advertisement

ಕಾರ್ಡಿಯಕ್‌ ಆ್ಯಂಬುಲೆನ್ಸ್‌ ಸೇವೆ ಪ್ರಾರಂಭ

06:49 PM Feb 06, 2021 | Team Udayavani |

ಮುಂಬಯಿ: ಡಹಾಣೂ ರೋಡ್‌ ಪಶ್ಚಿಮದ ಪ್ರತಿಷ್ಠಿತ ಜನತಾ ಸಹಕಾರಿ ಬ್ಯಾಂಕ್‌ನ ನೂತನ ಹಾಗೂ ಸುಸಜ್ಜಿತ ಕಾರ್ಡಿಯಕ್‌ ಆ್ಯಂಬುಲೆನ್ಸ್‌ ಸೇವೆಯನ್ನು ಡಹಾಣೂವಿನ ಉಪ ಜಿಲ್ಲಾಧಿಕಾರಿ, ಸಮಾಜ ಸೇವಕಿ ಆಶಿಮಾ ಮಿತ್ತಲ್‌ ಐಎಎಸ್‌ ಅವರು ಜ. 26ರಂದು ಲೋಕಾರ್ಪಣೆಗೊಳಿಸಿದರು.

Advertisement

ಕಾರ್ಯಕ್ರಮದಲ್ಲಿ ಬ್ಯಾಂಕ್‌ನ ಅಧ್ಯಕ್ಷ ಮಿಹಿರ್‌ ಚಂದ್ರಕಾಂತ್‌ , ಉಪಾಧ್ಯಕ್ಷ ಭಾವೇಶ್‌ ದೇಸಾಯಿ, ಬ್ಯಾಂಕ್‌ನ ಹಿರಿಯ ಪ್ರಬಂಧಕ ಜಯಂತ್‌ ಬಾರಿ, ನಿರ್ದೇಶಕ ಮಂಡಳಿಯ ಸದಸ್ಯರು, ಬ್ಯಾಂಕ್‌ನ ಸಿಬಂದಿ, ಡಹಾಣೂ ಪರಿಸರದ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.

ನೂತನ ಆ್ಯಂಬುಲೆನ್ಸ್‌ ಬಗ್ಗೆ ಮಾಹಿತಿ ನೀಡಿದ ಕಾರ್ಯಾಧ್ಯಕ್ಷ ಮಿಹಿರ್‌  ಅವರು, ಡಹಾಣೂ ಪರಿಸರದಲ್ಲಿ ವಾಸವಾಗಿರುವವರಿಗೆ ತುರ್ತು ಸಂದರ್ಭಗಳಲ್ಲಿ ಈ ರೀತಿಯ ಸುಸಜ್ಜಿತ ಆ್ಯಂಬುಲೆನ್ಸ್‌ ಅನ್ನು ಈ ವರೆಗೆ ಹೊರಗಿನಿಂದ ತರಿಸಬೇಕಾಗಿತ್ತು. ಇದು ಸರಿಯಾದ ಸಮಯಕ್ಕೆ ಸಿಗುತ್ತಿರಲಿಲ್ಲ. ಇದರ ಜತೆಗೆ ಅಧಿಕ ವೆಚ್ಚವೂ ಆಗುತ್ತಿತ್ತು. ತುರ್ತು ಚಿಕಿತ್ಸೆಯ ಸಂದರ್ಭ ಅಗತ್ಯದ ವಿಶೇಷ ಉಪಕರಣನ್ನೊಳ ಗೊಂಡ ಸೇವೆಯ ಆವಶ್ಯಕತೆ ಮನ ಗಂಡು ಈ ನೂತನ ಆ್ಯಂಬುಲೆನ್ಸ್‌ ಆರಂಭಿಸಿದ್ದೇವೆ. ಇತ್ತೀಚೆಗೆ ನಮ್ಮನ್ನ ಗಲಿದ ಬ್ಯಾಂಕ್‌ ಅಧ್ಯಕ್ಷ ದಿ| ರಾಜೇಶ್‌ ಪಾರೇಖ್‌ ಸುಸಜ್ಜಿತ ಆ್ಯಂಬುಲೆನ್ಸ್‌ ಬಗ್ಗೆ ಇಚ್ಛೆ ವ್ಯಕ್ತಪಡಿಸಿ ದ್ದರು. ಅದನ್ನು ಇಂದು ಪೂರ್ಣಗೊಳಿಸಿದ್ದೇವೆ
ಎಂದು ವಿವರಿಸಿದರು.

ಮುಂಬಯಿ – ಸೂರತ್‌ ವರೆಗೆ ಖಾಸಗಿ ಕಾರ್ಡಿಯಕ್‌ ಆ್ಯಂಬುಲೆನ್ಸ್‌ ಗಾಗಿ 20ರಿಂದ 22 ಸಾವಿರ ರೂ. ಗಳಷ್ಟು ವ್ಯಯಿಸಬೇಕಾಗಿದ್ದು, ಡಹಾಣೂ ಜನತಾ ಬ್ಯಾಂಕ್‌ನ ವತಿಯಿಂದ ಕನಿಷ್ಠ ದರ 12 ಸಾವಿರ ರೂ. ಗಳಿಗೆ ಈ ಸೇವೆಯನ್ನು ಒದಗಿಸುವ ಬಗ್ಗೆ ಇದೇ ಸಂದರ್ಭದಲ್ಲಿ ನಾಗರಿಕರಿಗೆ ಘೋಷಿಸಲಾಯಿತು.

ಇದನ್ನೂ ಓದಿ:ಸಿನಿಮಾ ಮನರಂಜನಾ ಮಾಧ್ಯಮ

Advertisement

ಕೋವಿಡ್  ಮಾರ್ಗಸೂಚಿಯಂತೆ ಜರಗಿದ ಈ ಸರಳ ಸಮಾರಂಭ ವನ್ನು ರಿಬ್ಬನ್‌ ಕತ್ತರಿಸುವ ಮೂಲಕ ಪ್ರಾರಂಭಿಸಿದ ಮಿತ್ತಲ್‌, ಸಾರ್ವಜನಿ ಕರ ತುರ್ತು ಆರೋಗ್ಯ ಸೇವೆಯ ಅಗತ್ಯವನ್ನು ಗಮನದಲ್ಲಿರಿಸಿ ಬ್ಯಾಂಕ್‌ ಆರಂಭಗೊಳಿಸಿದ ಈ ಮಾನವೀಯತೆಯ ಸೇವೆ ಶ್ಲಾಘ ನೀಯ. ಮಾನವೀಯ ಕಳಕಳಿ
ಯುಳ್ಳ ಇಂತಹ ಕಾರ್ಯ ಭವಿಷ್ಯದಲ್ಲಿಯೂ ಜರಗುತ್ತಾ ಇರಲಿ ಎಂದು ಶುಭ ಕೋರಿದರು. ಕಾರ್ಡಿಯಕ್‌ ಆ್ಯಂಬುಲೆನ್ಸ್‌ ತುರ್ತು ಸೇವೆಗಾಗಿ ನಾಗರಿಕರು 7249569069 ಅಥವಾ 9022471569 ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next