Advertisement

ಗ್ರಾಪಂನಲ್ಲಿ ತ್ಯಾಜ್ಯ ಸಂಸ್ಕರಣ ಘಟಕ ಆರಂಭ

03:21 PM Sep 01, 2021 | Team Udayavani |

ದೇವನಹಳ್ಳಿ: ಸ್ವಚ್ಛ ಪರಿಸರ ನಿರ್ಮಾಣ ಮಾಡಲು ಜಿಪಂ ವತಿಯಿಂತ ಸ್ವಚ್ಛ ಭಾರತ್‌ ಮಿಷನ್‌ ಅಡಿಯಲ್ಲಿ ಗ್ರಾಪಂಗೆ ಒಂದರಂತೆ ತೆರೆದ ಸಂಸ್ಕರಣ ಘಟಕ ಪ್ರಾರಂಭ ಮಾಡಲು ಮುಂದಾಗಿದೆ.

Advertisement

ಡಸ್ಟ್‌ಬಿನ್‌ ವಿತರಣೆ: ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಕಸ ಸಂಗ್ರಹಕ್ಕೆ ಆಟೋ, ಟಿಪ್ಪರ್‌ ವ್ಯವಸ್ಥೆ ಮಾಡಲಾಗಿದೆ. ಮನೆಮನೆಗಳ ಬಳಿ ತೆರಳಿ
ಒಣಕಸ ಸಂಗ್ರಹಣ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಪಂಚಾಯಿ ವತಿಯಿಂದ ಕಸ ಸಂಗ್ರಹಣೆಗೆ ಡಸ್ಟ್‌ ಬಿನ್‌ ನೀಡಲಾಗಿದೆ.

ಸ್ವಚ್ಛ ಸಂಕೀರ್ಣ ಬ್ರ್ಯಾಂಡಿಂಗ್‌ ಗುರಿ: ಸ್ವಚ್ಛ ಸಂಕೀರ್ಣ ಬ್ರ್ಯಾಂಡಿಂಗ್‌ ಮಾಡುವ ಉದ್ದೇಶದಿಂದ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಉಪಕರಣ, ಕಟ್ಟಡ ಮಾದರಿ ಸೇರಿ ಪ್ರತಿಯೊಂದು ಒಂದೇ ರೂಪದಲ್ಲಿ ನಿರ್ಮಾಣವಾಗಲಿದೆ. ಕಸ ಸಂಗ್ರಹಣ ಮತ್ತು ಸಂಸ್ಕರಣ ಕಾರ್ಯ ಗ್ರಾಮೀಣ ಪ್ರದೇಶಕ್ಕೆ ವಿಸ್ತರಣೆಯಾಗಿದ್ದು, ಸ್ವಚ್ಛ ಗ್ರಾಪಂ ನಿರ್ಮಾಣ ಉದ್ದೇಶಕ್ಕೆ ಗ್ರಾಮ ಸಂಕೀರ್ಣ ಯೋಜನೆ ಸಹಕಾರಿಯಾಗಲಿದೆ.

ಇದನ್ನೂ ಓದಿ:ಇಸ್ಲಾಂ ವಿರೋಧಿಗಳಿಂದ ಕಾಶ್ಮೀರವನ್ನೂ ಸ್ವತಂತ್ರಗೊಳಿಸಿ: ತಾಲಿಬಾನ್ ಗೆ ಅಲ್ ಖೈದಾ

ಒಣಕಸ ಸಂಸ್ಕರಣೆಗೆ ಆದ್ಯತೆ ನೀಡಿದ್ದು ಈಗಾಗಲೇ ಅಣ್ಣೇಶ್ವರ, ಬೆಟ್ಟಕೋಟೆ, ಮಜರಾ ಹೊಸಹಳ್ಳಿ, ಮಣ್ಣೆ, ಸೋಂಪುರ, ಗ್ರಾಪಂ ಸೇರಿ
ಪ್ರಮುಖ ಪಂಚಾಯಿತಿ ವ್ಯಾಪ್ತಿಗಳಲ್ಲಿ ಒಣಕಸ ಸಂಗ್ರಹ ಹಾಗೂ ಸಂಸ್ಕರಣೆ ನಡೆಯುತ್ತಿದೆ. ಜಿಲ್ಲೆ 101 ಗ್ರಾಪಂಗಳ ಪೈಕಿ 42ರಲ್ಲಿ ಕಟ್ಟಡ
ಕಾಮಗಾರಿ ಪೂರ್ಣಗೊಂಡು ತ್ಯಾಜ್ಯ ವಿಲೇವಾರಿ ಸಂಸ್ಕರಣೆ ನಡೆಯುತ್ತಿದೆ. 59 ಗ್ರಾಪಂಗಳಲ್ಲಿ ಜಾಗ ಗುರುತಿಸಲಾಗಿದ್ದು, ಇದರಲ್ಲಿ20 ತ್ಯಾಜ್ಯವಿಲೇವಾರಿ ಘಟಕ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ ಎಂದು ಜಿಪಂ ಅಧಿಕಾರಿಗಳು ಹೇಳುತ್ತಾರೆ. 15ಕ್ಕೂ ಹೆಚ್ಚು ಘಟಕಗಳಲ್ಲಿ ಬರ್ನಿಂಗ್‌ ಯಂತ್ರ ಅಳವಡಿಸಲಾಗಿದೆ. ಕೆಲವೇ ದಿನಗಳಲ್ಲಿ ಪ್ರತಿ ಘಟಕದಲ್ಲೂ ಕಾರ್ಯಾರಂಭ ಮಾಡಲಿದೆ.

Advertisement

ಜಿಲ್ಲೆಯಲ್ಲಿ ಪ್ರಸ್ತುತ ಒಣಕಸ ಸಂಗ್ರಹ ಹಾಗೂ ಸಂಸ್ಕರಣ ಪ್ರಕ್ರಿಯೆಗೆ ಜನರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗಿದೆ. ಪ್ರತಿ ಗ್ರಾಪಂ ವ್ಯಾಪ್ತಿಗಳಲ್ಲಿ
ಸ್ವಚ್ಛತೆಗೆ ಮೊದಲ ಆದ್ಯತೆಯನ್ನು ನೀಡಲಾಗಿದೆ. ಸc ಪರಿಸರ ನಿರ್ಮಾಣ ಮಾಡುವುದೇ ನಮ್ಮ ಉದ್ದೇಶವಾಗಿದೆ. ಕಸಮುಕ್ತಗೊಳಿಸುವ ಉದ್ದೇಶದಿಂದ 101 ಗ್ರಾಪಂಗಳಲ್ಲಿಕಸಸಂಗ್ರಹಣೆ ಹಾಗೂ ಸಂಸ್ಕರಣಘಟಕಗಳು ಪ್ರಾರಂಭವಾಗುತ್ತಿವೆ.
-ಎಂ.ಆರ್‌. ರವಿಕುಮಾರ್‌, ಜಿಪಂ ಸಿ

Advertisement

Udayavani is now on Telegram. Click here to join our channel and stay updated with the latest news.

Next