ಕುಂಬಳೆ: ತರುಣ ಕಲಾವೃಂದ ಐಲ ಉಪ್ಪಳ ಇದರ ತರುಣ ಸುವರ್ಣ ಪರ್ವದ ಉದ್ಘಾಟನಾ ಕಾರ್ಯಕ್ರಮವು ಐಲ ಶ್ರೀದುರ್ಗಾಪರಮೇಶ್ವರಿ ಕಲಾ ಭವನದಲ್ಲಿ ಜರಗಿತು.ಕಾರ್ಯಕ್ರಮವನ್ನು ಬ್ರಹ್ಮಶ್ರೀ ಉಚ್ಚಿಲ ತ್ತಾಯ ಪದ್ಮನಾಭ ತಂತ್ರಿ ವರ್ಯರು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಐಲ ಕ್ಷೇತ್ರದ ಆಡಳಿತ ಮೊಕೇ¤ಸರ ಕೋಡಿಬೈಲು ನಾರಾಯಣ ಹೆಗ್ಡೆ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಕನ್ನಡ ಚಲನಚಿತ್ರ ನಟ ಸುಂದರರಾಜ್ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ, ಕನ್ನಡ ಚಲನಚಿತ್ರ ನಟ ಕಾಸರಗೋಡು ಚಿನ್ನಾ, ಕ್ಷೇತ್ರ ಮೊಕ್ತೇಸರ ಸಿ.ಎಸ್. ಕೃಷ್ಣಪ್ಪ ಐಲ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು.
ಸಮಾರಂಭದಲ್ಲಿ ನಿವೃತ್ತ ಶಾಲಾ ಮುಖ್ಯ ಶಿಕ್ಷಕ ಬೊಳ್ಳಾರು ನಾರಾಯಣ ಶೆಟ್ಟಿ, ಪ್ರೇಮಲತಾ ಎಸ್., ಶಾರದಾ ಎ., ಪ್ರೇಮಲತಾ ಅಂಬಾರು, ಮೀನಾರು ಬಾಲಕೃಷ್ಣ ಶೆಟ್ಟಿಯವರನ್ನು ಸಮ್ಮಾನಿಸಲಾಯಿತು.
ಅಲ್ಲದೆ ಪರಿಶಿಷ್ಟ ವರ್ಗದ ಪ್ರತಿಭಾನ್ವಿತ ವಿದ್ಯಾರ್ಥಿನಿ ಸರಿತಾ ಬಿ. ನಾರ್ಣಕೋಡಿಯವರಿಗೆ 10 ಸಹಸ್ರ ರೂ. ನಗದು ವಿದ್ಯಾರ್ಥಿ ವೇತನ ಮತ್ತು 5 ಶಾಲೆಗಳ ಆಯ್ದ 50 ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಲಾಯಿತು. ತರುಣ ಸುವರ್ಣ ಪರ್ವ ಶೀರ್ಷಿಕೆಯ ತ್ರಿಭಾಷಾ ಹಾಡು ರಚಿಸಿದ ಹರೀಶ್ ಸುಲಾಯ ಒಡ್ಡಂಬೆಟ್ಟು, ಮಲೆಯಾಳ ಶೀರ್ಷಿಕೆಯ ಹಾಡು ಹಾಡಿದ ರಾಮಚಂದ್ರ ಬೆದ್ರಡ್ಕ ಹಾಗೂ ಲಾಂಚನ ವಿನ್ಯಾಸಗೊಳಿಸಿದ ಪ್ರದೀಪ್ ಬತ್ತೇರಿ ಪ್ರತಾಪನಗರ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಮಲಾಕ್ಷ ಐಲ ಸ್ವಾಗತಿಸಿದರು. ಚಿನ್ನಾ ಐಲ ವಂದಿಸಿದರು.
ಸಮಾರಂಭದ ಬಳಿಕ ದಿ| ಗಿರಿಜ ಭಾಸ್ಕರ ಐಲ ಅವರ ಸಂಸ್ಮರಣಾರ್ಥಯಕ್ಷಧ್ರುವ ಸತೀಶ್ ಶೆಟ್ಟಿ ಪಟ್ಲ ಮತ್ತು ಹೆಸರಾಂತ ಕಲಾವಿದರಿಂದ ಯಕ್ಷಗಾನ ನಾಟ್ಯ ವೈಭವ ರಂಜಿಸಿತು.