Advertisement

ಲೈಂಗಿಕ ಶೋಷಣೆ: 4 ಬಾಲಕಿಯರು ಪಾರು, ನಾಲ್ವರು ಅರೆಸ್ಟ್‌

05:27 PM Jan 31, 2018 | Team Udayavani |

ಮುಂಬಯಿ : ಕಾಫಿ ಶಾಪ್‌ ಗೆ ದಾಳಿ ಮಾಡಿದ ಪೊಲೀಸರು ಪೋಕ್‌ಸೋ ಕಾಯಿದೆಯಡಿ  ನಾಲ್ಕು ಅಪ್ರಾಪ್ತ ವಯಸ್ಸಿನ ಹುಡುಗಿಯರನ್ನು ಲೈಂಗಿಕ ಶೋಷಣೆಯಿಂದ ಪಾರು ಮಾಡಿದರಲ್ಲದೆ ನಾಲ್ವರು ಆರೋಪಿಗಳನ್ನು ಅಲ್ಲಿ ಬಂಧಿಸಿದರು. 

Advertisement

ಮಹಿಳೆಯರ ವಿರುದ್ಧದ ಅಪರಾಧಗಳ ತನಿಖೆ ನಡೆಸುವ ದಾಮಿನಿ ದಳದವರು ಲಾತೂರ್‌ನ ಎರಡು ಕಾಫಿ ಶಾಪ್‌ ಗೆ ದಾಳಿ ಮಾಡಿದರು. ಬಂಧಿಸಲ್ಪಟ್ಟ ನಾಲ್ವರಲ್ಲಿ ಒಬ್ಟಾತನು ಕಾಫಿ ಶಾಪ್‌ ಮಾಲಕನಾಗಿದ್ದು ಉಳಿದ ಮೂವರು ಕಾಫಿ ಶಾಪ್‌ನಲ್ಲಿನ ಕ್ಯೂಬಿಕಲ್‌ಗ‌ಳಲ್ಲಿ ಹುಡುಗಿಯರೊಂದಿಗೆ ಮಜಾ ಮಾಡುತ್ತಿದ್ದವರು ಎಂದು ಗೊತ್ತಾಗಿದೆ. 

ಈ ಕ್ಯೂಬಿಕಲ್‌ಗ‌ಳಲ್ಲಿ ಹುಡುಗಿಯರೊಂದಿಗೆ ಮಜಾ ಮಾಡಲು ಕಾಫಿ ಶಾಪ್‌ ಮಾಲಕ ಒಂದು ತಾಸಿಗೆ 400 ರೂ. ಪ್ರಕಾರ ಚಾರ್ಜ್‌ ಮಾಡುತ್ತಿದ್ದ ಎಂದು ಲಾತೂರ್‌ ನಗರದ ಡಿವೈಎಸ್‌ಪಿ ಶೀಲವಂತ ಧವಳೆ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next