ಕುಣಿಗಲ್: ತುಮಕೂರು ಜಿಲ್ಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷೆಗೆ ಪೂರಕವಾಗುವಂತೆ ಉಚಿತ ವಿದ್ವತ್ ಕಲಿಕಾ ಮೊಬೈಲ್ ಆ್ಯಪ್ ಅನ್ನು ಶಾಸಕ ಡಾ. ಎಚ್.ಡಿ.ರಂಗನಾಥ್ ಬಿಡುಗಡೆ ಮಾಡಿದರು.
ಪಟ್ಟಣದ ಬಿಜಿಎಸ್ ಶಾಲೆಯಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಅವರು ಹಮ್ಮಿಕೊಂಡಿದ ವಿನೂತನ ವಿದ್ವತ್ ಕಲಿತಾ ಆ್ಯಪ್‌ನ ಉಚಿತ ಸಬ್ ಸ್ಕ್ರಿಪ್ಶನ್‌ಗೆ ಚಾಲನೆ ನೀಡಿದರು.
ನಂತರ ಶಾಸಕ ಡಾ.ರಂಗನಾಥ್ ಮಾತನಾಡಿ, ಕೋವಿಡ್ -19ನಿಂದ ನಗರ ಹಾಗೂ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ದಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಮನಗೊಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ. ಸುರೇಶ್ ವಿದ್ವತ್ ಕಲಿಕಾ ಮೊಬೈಲ್ ಆ್ಯಪ್ ಉಚಿತ ವಾಗಿ ವಿದ್ಯಾರ್ಥಿಗಳಿಗೆ ಕಲ್ಪಿಸಿಕೊಟ್ಟಿದ್ದಾರೆ ಎಂದರು.
ಆಂಗ್ಲ ಮಾಧ್ಯಮದ ಜತೆಗೆ ಕನ್ನಡ, ಭಾಷೆಗೂ ಆದ್ಯತೆ ನೀಡುವ ಆಶಯವನ್ನು ವಿದ್ವತ್ ಆ್ಯಪ್ ಹೊಂದಿದೆ. ಇದರಲ್ಲಿ ಒಂದರಿಂದ ಹತ್ತನೇ ತರಗತಿ ವರೆಗೆ ವಿನ್ಯಾಸಗೊಳಿಸಿದ ಪಠ್ಯ ಕ್ರಮ ಲಭ್ಯವಿದೆ. ಆ್ಯಪ್‌ನಲ್ಲಿ ಪ್ರಶ್ನೋತ್ತರಗಳ ಮೂಲಕ ಪಠ್ಯ ಪುಸ್ತಕದ ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. ಪ್ರಶ್ನೆಕೋಠಿಯಲ್ಲಿ ಹೆಚ್ಚುವರಿ ಪ್ರಶ್ನೋತ್ತರಗಳು ಇವೆ. ಅಭ್ಯಾಸ ಪುಸ್ತಕ ಗಳೂ ಇವೆ,
ಕಲಿಕೆಯ ನಿಖರತೆಯನ್ನು ಖಚಿತಪಡಿಸಿ ಕೊಳ್ಳಲು ಮಾದರಿ ಪ್ರಶ್ನೆ ಪತ್ರಿಕೆಗಳನ್ನೂ ಒದಗಿಸಲಾ ಗಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಇದರ ಸದ್ಬಳಕ್ಕೆ ಮಾಡಿಕೊಂಡು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿಯೇ ಜಿಲ್ಲೆ ಹಾಗೂ ತಾಲೂಕು ನೂರಕ್ಕೆ ನೂರರಷ್ಟು ಫಲಿತಾಂಶ ತರಬೇ ಕೆಂದು ಸಲಹೆ ನೀಡಿದರು. ಬಿಇಒ ತಿಮ್ಮರಾಜು, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀನಿವಾಸ್‌ಮೂರ್ತಿ, ಕಾರ್ಯ ದರ್ಶಿ ಎಸ್.ಎನ್.ನರಸಿಂಹಮೂರ್ತಿ ಇದ್ದರು.