ಕುಳಗೇರಿ ಕ್ರಾಸ್ : ಕಲುಷಿತ ನೀರು ಸೇವಿಸಿ ವಾಂತಿ-ಭೇದಿಯಿಂದ ಪ್ರತಿದಿನ ತಪ್ಪದೆ ಆಸ್ಪತ್ರೆಗೆ ಅಲೆದಾಡಿದ ಚಿಮ್ಮನಕಟ್ಟಿ ಗ್ರಾಮಸ್ಥರಿಗೆ ಕೊಂಚ ನೆಮ್ಮದಿಯ ಸಿಕ್ಕಂತಾಗಿದೆ. ತಡವಾಗಿ ಎಚ್ಚೆತ್ತ ಗ್ರಾಪಂ ಅಧಿಕಾರಿ ವರ್ಗ ಗ್ರಾಮದಲ್ಲಿ ಸ್ವಚ್ಛತೆಯನ್ನ ಪ್ರಾರಂಭಿಸಿದ್ದಾರೆ.
ಗ್ರಾಮದಲ್ಲಿನ ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಿ ಹೊಸ ಪೈಪ್‌ಲೈನ್ ಮಾಡುವ ಮೂಲಕ ಪ್ರತಿ ಮನೆಗೆ ಹೊಸ ನಲ್ಲಿ ಮೂಲಕ ಜನರಿಗೆ ಶುದ್ಧ ನೀರು ಪೂರೈಸುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮಸ್ಥರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಾರೆ.
ಗ್ರಾಮ ಪಂಚಾಯತಿಯಿಂದ ಶುದ್ದ ನೀರು ಪೂರೈಸಲಾಗುವುದು. ಗ್ರಾಮಸ್ಥರು ಸಹ ನೀರು ಮಿತವಾಗಿ ಬಳಸಬೇಕು. ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಬೇಕು. ಅನಾವಷ್ಯಕ ನೀರು ಬಳಕೆ ಮಾಡಿ ಗಲೀಜು ಮಾಡಬಾರದು ಎಂದು ಗ್ರಾಮಸ್ಥರಿಗೆ ಮನವಿ ಮಾಡಿದ ಗ್ರಾಪಂ ಅಧ್ಯಕ್ಷೆ ಶೋಭಾ ರವಿ ಹೆರಕಲ್, ಮುಂಬರುವ ದಿನಗಳಲ್ಲಿ ಗ್ರಾಪಂ ಅನುದಾನ ಬಳಸಿಕೊಂಡು ಹಂತ ಹಂತವಾಗಿ ಗ್ರಾಮದಲ್ಲಿ ಸಿಸಿ ರಸ್ತೆ ಮಾಡಿಕೊಡಲಾಗುವುದು ಗ್ರಾಪಂ ಯವರೊಂದಿಗೆ ಗ್ರಾಮಸ್ಥರು ಸಹಕರಿಸುವಂತೆ ಕೋರಿದರು.
ಉದಯವಾಣಿ ವರದಿಯಿಂದ ನಮಗೆ ಆರೋಗ್ಯದ ಭಾಗ್ಯ ದೊರೆತಂತಾಯಿತು ಎಂದು ಗ್ರಾಮಸ್ಥರು ಪತ್ರಿಕೆಗೆ ಧನ್ಯವಾದ ತಿಳಿಸಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಟಿ ಎಸ್ ಕುಂಬಾರ, ಸದಸ್ಯರಾದ ರುದ್ರಗೌಡ ಪಾಟೀಲ, ಸಿದ್ದಪ್ಪ ಗಂಜೆಪ್ಪನವರ, ಯಮನಪ್ಪ ಮಾದರ, ಕಸ್ತೂರಿ ಕಾರಿ, ಪಾತಿಮಾ ಬಹದ್ದೂರಖಾನ, ರವಿ ಹೆರಕಲ್, ಮೊದೀನ ನರಗುಂದ, ಮಂಜು ಜಮ್ಮನಕಟ್ಟಿ, ಪೂರ್ಣಾನಂದ ಕಾರಿ, ಮುದಿಯಪ್ಪ ತಳವಾರ, ಕೃಷ್ಣ ವಾಲಿಕಾರ ಸೇರಿದಂತೆ ಗ್ರಾಮಸ್ಥರು ಇದ್ದರು.