Advertisement

ತಡ-ಬೇಗ

05:52 PM Dec 09, 2019 | mahesh |

ಶೇಕ್ಸ್‌ಪಿಯರ್‌ ಬಗ್ಗೆ ತಿಳಿದವರಿಗೆಲ್ಲ ಚಾರ್ಲ್ಸ್‌ ಮತ್ತು ಮೇರಿ ಲ್ಯಾಂಬ್‌ (ಲ್ಯಾಮ್‌ ಎಂದೂ ಉಚ್ಚಾರವುಂಟು) ಜೊತೆಗೂಡಿ ಬರೆದ ಟೇಲ್ಸ್‌ ಫ್ರಮ್‌ ಶೇಕ್ಸ್‌ಪಿಯರ್‌ ಕೃತಿಯ ಬಗ್ಗೆ ಗೊತ್ತೇ ಇರುತ್ತದೆ. ಶೇಕ್ಸ್‌ಪಿಯರನ ಪ್ರಸಿದ್ಧ ನಾಟಕಗಳನ್ನು ಕಥಾರೂಪದಲ್ಲಿ ಪರಿಚಯಿಸಿದ ಜಗತ್ಪ್ರಸಿದ್ಧ ಸಂಕಲನ ಕೃತಿ ಅದು. ಅದನ್ನು ಬರೆದ ಚಾರ್ಲ್ಸ್‌ ಮತ್ತು ಮೇರಿ ಅಣ್ಣ-ತಮ್ಮ. ಅಣ್ಣ ಚಾರ್ಲ್ಸ್‌ ಸಾಹಿತ್ಯದ ವಿದ್ಯಾರ್ಥಿಯಾಗಿದ್ದವನು, ಒಳ್ಳೆಯ ಪ್ರಬಂಧಕಾರ, ವಿಫ‌ಲ ನಾಟಕಕಾರ, ಅತ್ಯುತ್ತಮ ಸಾಹಿತ್ಯ ವಿಮರ್ಶಕ. ತಂಗಿಯೂ ಒಳ್ಳೆಯ ಸಾಹಿತ್ಯಾಭಿರುಚಿ ಇದ್ದವಳೇ. ಆದರೆ ಮೇಲೆ ಹೇಳಿದ ಆ ವಿಶ್ವಪ್ರಸಿದ್ಧ ಕೃತಿಯನ್ನು ಬರೆಯುತ್ತಿದ್ದಾಗ ಆಕೆಗೆ ಮೇಲಿಂದ ಮೇಲೆ ಹುಚ್ಚು ಮರುಕಳಿಸುತ್ತಿತ್ತು. ಒಮ್ಮೆಯಂತೂ ಹುಚ್ಚಿನ ಪರಾಕಾಷ್ಠೆ ಮುಟ್ಟಿ ಆಕೆ ತನ್ನ ತಾಯಿಯನ್ನೇ ಚಾಕುವಿನಿಂದ ಕೊಚ್ಚಿ ಕೊಲೆ ಮಾಡಿಬಿಟ್ಟಿದ್ದಳು! ಆಕೆಯನ್ನು ನಂತರ ಅಣ್ಣ ಚಾರ್ಲ್ಸ್‌ನ ಸುಪರ್ದಿ ಮತ್ತು ಕಣ್ಗಾವಲಿಗೆ ಒಪ್ಪಿಸಲಾಯಿತು. ಹಾಗೆ ಗೃಹಬಂಧನ ವಿಧಿಸಿದಾಗ ಆಕೆ ಅವನೊಂದಿಗೆ ಕೂಡಿ ಬರೆದದ್ದು ಮೇಲೆ ಉಲ್ಲೇಖೀಸಿದ ಪುಸ್ತಕ!

Advertisement

ಚಾರ್ಲ್ಸ್‌ ಲ್ಯಾಂಬ್‌ಗ ಆಕೆಯನ್ನು ನೋಡಿಕೊಳ್ಳುವ ಜವಾಬ್ದಾರಿಯಿಂದಲೋ ಏನೋ ನೌಕರಿಯನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ. ಅವನು ನೌಕರಿ ಮಾಡುತ್ತಿದ್ದದ್ದು ಈಸ್ಟ್‌ ಇಂಡಿಯಾ ಕಂಪೆನಿಯಲ್ಲಿ. ಕೆಲಸಕ್ಕೆ ಪ್ರತಿದಿನವೂ ಅವನು ಬರುತ್ತಿದ್ದದ್ದು ಕೊಂಚ ತಡವಾಗಿಯೇ. ಇದನ್ನು ನೋಡಿ ನೋಡಿ ಬೇಸತ್ತ ಮೇಲಧಿಕಾರಿ ಒಮ್ಮೆ ಚಾರ್ಲ್ಸ್‌ ಮೇಲೆ ರೇಗಿದ. ಪ್ರತಿನಿತ್ಯ ನೀನು ಹೀಗೆ ಹೊತ್ತುಮೀರಿ ಬರೋದು ಸರಿಯೇ? ದಬಾಯಿಸಿದ. ಲ್ಯಾಂಬ್‌ ತಣ್ಣಗೆ, ಆದರೆ, ಬೆಳಗ್ಗೆ ತಡವಾಗಿ ಬಂದರೂ ನಾನು ಸಂಜೆ ಬೇಗ ಹೊರಡುತ್ತೇನಲ್ಲ? ಎಂದು ಉತ್ತರಿಸಿದ.

ರೋಹಿತ್‌ ಚಕ್ರತೀರ್ಥ

Advertisement

Udayavani is now on Telegram. Click here to join our channel and stay updated with the latest news.

Next