Advertisement
ಕಾವೇರಿ ಕೂಗು (ಕಾವೇರಿ ಕಾಲಿಂಗ್) ಅಭಿಯಾನಕ್ಕೆ ಸೆ.3ರಂದು ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಸದ್ಗುರು ಚಾಲನೆ ನೀಡಲಿದ್ದು, ಈಬಗ್ಗೆ ರೈತರಿಗೆ ಹಾಗೂ ಸಾರ್ವಜನಿಕರಿಗೆ ಮನದಟ್ಟು ಮಾಡಲು ಮೈಸೂರು ಭಾಗದಲ್ಲಿ ಜಾಗೃತಿ ಜಾಥಾ ನಡೆಯಿತು. ಒಟ್ಟು ಎಂಟು ವಾಹನಗಳು ನದಿ ಸಂರಕ್ಷಣೆಯ ಉದ್ದೇಶ ಹೊತ್ತು ನಂಜನಗೂಡು ಮಾರ್ಗ ಮೂಲಕ ಚಾಮರಾಜನಗರಕ್ಕೆ ತೆರಳಿದವು.
Related Articles
Advertisement
ವೈಜ್ಞಾನಿಕ ಬಳಕೆ: ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ವಿಶ್ವ ಮಟ್ಟದಲ್ಲಿ ಇಂದು ಪರಿಸರ ವಿಷಯ ಚರ್ಚೆಯಾಗುತ್ತಿದೆ. ಈ ವೇಳೆ ಜಲ ಮಾಲಿನ್ಯ ಹಾಗೂ ಜಲ ಸಂರಕ್ಷಣೆ ಬಗ್ಗೆ ಈ ಅಭಿಯಾನ ಧ್ವನಿ ಎತ್ತಿರುವುದು ನಿಜಕ್ಕೂ ಶ್ಲಾಘನೀಯ ವಿಚಾರ. ನೀರಿನ ಸಂರಕ್ಷಣೆ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲೂ ಇದೆ. ನೀರನ್ನು ವೈಜ್ಞಾನಿಕವಾಗಿ ಹೇಗೆ ಬಳಕೆ ಮಾಡಿಕೊಳ್ಳಬೇಕು. ಕಾವೇರಿ ಕಣಿವೆ ಭಾಗದಲ್ಲಿ ಮಾಲಿನ್ಯ ಹೇಗೆ ಉಂಟಾಗುತ್ತಿದೆ. ಇವುಗಳ ಬಗ್ಗೆ ಕಾವೇರಿ ಕಾಲಿಂಗ್ ಜಾಗೃತಿ ಮೂಡಿಸಲಿದೆ ಎಂದು ಹೇಳಿದರು.
ಕಾವೇರಿ ಮಾತೆ ರಕ್ಷಣೆ ಜತೆಗೆ ಪರಿಸರ ಸಂರಕ್ಷಣೆಗೆ ಈ ಕಾರ್ಯಕ್ರಮ ಸಹಕಾರಿಯಾಗಲಿದೆ. ರೈತರು ಲಾಭದಾಯಕವಾದ ಅರಣ್ಯ ಕೃಷಿ ಮಾಡುವಂತೆ ಅಭಿಯಾನದ ಮೂಲಕ ಜಾಗೃತಿ ಮೂಡಿಸಲಿದೆ ಎಂದರು. ಕಾರ್ಯಕ್ರಮದಲ್ಲಿ ಜಿಕೆವಿಕೆ ಸಂಶೋಧನಾ ನಿವೃತ್ತ ನಿರ್ದೇಶಕ ಮತ್ತು ಒಣ ಭೂಮಿ ಕೃಷಿ ಮುಖ್ಯಸ್ಥ ಡಾ.ಎಂ.ಎ.ಶಂಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.