Advertisement

ಲಾೖಲ: ಸಮಾನತೆಗಾಗಿ ದಲಿತರೊಂದಿಗೆ ಸಹಪಂಕ್ತಿ ಭೋಜನ

08:19 PM Jan 26, 2020 | Team Udayavani |

ಬೆಳ್ತಂಗಡಿ: ಸಮಾಜದಲ್ಲಿ ಸಾಕು ಪ್ರಾಣಿಗಳಿಗಿಂತಲೂ ಮನುಷ್ಯನನ್ನು ಕಡೆಗಣಿಸಿರುವುದೇ ಇಂದು ದಲಿತರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗು ತ್ತಿಲ್ಲ ಎಂದು ತುಮಕೂರು ತುರ್ವೇಕೆರೆ ಬೀಕಲ್‌ಕೆರೆ ಅಲ್ಲಮಪ್ರಭು ಮಠದ ಶ್ರೀ ತಿಪ್ಪೇರುದ್ರ ಸ್ವಾಮೀಜಿ ವಿಷಾದಿಸಿದರು.

Advertisement

ದಲಿತ ಹಕ್ಕುಗಳ ಸಮಿತಿ (ಡಿಎಚ್‌ಎಸ್‌) ಹಾಗೂ ಶ್ರಮಶಕ್ತಿ ಸ್ವ ಸಹಾಯ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ರಕ್ಷಣೆಗಾಗಿ ರವಿವಾರ ಲಾೖಲ ಅಂಬೇಡ್ಕರ್‌ ರಸ್ತೆಯ ಪುತ್ರಬೈಲು ಎಂಬಲ್ಲಿ ದಲಿತರೊಂದಿಗೆ ಸಹಪಂಕ್ತಿ ಭೋಜನ ಉದ್ಘಾಟಿಸಿ ಅವರು ಮಾತನಾಡಿದರು.ಸಮಾಜವನ್ನು ಒಗ್ಗೂಡಿಸಲು, ಸಮಾ ನತೆಗಾಗಿ ಹೋರಾಟ ಅನಿವಾರ್ಯ ಎಂದು ಜಾತಿ ತಾರತಮ್ಯ ವಿರುದ್ಧ ಮತ್ತು ಸಂವಿಧಾನ ರಕ್ಷಣೆಗಾಗಿ ಗಣರಾಜ್ಯೋತ್ಸವ ಸಂದರ್ಭ ನಡೆದ ಸಹಪಂಕ್ತಿ ಭೋಜನ ಕಾರ್ಯಕ್ರಮ ದೇಶಕ್ಕೆ ಮಾದರಿಯಾಗಿದೆ ಎಂದರು.

ಮುಖ್ಯ ಅತಿಥಿ ತಹಶೀಲ್ದಾರ್‌ ಗಣಪತಿ ಶಾಸ್ತ್ರಿ ಮಾತನಾಡಿ, ಸಮಾಜದ ಮುಖ್ಯ ವಾಹಿನಿಗೆ ಬರುವ ಅವಕಾಶಗಳನ್ನು ಸರಕಾರ ಪ್ರತಿಯೊಬ್ಬರಿಗೂ ರೂಪಿಸಿದೆ. ನಾವು ಹಿಂದುಳಿದವರು ಎಂಬ ಭಾವನೆ ಬಿಟ್ಟು ಸಮಾಜದಲ್ಲಿ ಅವಕಾಶಗಳನ್ನು ಬಳಸಿಕೊಂಡು ಮುನ್ನೆಲೆಗೆ ಬರಬೇಕು. ಹಿಂದುಳಿದ ಸಮಾಜಕ್ಕೆ ಶಿಕ್ಷಣ ಕಲ್ಪಿಸುವ ಮೂಲಕ ದೌರ್ಜನ್ಯದಿಂದ ಹೊರ ಬರಬರಲು ಸಾಧ್ಯ ಎಂದು ಹೇಳಿದರು.

ಪೂಂಜಾಲಕಟ್ಟೆ ಪ್ರಥಮದರ್ಜೆ ಕಾಲೇಜು ಉಪನ್ಯಾಸಕ ಸುಜೀತ್‌ ಮಾತನಾಡಿ, ಸಂವಿ ಧಾನ ರಚನೆ ಮಾಡಿಕೊಟ್ಟ ದಿನದಂದು ಆಯೋಜಿಸಿದ ಸಹಪಂಕ್ತಿ ಭೋಜನ ಅರ್ಥಪೂರ್ಣ ಎಂದು ಹೇಳಿದರು.

ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘದ‌ ಅಧ್ಯಕ್ಷ ಹರಿದಾಸ್‌ ಎಸ್‌.ಎಂ. ಶುಭಕೋರಿದರು.ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಶೇಖರ್‌ ಎಲ್‌. ಸ್ವಾಗತಿಸಿ ವಂದಿಸಿದರು.

Advertisement

ಸಮಾನತೆಯ ಸಂದೇಶ
ದಲಿತ ಕೊರಗಪ್ಪ ಅವರ ಮನೆ ಯಲ್ಲಿ ಶ್ರೀ ತಿಪ್ಪೇರುದ್ರ ಸ್ವಾಮೀಜಿ, ತಹಶೀಲ್ದಾರ್‌ ಸಹಿತ ಅತಿಥಿಗಳು ಸಹಪಂಕ್ತಿ ಭೋಜನ ಸವಿದು ಸಮಾನತೆಯ ಸಂದೇಶ ಸಾರಿದರು.

Advertisement

Udayavani is now on Telegram. Click here to join our channel and stay updated with the latest news.

Next