Advertisement

Lateral Entry ನೇಮಕ ಯುಪಿಎ ಕೊಡುಗೆ: ಕಾಂಗ್ರೆಸ್‌ ಗೆ ವೈಷ್ಣವ್‌ ತಿರುಗೇಟು

12:52 AM Aug 20, 2024 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರ ಲ್ಯಾಟ ರಲ್‌ ಎಂಟ್ರಿ ಮೂಲಕ 45 ಪ್ರಮುಖ ಹುದ್ದೆಗಳ ನೇಮಕಕ್ಕೆ ಮುಂದಾಗಿರುವುದು ಈಗ ಆಡಳಿತ ಮತ್ತು ವಿಪಕ್ಷಗಳ ನಡುವೆ ಜಟಾಪಟಿಗೆ ಕಾರಣವಾಗಿದೆ. ಸರಕಾರದ ನಿರ್ಧಾ ರಕ್ಕೆ ಕಾಂಗ್ರೆಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಕೇಂದ್ರ ಸರಕಾರ ತಿರುಗೇಟು ನೀಡಿದ್ದು, “ಲ್ಯಾಟರಲ್‌ ಎಂಟ್ರಿ ಪರಿಕಲ್ಪನೆ ಮೊದಲ ಬಾರಿಗೆ ಜಾರಿಯಾಗಿದ್ದೇ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ’ ಎಂದಿದೆ.

Advertisement

ಈ ಬಗ್ಗೆ ಟ್ವೀಟ್‌ ಮಾಡಿರುವ ಕೇಂದ್ರ ಸಚಿವ ಅಶ್ವಿ‌ನಿ ವೈಷ್ಣವ್‌, “ಮಾಜಿ ಸಚಿವ ವೀರಪ್ಪ ಮೊಲಿ ನೇತೃತ್ವದ 2ನೇ ಆಡಳಿತ ಸುಧಾರಣಾ ಆಯೋಗವೇ ಈ ಬಗ್ಗೆ ಶಿಫಾರಸು ಮಾಡಿತ್ತು. ಆರೋಗ್ಯ, ಕೃಷಿ ಮತ್ತು ರೈತ ಕಲ್ಯಾಣ ಸೇರಿ ಪ್ರಮುಖ ಸಚಿವಾಲಯಗಳಿಗೆ  ಆಯಾ ಕ್ಷೇತ್ರದ ಪರಿಣಿತಿ ಹೊಂದಿರುವವರನ್ನೇ ನೇಮಿಸ ಬೇಕು ಎಂದು ಸಲಹೆ ನೀಡಿತ್ತು’ ಎಂದಿದ್ದಾರೆ.

ಲ್ಯಾಟರಲ್‌ ಎಂಟ್ರಿ ಮೂಲಕ ಪ್ರಮುಖ ಹುದ್ದೆಗಳಿಗೆ ನೇಮಕ ಮಾಡು ವುದು ದಲಿತರು, ಒಬಿಸಿಗಳು ಮತ್ತು ಆದಿವಾಸಿಗಳ ಮೇಲೆ ನೇರ ದಾಳಿ. ಮೀಸಲು ವ್ಯವಸ್ಥೆ ಕಿತ್ತುಕೊಳ್ಳುವುದೇ ಸರಕಾರದ ಉದ್ದೇಶವಾಗಿದೆ.

-ರಾಹುಲ್‌ ಗಾಂಧಿ, ಲೋಕಸಭೆ ವಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next