Advertisement

ಭಾರತದ ಅತಿ ದೊಡ್ಡ ವಜ್ರ ಪ್ರದರ್ಶನಕ್ಕೆ ಚಾಲನೆ

11:39 AM Apr 28, 2018 | |

ಬೆಂಗಳೂರು: ನಗರದ ಹಲಸೂರು ರಸ್ತೆಯ ಸುಲ್ತಾನ್‌ ಡೈಮೆಂಡ್‌ ಮತ್ತು ಗೋಲ್ಡ್‌ ಶಾಖೆಯಲ್ಲಿ ಶುಕ್ರವಾರ ಆರಂಭವಾದ ದಕ್ಷಿಣ ಭಾರತದ ಅತಿ ದೊಡ್ಡ ವಿಶ್ವ ವಜ್ರ ಪ್ರದರ್ಶನಕ್ಕೆ ಶುಕ್ರವಾರ ಅದ್ಧೂರಿ ಚಾಲನೆ ದೊರೆಯಿತು. ಮೇ 6ರವರೆಗೆ ಪ್ರದರ್ಶನ ನಡೆಯಲಿದೆ. ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ತಾಜ್‌ ಟ್ರೇಡಿಂಗ್‌ ಕಂಪನಿಯ ಮಾಲೀಕ ಐ.ಎಸ್‌.ತಾಜ್‌ದ್ದೀನ್‌ ಪ್ರದರ್ಶನ ಉದ್ಘಾಟಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಎ.ಕೆ.ಉನ್ನಿತನ್‌, 11 ದಿನಗಳ ಕಾಲ ನಡೆಯುವ ಪ್ರದರ್ಶನದಲ್ಲಿ ಫ್ರಾನ್ಸ್‌, ಸಿಂಗಪೂರ, ಯುಎಸ್‌ಎ, ಇಟಲಿ, ಟರ್ಕಿ ಮತ್ತಿತರ ದೇಶಗಳ ವಿಶೇಷ ವಿನ್ಯಾಸದ ವಜ್ರದ ಆಭರಣಗಳ ಜತೆಗೆ ಮುದುವೆ, ಪಾರ್ಟಿಗೆ ಹಾಕುವ ಆಭರಣಗಳೂ ಮಾರಾಟಕ್ಕಿರುತ್ತವೆ. ಖರೀದಿಸುವ ಗ್ರಾಹಕರಿಗೆ  8 ಸಾವಿರ ರೂ.ವರೆಗೂ ರಿಯಾಯಿತಿ ಸಿಗಲಿದೆ ಎಂದು ತಿಳಿಸಿದರು. 

ಉದ್ಯಮಿ ಸುರೇಶ್‌ ರೆಡ್ಡಿ, ಸಿಇಎ ಕ್ಲಬ್‌ ಅಧ್ಯಕ್ಷ ಆರ್‌.ಕೆ.ಎನ್‌.ಪಿಳೈ, ಇರ್ಥರನ್‌ ವೆಲ್‌ನೆಸ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಶರ್ಮಿಲಾ ರವೀಂದರ್‌ ದಾರೇಶ್ವರ್‌, ಹೃದ್ರೋಗ ತಜ್ಞೆ ಡಾ.ರಶ್ಮಿ ಶ್ರೀನಿವಾಸನ್‌, ಉದ್ಯಮಿ ಎನ್‌.ಪಿ.ಭಾರತಿ ಸುರೇಶ್‌ ರೆಡ್ಡಿ,  ಮೈಕ್ರೋಸಾಫ್ಟ್‌ ಕಂಪನಿಯ ಯೋಜನಾ ವ್ಯವಸ್ಥಾಪಕಿ ಪರ್ವಿನ್‌ ತಾಜ್‌ ಮತ್ತು ಡಾ.ಅದರ್ಶ ನಾಯಕ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next